ಮತಾಂತರಕ್ಕೆ ಒತ್ತಾಯಿಸಿದ ಅನ್ಯ ಧರ್ಮದ ಪ್ರಿಯಕರ ! ಜೀವ ಕಳೆದುಕೊಂಡ ಯುವತಿ

ಕೇರಳದಲ್ಲಿ ಪ್ರೀತಿಸಿದ ಯುವಕ ಮತ್ತು ಆತನ ಕುಟುಂಬದಿಂದ ಮತಾಂತರದ ಒತ್ತಾಯಕ್ಕೆ ಒಳಗಾದ 23 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ. ಮೃತ ಯುವತಿ ಸೋನಾಗೆ ಮತಾಂತರಕ್ಕೆ ಬಲವಂತ ಮಾಡಲಾಗಿತ್ತು. ಆದರೇ, ಪ್ರಿಯಕರ ಬೇರೊಬ್ಬಳೊಂದಿಗೂ ಸಂಬಂಧ ಹೊಂದಿದ್ದ. ಇದರಿಂದ ನೊಂದು ಯುವತಿ ಸಾವಿಗೆ ಶರಣಾಗಿದ್ದಾಳೆ.

author-image
Chandramohan
kerala sona eldose suicide33
Advertisment
  • ಕೇರಳದ ಎರ್ನಾಕುಲಂನಲ್ಲಿ ಮನ ಕಲುಕುವ ಘಟನೆ
  • ಬಲವಂತದ ಮತಾಂತರಕ್ಕೆ ರಮೀಜ್‌ ನಿಂದ ಒತ್ತಾಯ, ದುಡುಕಿದ ಸೋನಾ
  • ಮೊದಲು ಮತಾಂತರ ಬೇಡ ಎಂದಿದ್ದ ರಮೀಜ್ ನಿಂದ ಬಳಿಕ ಮತಾಂತರಕ್ಕೆ ಒತ್ತಾಯ

ಪ್ರೀತಿಸಿದ ಯುವಕ ಹಾಗೂ ಆತನ ಮನೆಯವರಿಂದ ಮತಾಂತರಕ್ಕೆ ಒಳಗಾಗುವಂತೆ ತೀವ್ರವಾದ ಒತ್ತಡ, ಕಿರುಕುಳದಿಂದ ನೊಂದು 23 ವರ್ಷದ ಯುವತಿಯೊಬ್ಬಳು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂನ ಕ್ರಿಶ್ಚಿಯನ್ ಸಮುದಾಯದ 23 ವರ್ಷದ ಯುವತಿ ಸೋನಾ ಎಲ್ದೋಸ್‌ ಸಾವಿಗೆ ಶರಣಾದ ಯುವತಿ. ಈಕೆ ಕೇರಳದ ಎರ್ನಾಕುಲಂನಲ್ಲಿ ಟಿಟಿಸಿ ಟೀಚರ್ ಟ್ರೈನಿಂಗ್ ತರಬೇತಿ ಪಡೆಯುತ್ತಿದ್ದರು. ಈಕೆ ರಮೀಜ್ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆತನ ಮನೆಯವರು ಹಾಗೂ ಆತ ಮದುವೆಗೂ ಮೊದಲೂ ಧಾರ್ಮಿಕವಾಗಿ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೋನಾಗೆ ಒತ್ತಾಯಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ನೊಂದು ಸೋನಾ ಸಾವಿಗೆ ಶರಣಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೋನಾ ಎಲ್ದೋಸ್ ಪ್ರಿಯಕರ ರಮೀಜ್ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರನಿಂದ ಮತಾಂತರಕ್ಕೆ ಒತ್ತಾಯ!
ರಮೀಜ್ ಮೊಹಮ್ಮದ್‌ನನ್ನು ಪ್ರೀತಿಸುತ್ತಿದ್ದ ಸೋನಾ ಎಲ್ದೊಸ್, ಆತ ಮತಾಂತರ ಮಾಡಿಕೊಳ್ಳದೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ತನ್ನ ಮನೆ ಬಿಟ್ಟು ಹೋದ ಆಕೆ ರಮೀಜ್ ಮೊಹಮ್ಮದ್‌ನ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಆಕೆ ಮನೆಬಿಟ್ಟು ಹೋದ ನಂತರ ಪ್ರಿಯಕರನ ಮನಸ್ಸು ಬದಲಾಗಿದೆ. ಆತ ಹಾಗೂ ಆತನ ಮನೆಯವರು ಆಕೆಗೆ ಮದುವೆಗೂ ಮೊದಲು ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ಇದರಿಂದ ಖಿನ್ನತೆಗೊಳಗಾದ ಆಕೆ ಆಗಸ್ಟ್ 9 ರಂದು ಕರುಕಡಂನಲ್ಲಿರುವ ತನ್ನ ನಿವಾಸದಲ್ಲಿ ಸಾಯಲು ಯತ್ನಿಸಿದ್ದಾಳೆ. ಆದರೆ ಮನೆಯವರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.

kerala sona eldose suicide



ಹಿಂದೊಮ್ಮೆ ಮತಾಂತರವಾಗಲು ಒಪ್ಪಿದ್ದಳು ಸೋನಾ!
ಸಾವಿಗೂ ಮೊದಲು ಆಕೆ ಡೆತ್‌ನೋಟ್‌ ಬರೆದಿಟ್ಟಿದ್ದು, ಕಾನೂನುಬದ್ಧವಾಗಿ ಮದುವೆಯಾಗಲು ರಮೀಜ್ ಮತ್ತುಆತನ ಕುಟುಂಬದವರು ತನ್ನನ್ನು ಧಾರ್ಮಿಕ ಮತಾಂತರಕ್ಕೆ ಒಳಗಾಗುವಂತೆ ಕಿರುಕುಳ ನೀಡುತ್ತಿದ್ದರು ಎಂದು ಬರೆದಿದ್ದಾಳೆ. ಜೊತೆಗೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಡೆತ್‌ನೋಟ್‌ನಲ್ಲಿ ಆಕೆ ಬರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಸೋನಾ ಅವರ ಕುಟುಂಬದ ಪ್ರಕಾರ, ಸೋನಾ ಆರಂಭದಲ್ಲಿ ಧಾರ್ಮಿಕವಾಗಿ ಮತಾಂತರಗೊಂಡು ರಮೀಜ್‌ನನ್ನು  ಮದುವೆಯಾಗಲು ಸಿದ್ಧರಿದ್ದರು. ಆದರೆ ಆರೋಪಿ ಮೊಹಮ್ಮದ್ ರಮೀಜ್ ಆಕೆಗೆ ಮೋಸ ಮಾಡಿದ್ದ. ಆತ ಇನ್ನೊಬ್ಬ ಮಹಿಳೆಯೊಂದಿಗೆ ಸೋನಾಗೆ ಸಿಕ್ಕಿಬಿದ್ದ ನಂತರ ಸೋನಾ ಆತನಿಗಾಗಿ ಧಾರ್ಮಿಕ ಮತಾಂತರವಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಳು. ಸೋನಾಗೆ ವಾಸ್ತವ ಅರಿವಾಗುವ ಮೊದಲು ಕಾಲ ಮಿಂಚಿದ್ದು, ಸೋನಾ ಸಾವಿಗೆ ಶರಣಾಗಿ ಕಾಲನ ಕೈ ಸೇರಿದ್ದಾಳೆ
ಪ್ರೇಯಸಿ ಮನೆಗೆ ಬಂದ ನಂತರ ಮನಸ್ಸು ಬದಲಿಸಿದ ಪ್ರಿಯಕರ
ರಮೀಜ್ ಮೊಹಮ್ಮದ್ ತನ್ನ ಕುಟುಂಬದೊಂದಿಗೆ ನಮ್ಮ ಮನೆಗೆ ಮದುವೆ ನಿಶ್ಚಯಿಸಲು ಬಂದಿದ್ದರು. ಮಗಳ ಧರ್ಮ ಪರಿವರ್ತನೆಯ ಅವರ ಷರತ್ತಿಗೆ ನಾವು ಒಪ್ಪಿಕೊಂಡಿದ್ದೆವು. ಆದರೆ ನಂತರ ಸೋನಾ ಅದನ್ನು ನಿರಾಕರಿಸಿದಳು. ನಂತರ ರಮೀಜ್ ಅವಳನ್ನು ಮತಾಂತರಿಸದೆ ಮದುವೆಯಾಗಲು ಒಪ್ಪಿಕೊಂಡಿದ್ದ ಮತ್ತು ಅವಳು ಕಳೆದ ತಿಂಗಳು ನಮ್ಮ ಮನೆಯಿಂದ ಹೊರಟುಹೋದಳು. ಆದರೆ ಸೋನಾ ಮನೆಗೆ ತಲುಪಿದ ನಂತರ, ಅವನು ಮತ್ತೆ ಅವಳನ್ನು ಮತಾಂತರಕ್ಕೆ ಬಲವಂತಪಡಿಸಿದ್ದ ಮತ್ತು ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ ದೈಹಿಕವಾಗಿ ಕಿರುಕುಳ ನೀಡಿದ್ದ ಎಂದು ಸೋನಾಳ ಸಹೋದರ ಬಾಸಿಲ್ ಹೇಳಿದ್ದಾರೆ. ಆಕೆ ಅನುಭವಿಸಿದ ಕಿರುಕುಳದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಸೋನಾ ಎಲ್ದೋಸ್ ತನ್ನ ಪ್ರಿಯಕರ ರಮೀಜ್ ಜೊತೆ ಖುಷಿಯಾಗಿ ಜೀವನ ಕಳೆಯಲು ಬಯಸಿದ್ದಳು. ಆದರೇ, ಆಕೆಗೆ ಸಿಕ್ಕಿದ್ದು ಬಲವಂತದ ಮತಾಂತರದ ಒತ್ತಡ, ಹಿಂಸೆ, ಕಿರುಕುಳ. ಇದನ್ನು ತಡೆಯಲಾಗದೇ, ಜೀವವನ್ನು ಅಂತ್ಯಗೊಳಿಸುವ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ರಮೀಜ್‌ ನಿಂದ ದೂರವಾಗಿ ಬೇರೊಬ್ಬನ ಜೊತೆ ಜೀವನ ನಡೆಸುವ ಮನಸ್ಸು ಸೋನಾಗೆ ಬಂದಿಲ್ಲ. ಪರಿಣಾಮ ಸೋನಾ ಎಲ್ದೋಸ್  ದಾರುಣ ಅಂತ್ಯ ಕಂಡಿದ್ದಾಳೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Religiours conversion Forced religious conversion kerala Ernakulam SONA ELDHOSE SONA SUICIDE
Advertisment