/newsfirstlive-kannada/media/media_files/2025/09/10/belagavi-murder-2025-09-10-12-53-21.jpg)
ಹತ್ಯೆಯಾದ ಗೀತಾ ಗವಳಿ ಹಾಗೂ ಟಿಳಕವಾಡಿ ಪೊಲೀಸ್ ಠಾಣೆ
ಬೆಳಗಾವಿಯಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಮಹಿಳೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ಪತಿಯ ಹಿರಿಯ ಸೋದರನೇ ಗೀತಾ ಗವಳಿ ಎಂಬ ಮಹಿಳೆಗೆ ಬರೋಬ್ಬರಿ 20 ಭಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗೀತಾ ಗವಳಿ ಎಂಬ ಮಹಿಳೆಯ ಪತಿ ಕೆಲ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಬೆಳಗಾವಿಯ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಗೀತಾ ಗವಳಿ ವಾಸ ಇದ್ದರು. ಆದರೇ, ಪತಿಗೆ ಸೇರಿದ 40* 12 ಅಡಿ ಅಗಲದ ಜಾಗಕ್ಕಾಗಿ ಪತಿಯ ಸೋದರ ಗಣೇಶ್ ಗವಳಿ ಹಾಗೂ ಗೀತಾ ಗವಳಿ ನಡುವೆ ವಿವಾದ ಶುರುವಾಗಿತ್ತು. ಈ ಜಾಗದ ವಿವಾದದ ಬಗ್ಗೆ ಇಂದು ಬೆಳಿಗ್ಗೆ ಗಣೇಶ್ ಗವಳಿ ಹಾಗೂ ಗೀತಾ ಗವಳಿ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಮಾತಿನ ಚಕಮಕಿ ವೇಳೆಯೇ ಗೀತಾ ಗವಳಿಗೆ ಗಣೇಶ ಗವಳಿ ಬರೋಬ್ಬರಿ 20 ಭಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಟಿಳಕವಾಡಿ ಪೊಲೀಸ್ ಠಾಣೆ ಹಾಗೂ ಆರೋಪಿ ಗಣೇಶ ಗವಳಿ
45 ವರ್ಷ ವಯಸ್ಸಿನ ಗೀತಾ ಗವಳಿಯನ್ನು ಸ್ಥಳೀಯರು ಬೀಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೇ, ಗೀತಾ ಗವಳಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನೂ ಈ ಹತ್ಯೆ ಕೇಸ್ ಆರೋಪಿ ಗಣೇಶ್ ಗವಳಿ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಈ ಹಿಂದೆಯೂ ಅನೇಕ ಆಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ತಮ್ಮನ ಪತ್ನಿ ಗೀತಾ ಗವಳಿಯನ್ನು ಕೊಲೆ ಮಾಡಿ ಗಣೇಶ್ ಗವಳಿ ಎಸ್ಕೇಪ್ ಆಗಿದ್ದಾನೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಗಣೇಶ ಗವಳಿ ವಿರುದ್ಧ ಹತ್ಯೆ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.