/newsfirstlive-kannada/media/media_files/2025/09/03/flower-market03-2025-09-03-19-49-39.jpg)
ಕೆ.ಆರ್.ಮಾರುಕಟ್ಟೆಯ ಹೂವಿನ ಮಾರುಕಟ್ಟೆ
ಹಬ್ಬಕ್ಕೆ ಅಂತಲೋ ಪೂಜೆಗೆ ಅಂತಲೋ ಅಥವಾ ಗೃಹಪ್ರವೇಶ, ಮದುವೆ ಏನೇ ಫಂಕ್ಷನ್ ಇದ್ರೂ ಮೊದಲು ನೆನಪಾಗೋದೇ KR ಮಾರ್ಕೆಟ್ ಅದ್ರಲ್ಲೂ ಹೂ ಬೇಕು ಅಂದ್ರೆ ಚೀಪ್ ಆಗಿ ಸಿಗುತ್ತೆ ಅಂತ ಅಲ್ಲಿಗೆ ಹೋಗ್ತೀವಿ. ಆದ್ರೆ, ಇನ್ಮುಂದೆ ನೀವು ಹೂ ತರೋದಕ್ಕೆ KR ಮಾರ್ಕೆಟ್ಗೆ ಹೋಗಂಗಿಲ್ಲ. ಯಾಕಂದ್ರೆ ಹೂವಿನ ಮಾರ್ಕೆಟ್ ಅತಿ ಶೀಘ್ರದಲ್ಲಿ ಬೇರೆಡೆ ಶಿಫ್ಟ್ ಆಗ್ತಾಯಿದೆ.
ಹಬ್ಬ ಬಂದ್ರೆ ಸಾಕು ಹೇಗಿರುತ್ತೆ ಕೆ ಆರ್ ಮಾರ್ಕೆಟ್ನ ಹೂವಿನ ಬ್ಯುಸ್ನೆಸ್. ಯಾವ ತರದ್ದೇ ಹೂ ಬೇಕು ಅಂದ್ರು ಎಷ್ಟೇ ಹೂ ಬೇಕು ಅಂದ್ರು. ಒಂದೇ ಕಡೆ ವೆರೈಟಿ ವೆರೈಟಿ ಹೂವು ನಿಮಗೆ ಸಿಗುತ್ತೆ. ಬರೀ ಹಬ್ಬ ಅಂತ ಅಲ್ವೇ ಅಲ್ಲಾ ಪ್ರತಿದಿನ ಈ ಹೂವಿನ ಮಾರುಕಟ್ಟೆಯಲ್ಲಿ ರಶು. ಜನ ಜಂಗುಳು ಇದ್ದೇ ಇರುತ್ತೆ. ಅಷ್ಟು ಫೇಮಸ್ KR ಮಾರ್ಕೆಟ್.. ಆದ್ರೆ, ಇಲ್ಲಿ ಇನ್ಮುಂದೆ ಹೂವು ಸಿಗೋದು ಡೌಟ್.
ಹೌದು, ಸಿಲಿಕಾನ್ ಸಿಟಿಯ ಬಹು ಬೇಡಿಕೆಯ ಕೆ ಆರ್ ಮಾರ್ಕೆಟ್ನಿಂದ ಹೂವಿನ ಮಾರ್ಕೆಟ್ ಶಿಫ್ಟ್ ಮಾಡೋದಕ್ಕೆ ಬಿಬಿಎಂಪಿ ಸಿದ್ಧತೆ ಮಾಡ್ಕೊಂಡಿದೆ. ಅಷ್ಟೇ ಅಲ್ಲ, ಈಗಾಗಲೇ ಹೊಸ ಹೂವಿನ ಮಾರುಕಟ್ಟೆಗೆ ಸ್ಥಳ ಕೂಡ ನಿಗದಿಯಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರ್ಕೆಟ್ ಶೀಘ್ರದಲ್ಲೇ ಸ್ಥಳಾಂತರವಾಗಲಿದೆ. ಈ ಬಗ್ಗೆ ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 3 ಗಂಟೆಯಿಂದ ಕೆ ಆರ್ ಮಾರುಕಟ್ಟೆಯ ಸುತ್ತಲಿನ ರಸ್ತೆಗಳಲ್ಲಿ ಹೂ ಮಾರಾಟ ಆರಂಭವಾಗುತ್ತೆ. ಕೆಳ ಅಂತಸ್ತಿನಲ್ಲಿ ಇರುವ ಹೂವಿನ ಮಾರುಕಟ್ಟೆಯಿಂದ ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತೆ. ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತೆ. ಇತ್ತ ಬೆಳಿಗ್ಗೆ 3 ಗಂಟೆಯಿಂದ ಮಾರುಕಟ್ಟೆ ರಸ್ತೆ ಸೇರಿದಂತೆ ಎಸ್ಜೆಪಿ ರಸ್ತೆಯಲ್ಲಿ ಕೂಡ ಹೂ ಮಾರಾಟವಾಗುತ್ತೆ. ಇನ್ನೂ ರೈತರು ತರುವ ಹೂಗಳಿಗೆ ಕೆ. ಆರ್ ಮಾರುಕಟ್ಟೆಯಲ್ಲಿ ಸರಿಯಾದ ಸಂಸ್ಕರಣಾ ಘಟಕದ ಕೊರತೆಯಿದೆ. ಸಂಸ್ಕರಣಾ ಘಟಕ ಇಲ್ಲದೆ ರೈತರು ಬೆಳೆದ ಹೂ ಗಳು ಹಾಳಾಗಿ ನಷ್ಟ ಆಗುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಕೆ ಆರ್ ಮಾರುಕಟ್ಟೆಯ ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರುಕಟ್ಟೆ ಶಿಪ್ಟ್ ಮಾಡಲು ನಿರ್ಧರಿಸಿದೆ.
ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಲಿದೆ. ಸುಮಾರು 400ರಿಂದ 500 ಮಳಿಗೆ ನಿರ್ಮಾಣ ಮಾಡಿ ಹೂವಿನ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಒಟ್ನಲ್ಲಿ ಕಲರ್ ಕಲರ್ ಫ್ಲವರ್ ಬೇಕು ಅಂದ್ರೆ ಕೆ. ಆರ್ ಮಾರ್ಕೆಟ್ಗೆ ಬನ್ನಿ ಅಂತಿದ್ದ ದಶಕಗಳ ಮಾತು ಶೀಫ್ರದಲ್ಲೇ ಬದಲಾಗಲಿದೆ ಅನ್ನೋದು ಸತ್ಯ. ಸರ್ಕಾರದ ಈ ನಿರ್ಧಾರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.