/newsfirstlive-kannada/media/media_files/2025/09/13/hassan-incident-3-2025-09-13-08-01-29.jpg)
ಹಾಸನದ ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಹಾಸನದ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 9 ಮಂದಿಯ ಪೈಕಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು. ತಮ್ಮ ಮನೆಯ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹುಟ್ಟಿದ ಹಬ್ಬದ ದಿನವೇ ಮಸಣ ಸೇರಿದ ಮಿಥುನ್
ಹುಟ್ಟಿದ ಹಬ್ಬದ ದಿನವೇ ಮಿಥುನ್ ಎಂಬ ವಿದ್ಯಾರ್ಥಿ ಮಸಣ ಸೇರಿದ್ದಾನೆ. ನಿನ್ನೆ ಮಿಥುನ್ ಹುಟ್ಟಿದ ಹಬ್ಬ ಇತ್ತು. ಹಾಸ್ಟೆಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಬರ್ತಡೇ ಸೆಲೆಬ್ರೇಸಷನ್ ಕೂಡ ಮಾಡಿದ್ರು. ನಿನ್ನೆ ಕಾಲೇಜಿಗೂ ಹೋಗಿ ಬಂದಿದ್ದ ಮಿಥುನ್, ಅನಂತರ ಹಾಸ್ಟೆಲ್ ಗೆ ಬಂದು ಗಣಪತಿ ವಿಸರ್ಜನೆಗೆ ಹೋಗಿದ್ದ. ಈ ವೇಳೆ ಡಿಜೆ ಮುಗಿಸಿಕೊಂಡು ಅರ್ಕೆಸ್ಟ್ರಾ ನೋಡಲು ಮಿಥುನ್ ಹೋಗಿದ್ದ. ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮಿಥುನ್. ಒಂದೇ ಹಾಸ್ಪೆಲ್ ನಲ್ಲಿದ್ದ ಸುಮಾರು 10 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಅಪಘಾತದಲ್ಲಿ ಗಾಯವಾಗಿದೆ. ಹಾಸ್ಟೆಲ್ ನಿಂದ ಗಣಪತಿ ವಿಸರ್ಜನಗೆ ಈ ಎಲ್ಲ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ಡಿ.ಜೆ. ಹಿಂಬದಿ ನಡೆದು ಕೊಂಡು ಹೋಗ್ತಿದ್ರು. ಅಗ ಏಕಾಏಕಿ ನುಗ್ಗಿದ್ದ ಟ್ರಕ್ ನಿಂದ ತಪ್ಪಿಸಿಕೊಳ್ಳುವಷ್ಟರಲ್ಲೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಗವಿರಂಗನಾಥಪುರ ಗ್ರಾಮದ ಯುವಕ ಮಿಥುನ್ ಟ್ರಕ್ ಹರಿದು ಸಾವನ್ನಪ್ಪಿದ್ದಾನೆ.ಲ ಹೊಸದುರ್ಗ ತಾಲ್ಲೂಕಿನ ಗವಿರಂಗನಾಥಪುರದ ಗ್ರಾಮದ ಮಿಥುನ್ (20) ಇಂಜಿನಿಯರಿಂಗ್ ವಿದ್ಯಾರ್ಥಿ . ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿಥುನ್ ಓದುತ್ತಿದ್ದ. ಮಿಥನ್ ಜೊತೆ ತೆರಳಿದ್ದ ಮೂವರು ಸ್ನೇಹಿತರು ಸಾವನ್ನಪ್ಪಿದ್ದಾರೆ. ಗವಿರಂಗನಾಥಪುರ ಗ್ರಾಮದ ನಾಗರಾಜ್ ಗೆ ಒಬ್ಬನೇ ಮಗ ಮಿಥುನ್.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಈಶ್ವರ್ ಕೂಡ ನಿನ್ನೆ ವೇಗವಾಗಿ ಬಂದ ಟ್ರಕ್ ಹರಿದು ಸಾವನ್ನಪ್ಪಿದ್ದಾನೆ. ಈಶ್ವರ್ ತಮ್ಮ ಕೂಡ ನಿನ್ನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ . ತಮ್ಮನನ್ನ ಉಳಿಸಿ ಅಪಘಾತದಲ್ಲಿ ಈಶ್ವರ್ ಸಾವನ್ನಪ್ಪಿದ್ದಾನೆ . ದಾನಾಯಕಹಳ್ಳಿ ಈಶ್ವರ್ ಸ್ವಗೃಹದಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರದ ವಿರುದ್ಧ ಅಕ್ರೋಶವನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಹೊರಹಾಕುತ್ತಿದ್ದಾರೆ. ಕೃಷಿ ಕೆಲಸ ಹಾಗೂ ಆಟೋ ಓಡಿಸಿಕೊಂಡು ಈಶ್ವರ್ ಪೋಷಕರು ಜೀವನ ಮಾಡುತ್ತಿದ್ದರು. ನಾಲ್ಕು ಹಸುವನ್ನ ಮಾರಿ ಇಂಜಿನಿಯರಿಂಗ್ ಕಾಲೇಜು ಫೀಸ್ ಅನ್ನು ಪೋಷಕರು ಕಟ್ಟಿದ್ದರು.
ಚಿಕ್ಕಮಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸುರೇಶ್ ಕೂಡ ನಿನ್ನೆಯ ಟ್ರಕ್ ಹರಿದು ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮರ್ಲೆ ಸಮೀಪದ ಮಾಣೇನಹಳ್ಳಿ ಗ್ರಾಮದ ಸುರೇಶ್ (೧೯) ಸಾವನ್ನಪ್ಪಿದ್ದಾನೆ. ಮಾಣೇನಹಳ್ಳಿ ಗ್ರಾಮದ ರಮೇಶ್ ಅವರ ಮಗ ಸುರೇಶ್ ಹಾಸನದ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಓದುತ್ತಿದ್ದ.
ಮಾಣೆನಹಳ್ಳಿಯಿಂದ ಇಂಜಿನಿಯರಿಂಗ್ ಗೆ ಸೇರಿದ್ದ ಮೊದಲ ಯುವಕ ಈ ಸುರೇಶ್. ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದ. ತಂದೆ ರಮೇಶ್ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ರು. ಅಣ್ಣನ ವಿದ್ಯಾಭ್ಯಾಸಕ್ಕೆ ತಮ್ಮ ರಾಜು ಕೂಡ ಬೆಂಬಲ ನೀಡಿದ್ದ. ಇದೀಗ ಮಗನನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಕುಟುಂಬಸ್ಥರು ಮುಳುಗಿದ್ದಾರೆ.
ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬಳ್ಳಾರಿಯ ಪ್ರವೀಣ್ ಸಾವನ್ನಪ್ಪಿದ್ದಾನೆ. ಬಳ್ಳಾರಿಯ ನಾಗಲಕೆರೆ ಏರಿಯಾದವನು ಮೃತ ಪ್ರವೀಣ್. ಮನೆ ಕೆಲಸ ಮಾಡಿ ಮಗನಿಗೆ ಇಂಜನಿಯರಿಂಗ್ ಕೋರ್ಸ್ ಅನ್ನು ತಾಯಿ ಸುಶೀಲಾ ಓದಿಸುತ್ತಿದ್ದರು. ಪ್ರವೀಣ್ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನ್ಯೂಸ್ ಫಸ್ಟ್ ಜೊತೆ ಪ್ರವೀಣ ಗೆಳೆಯ ಬಾಲರಾಜ್ ಮಾತನಾಡಿದ್ದಾರೆ. ಪ್ರವೀಣ್ ಮನೆಯಲ್ಲಿ ಬಡತನಯಿತ್ತು. ತಂದೆಯಿಲ್ಲ. ಅಮ್ಮನ ಚನ್ನಾಗಿ ನೋಡ್ಕೊಬೇಕು. ಎರಡು ತಿಂಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಯುತ್ತಿದೆ. ಬೇಗ ಕೆಲಸಕ್ಕೆ ಹೋಗಬೇಕು, ಕುಟುಂಬಕ್ಕೆ ಆಸರೆ ಆಗಬೇಕು ಅಂತ ಹೇಳಿದ್ದ. ಡಿಪ್ಲೊಮಾ ಜೊತೆಗೆ ಓದಿದ್ದೇವೆ. ಆತ್ಮೀಯ ಒಡನಾಡಿಯಾಗಿದ್ದ, ಆಗಾಗ ಜೊತೆಗೆ ಸೇರಿತ್ತಿದ್ದೇವು. ಪ್ರವೀಣಗೆ ಡಿಜೆ ಡಾನ್ಸ್ ಅಂದ್ರೆ ಇಷ್ಟ. ಪ್ರವೀಣಗೆ ದೇವರ ಮೇಲೆ ನಂಬಿಕೆ ಇರಲಿಲ್ಲ. ಜೊತೆಗೆ ಕೇದಾರನಾಥಕ್ಕೆ ಯಾತ್ರೆ ಹೋಗಿದ್ದೇವು. ಕೊರಳಲ್ಲಿ ಹಾಕಿದ ರುದ್ರಾಕ್ಷಿ ಹಾರದಿಂದ ಒಳ್ಳೆದಾಗುತ್ತಿದೆ ಅಂತಾ ಹೇಳಿದ್ದ. ನೀವು ಯಾವುದೇ ಕಾರಣಕ್ಕೂ ಕೊರಳಿನ ಹಾರ ತೆಗೆಯಬೇಡ ಅಂತ ಮಾತಾಡಿದ್ದ ಎಂದು ಪ್ರವೀಣ್ ಸ್ನೇಹಿತ ಬಾಲರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.