ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಮಾನ ಕೊಟ್ಟ ಕೋರ್ಟ್ ನಿನ್ನೆ, ಶಿಕ್ಷೆಯ ಪ್ರಮಾಣದ ಬೇಡಿ ಹಾಕಿದೆ. ಮನೆಗೆಲಸದಾಕೆ ಮೇಲು ಹದ್ದಿನಂತೆ ಮುಕ್ಕಿದ ಕೇಸ್ನಲ್ಲಿ ಜೈಲುವಾಸದಲ್ಲೇ ಜೀವನ ಕಳೆಯುವ ಘನ ಘೋರ ಶಿಕ್ಷೆ ವಿಧಿಸಿದೆ. ಜೊತೆಗೆ 11 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿದೆ. ಈ ಮೂಲಕ ಸಮಾಜದಲ್ಲಿ ಅದೆಷ್ಟೇ ದೊಡ್ಡವರಿದ್ರೂ ಕಾನೂನಿಗಿಂತ ಚಿಕ್ಕವರು ಅನ್ನೋ ಸಂದೇಶ ನೀಡಿದೆ.