/newsfirstlive-kannada/media/media_files/2025/09/11/ss-david-sraddanjali-2025-09-11-20-03-53.jpg)
ನಿರ್ದೇಶಕ ಎಸ್.ಎಸ್.ಡೇವಿಡ್ ಅವರಿಗೆ ಸ್ನೇಹಿತರಿಂದ ಶ್ರದ್ದಾಂಜಲಿ ಸಲ್ಲಿಕೆ
ಎಸ್, ಎಸ್, ಡೇವೀಡ್,ಚಲನಚಿತ್ರ ಬರಹಗಾರರು ಮತ್ತು ನಿರ್ದೇಶಕ.. ಇವರು ದೈಹಿಕವಾಗಿ ನಮ್ಮಿಂದ ದೂರಾಗಿ ಇಂದಿಗೆ ಹನ್ನೊಂದು ದಿನಗಳು.. ಆ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹನ್ನೊಂದನೇ ದಿನದ ಕಾರ್ಯಕ್ರಮವನ್ನು ಸ್ನೇಹಿತರು ಏರ್ಪಡಿಸಿದ್ದರು. ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಸ್ನೇಹಿತರು ಮತ್ತು ಅಭಿಮಾನಿಗಳು ಅವರ ಜೊತೆಗಿನ ಒಡನಾಟವನ್ನು ನೆನೆದು ಭಾವುಕಾರದರು. ಡೇವಿಡ್‌ರವರ ಹೆಸರಲ್ಲಿ ಅನ್ನಸಂತರ್ಪಣೆ ಕೂಡ ನಡೆಸಲಾಯಿತು.
ಪುಣ್ಯ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಚಿತ್ರರಂಗಕ್ಕೆ ಅವರು ಸಲ್ಲಿಸಿದ್ದ ಸೇವೆ, ಸಾಧನೆ ಮತ್ತು ಅವರ ಒಡನಾಟವನ್ನು ಮೆಲಕುಹಾಕಲಾಯಿತು. ಹಾಗೆ ಈ ಸಂಧರ್ಭದಲ್ಲಿ ಇಷ್ಟೆಲ್ಲ ಸ್ನೇಹಿತರು ಮತ್ತು ಅಭಿಮಾನಿ ಬಳಗವನ್ನು ಹೊಂದಿರುವ ಡೇವಿಡ್ ಎಂದು ಅನಾಥರಲ್ಲ, ಸ್ನೇಹಿತರೇ ಅವರ ಕುಟುಂಬ. ಅವರೊಂದಿಗೆ ಅಂದೂ ಇದ್ದೇವು, ಇಂದೂ ನಾವುಗಳು ಇದ್ದೇವೆ ಎಂದು ಅವರ ಒಡನಾಡಿಗಳು ತಮ್ಮ ಹೃದಯದ ಭಾವನೆಗಳನ್ನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಎಸ್.ಎಸ್. ಡೇವಿಡ್ ನಿಧನರಾದಾಗ, ಜೊತೆಯಲ್ಲಿ ಅವರ ಕುಟುಂಬ ವರ್ಗ ಇರಲಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅವರ ಸೋದರಿ , ತಮ್ಮ ಸ್ನೇಹಿತರೊಬ್ಬರಿಗೆ ಡೇವಿಡ್ ಅವರ ಪಾರ್ಥೀವ ಶರೀರವನ್ನು ಪಡೆದು ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸೂಚನೆ ನೀಡಿದ್ದರು. ಅದರಂತೆ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಡೇವಿಡ್ ಅವರು ಅವಿವಾಹಿತರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರ ಸೋದರಿಗೆ ಬೆಂಗಳೂರಿನವರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸ್ನೇಹಿತರಿಗೆ ಆಸ್ಪತ್ರೆಯಿಂದ ಪಾರ್ಥೀವ ಶರೀರ ಪಡೆದು ಅಂತ್ಯಸಂಸ್ಕಾರ ನೆರವೇರಿಸಲು ಸೂಚಿಸಿದ್ದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದಿನ ಈ ಕಾರ್ಯಕ್ರಮವನ್ನು ಸ್ನೇಹಿತರು ಹಾಗೂ ಚಿತ್ರರಂಗದ ಬಂಧುಗಳಾದ ನಂದಿ ಮಹೇಶ್, ಜಯರಾಮೇ ಗೌಡ್ರು, ಶ್ರೀಧರ್ ರಾಮ್, ಉಮೇಶ್ ಬಣಕಾರ್, ಅಂಬಳಿಕೆ ರವಿ ಮತ್ತು ಅವರ ಅಭಿಮಾನಿ ಬಳಗದವರು ಏರ್ಪಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.