ಕಾಡ್ಗಿಚ್ಚಿಗೆ ಬೆಚ್ಚಿದ ಫ್ರಾನ್ಸ್, 42,000 ಎಕರೆ ಭೂಮಿ ಸುಟ್ಟು ಭಸ್ಮ, ಬೆಂಕಿ ನಂದಿಸಲು 2,000 ಜನ ಹರಸಾಹಸ!

ಪ್ರಾನ್ಸ್ ನಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಪ್ರಾನ್ಸ್ ಜನರು ಕಾಡ್ಗಿಚ್ಚಿಗೆ ಬೆಚ್ಚಿಬಿದ್ದಿದ್ದಾರೆ. ಬರೋಬ್ಬರಿ 27 ಸಾವಿರ ಎಕರೆ ಭೂಮಿ ಸುಟ್ಟು ಭಸ್ಮವಾಗಿದೆ. ಬೆಂಕಿಯನ್ನು ನಂದಿಸಲು 2 ಸಾವಿರ ಮಂದಿ ಹರಸಾಹಸಪಡುತ್ತಿದ್ದಾರೆ.

author-image
Chandramohan
FRANCE WILDFIRE02
Advertisment
  • ಪ್ರಾನ್ಸ್ ನಲ್ಲಿ ಕೆಲ ದಿನಗಳಿಂದ ಕಾಡ್ಗಿಚ್ಚು ಹಬ್ಬಿದ್ದು ಜನರು ಬೆಚ್ಚಿಬಿದ್ದಿದ್ದಾರೆ
  • ಕಾಡ್ಗಿಚ್ಚಿನಿಂದ ಬರೋಬ್ಬರಿ 42 ಸಾವಿರ ಎಕರೆ ಭೂ ಪ್ರದೇಶ ಸಂಪೂರ್ಣ ಸುಟ್ಟು ಭಸ್ಮವಾಗಿದೆ
  • ಬೆಂಕಿಯನ್ನು ನಂದಿಸಲು ಪ್ರಾನ್ಸ್ ವಿಮಾನಗಳನ್ನು ಬಳಕೆ ಮಾಡುತ್ತಿದೆ

ಫ್ರಾನ್ಸ್ ದೇಶವು ಕಳೆದ ಕೆಲವು ದಿನಗಳಿಂದ ಅತ್ಯಂತ ಭೀಕರವಾದ ಕಾಡ್ಗಿಚ್ಚಿನಿಂದ ಭಸ್ಮವಾಗುತ್ತಿದೆ. ಈ ದೊಡ್ಡ ಕಾಡ್ಗಿಚ್ಚು, ದಕ್ಷಿಣ ಫ್ರಾನ್ಸ್‌ನ ಆಡ್ ಪ್ರಾಂತ್ಯದಲ್ಲಿ ವ್ಯಾಪಕ ನಾಶವನ್ನುಂಟುಮಾಡಿದ್ದು, ನಿಯಂತ್ರಿಸಲು ಸುಮಾರು 2,000ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಈ ಬೆಂಕಿಯ ಕೆನ್ನಾಲಿಗೆಯಲ್ಲಿ  ಒಬ್ಬ ವ್ಯಕ್ತಿ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಕನಿಷ್ಠ 25 ಮನೆಗಳಿಗೆ ಬೆಂಕಿಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡ್ಗಿಚ್ಚಿನಿಂದ 42 ಸಾವಿರ  ಎಕರೆ ಭೂ ಪ್ರದೇಶ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಗಿಂತ ಅತಿ ದೊಡ್ಡ ಭೂ ಪ್ರದೇಶ ಕಾಡ್ಗಿಚ್ಚಿನಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. 
ಕಳೆದ 75 ವರ್ಷಗಳಲ್ಲೇ ಇದು ಅತಿ ದೊಡ್ಡ ಕಾಡ್ಗಿಚ್ಚು ಎಂದು ಪ್ರಾನ್ಸ್ ದೇಶದ ಅಧಿಕಾರಿಗಳು ಹೇಳಿದ್ದಾರೆ. 

FRANCE WILDFIRE04




ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು!
ಈ ಭೀಕರ ಘಟನೆ ಹಿನ್ನೆಲೆಯಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ದೇಶದ ಎಲ್ಲ ಸಂಪನ್ಮೂಲಗಳನ್ನು ಬೆಂಕಿಯನ್ನು ನಂದಿಸಲು ಸಜ್ಜುಗೊಳಿಸಲಾಗಿದೆ ಎಂದು ಘೋಷಿಸಿದರು. "ಅಗ್ನಿಶಾಮಕ ದಳದವರನ್ನು, ಎಲ್ಲಾ ತುರ್ತು ಸೇವೆಗಳನ್ನೂ ಬೆಂಬಲಿಸಿ. ಜನರು ಸರ್ಕಾರದ ಮೇಲೂ, ಚುನಾಯಿತ ಪ್ರತಿನಿಧಿಗಳ ಮೇಲೂ ನಂಬಿಕೆ ಇರಿಸಿಕೊಳ್ಳಬೇಕು. ಹಾಗಾಗಿ, ಈ ತೀವ್ರ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.

FRANCE WILDFIRE01


ಈ ಬೆಂಕಿಯ ಪರಿಣಾಮವಾಗಿ ಹಲವಾರು ರಸ್ತೆಗಳು ಮುಚ್ಚಲ್ಪಟ್ಟಿದ್ದು, ಸುಮಾರು 2,500 ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ. ಕ್ಯಾಂಪಿಂಗ್ ಮೈದಾನಗಳು ಹಾಗೂ ಕನಿಷ್ಠ ಒಂದು ಹಳ್ಳಿ ಭಾಗಶಃ ಸ್ಥಳಾಂತರಗೊಂಡಿದೆ. ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್ ಬೆರಾವ್ ಮತ್ತು ಆಂತರಿಕ ಸಚಿವ ಬ್ರೂನೋ ರಿಟೇಲ್ ಈ ಪ್ರದೇಶಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, "ನಾನು ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದೇನೆ" ಎಂದು ಸೇಂಟ್-ಲಾರೆಂಟ್-ಡಿ-ಲಾ-ಕ್ಯಾಬ್ರೆರಿಸ್ಸೆ ಎಂಬ ಹಳ್ಳಿಯಿಂದ ಪಲಾಯನ ಮಾಡಿದ ಡೇವಿಡ್ ಸೆರ್ಡಾನ್ ತಿಳಿಸಿದ್ದಾರೆ. "ನನಗೆ ದೈಹಿಕ ಹಾನಿ ಮಾತ್ರ ಆಗಿದೆ, ಆದರೆ ಮನೆ ಇಲ್ಲದಿರುವ ನೋವು ಅತಿ ಹೆಚ್ಚಿನದು" ಎಂದು ಅವರು ಹೇಳಿದರು.

FRANCE WILDFIRE03  ಪ್ರಾನ್ಸ್ ಸರ್ಕಾರವು ಕಾಡ್ಗಿಚ್ಚು ಅನ್ನು ನಂದಿಸಲು ಯುದ್ದ ವಿಮಾನಗಳನ್ನು ಬಳಸುತ್ತಿದೆ. ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳಿಂದ ನೀರು ಅನ್ನು ಹಾಕಿ ಬೆಂಕಿ ನಂದಿಸಲಾಗುತ್ತಿದೆ. ಆದರೂ, ಬೆಂಕಿ ನಿಯಂತ್ರಣಕ್ಕೆ  ಬಂದಿಲ್ಲ. ದಿನೇ ದಿನೇ ಬೆಂಕಿ ಹೆಚ್ಚಿನ ಪ್ರದೇಶವನ್ನು ವ್ಯಾಪಿಸಿಕೊಳ್ಳುತ್ತಿದೆ. 

FRANCE FRANCE WILDFIRE FRANCE PRESIDENT MACRON 42 THOUSANDS ACRES BURNED
Advertisment