Advertisment

ಟಿಟಿಕೆ ಪ್ರೇಸ್ಟೀಜ್ ಕುಕ್ಕರ್ ಕಂಪನಿಯ ಮಾಜಿ ಅಧ್ಯಕ್ಷ ಟಿ.ಟಿ.ಜಗನ್ನಾಥನ್ ವಿಧಿವಶ : ಪ್ರೇಸ್ಟೀಜ್ ಕುಕ್ಕರ್ ಜನಪ್ರಿಯಗೊಳಿಸಿದ್ದು ಜಗನ್ನಾಥನ್‌

ಟಿಟಿಕೆ ಪ್ರೇಸ್ಟೀಜ್ ಕುಕ್ಕರ್ ಕಂಪನಿಯ ಮಾಜಿ ಅಧ್ಯಕ್ಷ ಟಿ.ಟಿ.ಜಗನ್ನಾಥನ್ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಕಂಪನಿಗೆ ಜಗನ್ನಾಥನ್ ಸುದೀರ್ಘ 20 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಕಂಪನಿಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು. ಮನೆ ಮನೆಗೆ ಪ್ರೇಸ್ಟೀಜ್ ಕುಕ್ಕರ್ ತಲುಪುವಂತೆ ಮಾಡಿದ್ದರು.

author-image
Chandramohan
TTK JAGANATHAN NO MORE

ಬೆಂಗಳೂರಿನಲ್ಲಿ ಟಿಟಿಕೆ ಜಗನ್ನಾಥನ್ ವಿಧಿವಶ

Advertisment
  • ಬೆಂಗಳೂರಿನಲ್ಲಿ ಟಿಟಿಕೆ ಜಗನ್ನಾಥನ್ ವಿಧಿವಶ
  • ಟಿಟಿಕೆ ಪ್ರೇಸ್ಟೀಜ್ ಪ್ರೆಶರ್ ಕುಕ್ಕರ್ ಜನಪ್ರಿಯಗೊಳಿಸಿದ್ದು ಜಗನ್ನಾಥನ್‌
  • ಪ್ರೆಸ್ಟೀಜ್ ಕುಕ್ಕರ್ ಕಂಪನಿಗೆ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಜಗನ್ನಾಥನ್‌
  • ನಷ್ಟದಲ್ಲಿದ್ದ ಕಂಪನಿಯನ್ನು ಲಾಭದ ಹಳಿಗೆ ತಂದಿದ್ದ ಜಗನ್ನಾಥನ್‌

ಅಡುಗೆ ಸಲಕರಣೆ ತಯಾರಕ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷ ಟಿ.ಟಿ. ಜಗನ್ನಾಥನ್  ನಿಧನರಾಗಿದ್ದಾರೆ. ಜಗನ್ನಾಥನ್‌ ಅವರು ಟಿಟಿಕೆ ಗ್ರೂಪ್‌ನ ಸ್ಥಾಪಕ ಮತ್ತು ಕೇಂದ್ರದ  ಹಣಕಾಸು ಖಾತೆ ಮಾಜಿ ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರ ಸೋದರಳಿಯ. ಜಗನ್ನಾಥನ್ ‘ದಿ ಕಿಚನ್ ಮೊಗಲ್’ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಜಗನ್ನಾಥನ್‌ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಂಪನಿಯು, ಜಗನ್ನಾಥನ್‌ ಅವರ ಹಠಾತ್ ಮತ್ತು ಅನಿರೀಕ್ಷಿತ ನಿಧನವು ಕಂಪನಿಗೆ ತುಂಬಲಾರದ ನಷ್ಟವಾಗಿದೆ. ಕಂಪನಿಯ ಎಲ್ಲಾ ನಿರ್ದೇಶಕರು ಮತ್ತು ಉದ್ಯೋಗಿಗಳು ಅವರ ಕುಟುಂಬಕ್ಕೆ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದೆ. ಒಟ್ಟಿನಲ್ಲಿ  ಟಿ.ಟಿ. ಜಗನ್ನಾಥನ್ ಅವರು ಅನುಭವಿ ಕೈಗಾರಿಕೋದ್ಯಮಿ, ಟಿಟಿಕೆ ಪ್ರೆಸ್ಟೀಜ್  ಅನ್ನ ಭಾರತದ ಪ್ರಮುಖ ಅಡುಗೆ ಮತ್ತು ಗೃಹೋಪಯೋಗಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
Advertisment
Advertisment
Advertisment