/newsfirstlive-kannada/media/media_files/2025/09/26/bio-degradable-bags-use-2025-09-26-19-51-33.jpg)
ಬಯೋಡಿಗ್ರೇಡಬಲ್ ಬ್ಯಾಗ್ ಬಳಕೆಯಿಂದ ತೊಂದರೆ ಇಲ್ಲ ಎಂದ ಈಶ್ವರ್ ಖಂಡ್ರೆ
ಕಾಂಪೋಸಿಟ್ ಬ್ಯಾಗ್ ಬಳಕೆಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನ್ಯೂಸ್ ಫಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಬಯೋಡಿಗ್ರೇಡಬಲ್ ಅಂದರೇ ಜೈವಿಕವಾಗಿ ವಿಘಟನೆಯಾಗುವುದು ಎಂದರ್ಥ. ಜೈವಿಕ ವಿಘಟನೆ ಆಗುವ ಕ್ಯಾರಿ ಬ್ಯಾಗ್ ಬಳಸಲು ಕೇಂದ್ರ ಸರ್ಕಾರ 2022 ರಲ್ಲಿ ಉಪಯೋಗ ಮಾಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ ಕೊಡಬೇಕು ಎಂದು ಸಣ್ಣ ತಿದ್ದುಪಡಿ ಮಾಡಿ ಆದೇಶ ಮಾಡಿತ್ತು. ನಾವು ಮೊದಲಿನಿಂದಲೂ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿದ್ದೇವೆ. ಈ ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣು ಆಗಲ್ಲ, ನೀರಲ್ಲಿ ಕರಗಲ್ಲ . ಪ್ಲಾಸ್ಟಿಕ್ ಸುಟ್ಟರೆ ಪರಿಸರಕ್ಕೆ ಹಾನಿ ಆಗಲಿದೆ. ಹೀಗಾಗಿ ಬಟ್ಟೆಯ ಚೀಲ ಬಳಸಲು ಹೇಳಿದ್ದೇವೆ. ಜೈವಿಕ ವಿಘಟನೆ ಆಗುವ ಕ್ಯಾರಿ ಬ್ಯಾಗ್ ತಯಾರು ಮಾಡುವವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ. ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಈಗಾಗಲೇ ನಿಷೇಧ ಮಾಡಿದ್ದೇವೆ. ಈ ಬಗ್ಗೆ ಜಾಗೃತಿ ಮೂಢಿಸಲು ಸೂಚನೆ ನೀಡುತ್ತೇನೆ. ಈಗಾಗಲೇ ಕೆಲವು ಪಟ್ಟಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಲು ಹೇಳಿದ್ದೇವೆ. ಜೈವಿಕ ವಿಘಟನೆ ಆಗುವ ಕ್ಯಾರಿ ಬ್ಯಾಗ್‌ನಿಂದ ಯಾವುದೇ ರೀತಿಯ ಸಮಸ್ಯೆ ಆಗಲ್ಲ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ.
ಜೈವಿಕ ವಿಘಟನೆ ಆಗುವ ಕ್ಯಾರಿ ಬ್ಯಾಗ್ ಕರಗಿ ಗೊಬ್ಬರವಾಗುತ್ತಾವೆ. ಜೈವಿಕ ವಿಘಟನೆಯಾಗುವ ಈ ಬ್ಯಾಗ್ ನಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪರಿಸರ ಮತ್ತು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.