/newsfirstlive-kannada/media/media_files/2025/08/15/highway-toll-pass-2025-08-15-17-08-44.jpg)
ಇಂದಿನಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ಜಾರಿ
ಹೆದ್ದಾರಿಯ ವಾರ್ಷಿಕ ಟೋಲ್ ಪಾಸ್ ಇಂದಿನಿಂದ ಜಾರಿಯಾಗಿದೆ. ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ನಿನ್ನೆಯಿಂದಲೇ ಫ್ರಿ ಬುಕ್ಕಿಂಗ್ ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಅನ್ನು ನೀಡಲಾರಂಭಿಸಿದೆ. 3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್ ಪಾಸ್ ಅನ್ನು ವಾಹನ ಮಾಲೀಕರು ಪಡೆದುಕೊಳ್ಳಬಹುದು. ವಾರ್ಷಿಕ ಟೋಲ್ ಪಾಸ್ ಅನ್ನು ಆ್ಯಕ್ಟೀವ್ ಮಾಡಿದ ದಿನದಿಂದ ಒಂದು ವರ್ಷದವರೆಗೂ ಅಥವಾ 200 ಟೋಲ್ ಕ್ರಾಸ್ ಮಾಡುವವರೆಗೂ ಇದಕ್ಕೆ ವ್ಯಾಲಿಡಿಟಿ ಇರುತ್ತೆ. ಇದು ಪ್ರೀಪೇಯ್ಡ್ ವಾರ್ಷಿಕ ಟೋಲ್ ಪಾಸ್ ಆಗಿದೆ. ಹೆದ್ದಾರಿಯ ಟೋಲ್ ಗಳಲ್ಲಿ ವಾಹನ ಪಾಸ್ ಆಗುತ್ತಿದ್ದಂತೆ, ನಿಮ್ಮ ಟೋಲ್ ಪಾಸ್ ಲಿಂಕ್ ಆಗಿರುವ ಫಾಸ್ಟ್ ಟ್ಯಾಗ್ ನಲ್ಲಿ ಎಷ್ಟು ಟೋಲ್ ಪಾಸಾಗಿದ್ದೀರಿ ಎಂಬ ಲೆಕ್ಕ ಜಮೆಯಾಗುತ್ತೆ.
ಖಾಸಗಿ ಕಾರ್, ಜೀಪ್ ಮತ್ತು ವ್ಯಾನ್ ಗಳಿಗೆ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತೆ. ವಾಣಿಜ್ಯ ವಾಹನಗಳಿಗೆ ವಾರ್ಷಿಕ ಟೋಲ್ ಪಾಸ್ ನೀಡುತ್ತಿಲ್ಲ.
ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಎಂದರೇನು?
ಇದು ಫ್ರೀಪೇಯ್ಡ್ ಪಾಸ್. ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ಪಡೆದು ಯಾವುದೇ ಹಣ ನೀಡದೇ ಸಂಚಾರ ಮಾಡಬಹುದು. ಫಾಸ್ಟ್ ಟ್ಯಾಗ್ ಅನ್ನು ಒಂದು ವರ್ಷದವರೆಗೂ ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ಪಡೆದು 200 ಟೋಲ್ ಗಳನ್ನು ಕ್ರಾಸ್ ಮಾಡಿ ಸಂಚರಿಸುವ ಮಿತಿಯನ್ನು ವಿಧಿಸಲಾಗಿದೆ ಅಥವಾ ಟೋಲ್ ಪಾಸ್ ಆ್ಯಕ್ಟೀವ್ ಮಾಡಿದ ದಿನದಿಂದ ಒಂದು ವರ್ಷದವರೆಗೂ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಬಳಸಬಹುದು.
ವಾರ್ಷಿಕ ಪಾಸ್ ಎಲ್ಲಿ ಸಿಗುತ್ತೆ?
ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ರಾಷ್ಟ್ರೀಯ ಹೆದ್ದಾರಿ ಮತ್ತು ನ್ಯಾಷನಲ್ ಎಕ್ಸ್ ಪ್ರೆಸ್ ವೇ ಗಳಲ್ಲಿ ಮಾತ್ರ ವ್ಯಾಲಿಡಿಟಿ ಹೊಂದಿರುತ್ತೆ. ಒಂದು ವೇಳೆ ಹೆದ್ದಾರಿಯು ರಾಜ್ಯ ಹೆದ್ದಾರಿ ಅಥವಾ ನೈಸ್ ನಂಥ ಖಾಸಗಿ ಹೆದ್ದಾರಿಯಾಗಿದ್ದರೇ, ಈ ವಾರ್ಷಿಕ ಟೋಲ್ ಪಾಸ್ ನಿಂದ ಹಣ ನೀಡದೇ ಸಂಚರಿಸಲಾಗಲ್ಲ.
ಈ ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ಪಡೆಯಲು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ರಾಜಮಾರ್ಗ ಯಾತ್ರಾ ಆ್ಯಪ್ ಅನ್ನು ಲಾಂಚ್ ಮಾಡಿದೆ. ಜೊತೆಗೆ ಎನ್ಎಚ್‌ಎಐ ಮತ್ತು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯ ವೆಬ್ ಸೈಟ್ ಗಳಲ್ಲಿ ಇದರ ಲಿಂಕ್ ನೀಡಲಾಗಿದೆ. ಅಲ್ಲಿ ವಾರ್ಷಿಕ ಟೋಲ್ ಅನ್ನು ಆ್ಯಕ್ಟೀವೇಟ್ ಮಾಡಿಕೊಳ್ಳಬಹುದು.
ವಾರ್ಷಿಕ ಟೋಲ್ ಪಾಸ್ ಆ್ಯಕ್ಟಿವೇಟ್ ಮಾಡಿಕೊಳ್ಳೋದು ಹೇಗೆ?
ವಾರ್ಷಿಕ ಟೋಲ್ ಪಾಸ್ ಆ್ಯಕ್ಟೀವೇಟ್ ಮಾಡಿಕೊಳ್ಳಲು ನಿಮ್ಮ ವೆಹಿಕಲ್ ಮತ್ತ್ತು ಫಾಸ್ಟ್ ಟ್ಯಾಗ್ ಅನ್ನು ವೆರಿಫೈ ಮಾಡಬೇಕು. ಇದಾದ ಬಳಿಕ ನೀವು 3 ಸಾವಿರ ರೂಪಾಯಿ ಪಾವತಿಸಬೇಕು. ಹಣ ಪಾವತಿಸಿದ ಬಳಿಕ 2 ಗಂಟೆಗಳಲ್ಲಿ ವಾರ್ಷಿಕ ಫಾಸ್ಟ್ ಟ್ಯಾಗ್ ಟೋಲ್ ಪಾಸ್ ಆ್ಯಕ್ಟೀವೇಟ್ ಆಗುತ್ತೆ. ಆದಾದ ಬಳಿಕ ಮುಂದಿನ ಒಂದು ವರ್ಷದವರೆಗೂ ಟೋಲ್ ಪಾಸ್ ಬಳಸಬಹುದು. ಈ ಬಗ್ಗೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯು ತನ್ನ ಟ್ವೀಟರ್ ಖಾತೆಯಲ್ಲೂ ವಿಡಿಯೋ ಹಂಚಿಕೊಂಡಿದೆ. ಅದನ್ನು ಇಲ್ಲಿ ನೀಡುತ್ತಿದ್ದೇವೆ. ಒಮ್ಮೆ ನೋಡಿದರೇ, ಸುಲಭವಾಗಿ ಅರ್ಥವಾಗುತ್ತೆ.
A step by step guide on how to purchase the FASTag Annual Pass from today.
— MORTHINDIA (@MORTHIndia) August 15, 2025
Enjoy seamless highway travel with the #FASTagAnnualPass — just for ₹3,000 for 1 year or up to 200 toll crossings from the day of activation!
Download Rajmargyatra app or visit https://t.co/SWGO7aWdIT… pic.twitter.com/SqAONqwjuo
ಈಗಾಗಲೇ ಫಾಸ್ಟ್ ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್ ಟ್ಯಾಗ್ ತಗೋಬೇಕಾ?
ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯ ಪ್ರಕಾರ, ಈಗಾಗಲೇ ತಮ್ಮ ಕಾರ್ ಗಳಿಗೆ ಫಾಸ್ಟ್ ಟ್ಯಾಗ್ ಹೊಂದಿರುವವರು, ಹೊಸ ಫಾಸ್ಟ್ ಟ್ಯಾಗ್ ಖರೀದಿಸುವ ಅಗತ್ಯವಿಲ್ಲ. ಹಾಲಿ ಇರುವ ಫಾಸ್ಟ್ ಟ್ಯಾಗ್ ಗೆ ವಾರ್ಷಿಕ ಟೋಲ್ ಪಾಸ್ ಅನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಆದರೇ, ಫಾಸ್ಟ್ ಟ್ಯಾಗ್ ನ ಕೆವೈಸಿ ಅನ್ನು ಮಾಡಿದರೇ, ಮಾತ್ರವೇ ವಾರ್ಷಿಕ ಟೋಲ್ ಪಾಸ್ ಸಿಗಲಿದೆ.
ನಮ್ಮ ದೇಶದಲ್ಲಿ ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ಎಕ್ಸಿಟ್ ಪಾಯಿಂಟ್ ನಲ್ಲಿ ಮಾತ್ರವೇ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೇ, ಈ ಹೆದ್ದಾರಿಯಲ್ಲಿ ಕಾರ್ ಸಂಚರಿಸಿದರೇ, ಅದರ ಸಿಂಗಲ್ ಟ್ರಿಪ್ ಅನ್ನು ಎಂಟ್ರಿ ಮತ್ತು ಪಾಯಿಂಟ್ ಎಂದೇ ಪರಿಗಣಿಸಲಾಗುತ್ತೆ. ಇನ್ನೂ ದೆಹಲಿ- ಚಂಡೀಗಢ ಹೆದ್ದಾರಿಯಲ್ಲಿ ಓಪನ್ ಟೋಲ್ ಪದ್ದತಿ ಇದೆ. ಇಲ್ಲಿ, ಪ್ರತಿಯೊಂದು ಟೋಲ್ ಪಾಸ್ ಮಾಡಿದ ಬಳಿಕ ಅದನ್ನು ಸಪರೇಟ್ ಟ್ರಿಪ್ ಎಂದೇ ಪರಿಗಣಿಸಲಾಗುತ್ತೆ.
ಕಾರ್, ಜೀಪ್, ವ್ಯಾನ್ ಗಳ ಚಾಸಿ ನಂಬರ್ ಬಳಸಿ, ಫಾಸ್ಟ್ ಟ್ಯಾಗ್ ಪಡೆದಿದ್ದರೇ, ಈಗ ವಾರ್ಷಿಕ ಟೋಲ್ ಪಾಸ್ ಪಡೆಯಲಾಗಲ್ಲ. ವಾರ್ಷಿಕ ಟೋಲ್ ಪಾಸ್ ಪಡೆಯಲು ವಾಹನದ ರಿಜಿಸ್ಟ್ರೇಷನ್ ನಂಬರ್ ಅನ್ನು ಅಪ್ ಡೇಟ್ ಮಾಡಬೇಕು. ಜೊತೆಗೆ ವಾಹನ ಮಾಲೀಕರ ಮೊಬೈಲ್ ನಂಬರ್ ಅನ್ನು ಅಪ್ ಡೇಟ್ ಮಾಡಬೇಕು.
ವಾರ್ಷಿಕ ಟೋಲ್ ಪಾಸ್ ಪಡೆಯುವುದರಿಂದ ಕಾರ್, ಜೀಪ್ , ವ್ಯಾನ್ ಮಾಲೀಕರು ವರ್ಷಕ್ಕೆ 5 ರಿಂದ 7 ಸಾವಿರ ರೂಪಾಯಿ ಉಳಿತಾಯ ಮಾಡಬಹುದು. ಟ್ರಿಪ್ ಮಧ್ಯೆ ಫಾಸ್ಟ್ ಟ್ಯಾಗ್ ಅನ್ನು ರೀಚಾರ್ಜ್ ಮಾಡಬೇಕಾದ ಅಗತ್ಯವೇ ಇರಲ್ಲ. ಒಂದು ವರ್ಷದವರೆಗೂ ಫಾಸ್ಟ್ ಟ್ಯಾಗ್ ರೀಚಾರ್ಜ್ ಚಿಂತೆಯೂ ಇರಲ್ಲ.
ಒಂದು ಕಾರ್ ಗೆ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಪಡೆದ ಬಳಿಕ ಅದನ್ನು ಮತ್ತೊಂದು ಕಾರ್ ಗೆ ವರ್ಗಾಯಿಸಲು ಆಗಲ್ಲ. ಒಂದು ವೇಳೆ ಏನಾದರೂ ಬೇರೆ ಕಾರ್ ಗೆ ವರ್ಗಾಯಿಸಲು ಹೋದರೇ, ವಾರ್ಷಿಕ ಟೋಲ್ ಪಾಸ್ ಬ್ಲಾಕ್ ಆಗಲಿದೆ.