/newsfirstlive-kannada/media/media_files/2025/09/29/gold-and-silver-rate-2025-09-29-18-31-23.jpg)
ಭಾರತದಲ್ಲಿ ಚಿನ್ನ, ಬೆಳ್ಳಿಯ ಬೆಲೆ ದಾಖಲೆಯ ಏರಿಕೆ
ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸಾರ್ವಕಾಲಿಕ ಏರಿಕೆ ಕಂಡು ಹೊಸ ದಾಖಲೆ ನಿರ್ಮಿಸಿವೆ. ಹೂಡಿಕೆದಾರರಿಗೆ ಚಿನ್ನ ಮತ್ತು ಬೆಳ್ಳಿ ಹಾಟ್ ಫೇವರಿಟ್ ಆಗಿವೆ. ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ. ಡಾಲರ್ ಮೌಲ್ಯ ಕುಸಿತದ ಪರಿಣಾಮ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿವೆ.
ಇಂದು ಬೆಳ್ಳಿಯ ಬೆಲೆ ಕೆಜಿಗೆ 7 ಸಾವಿರ ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ಬರೋಬ್ಬರಿ 1.5 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,500 ರೂಪಾಯಿ ಏರಿಕೆಯಾಗಿದ್ದು, 1,19,500 ರೂಪಾಯಿಗೆ ಏರಿಕೆಯಾಗಿದೆ ಎಂದು ಆಲ್ ಇಂಡಿಯಾ ಸರ್ಫಾರ್ ಅಸೋಸಿಯೇಷನ್ ಹೇಳಿದೆ.
ಭಾರತದಲ್ಲಿ ಚಿನ್ನದ ಬೆಲೆ
ಇನ್ನೂ ಭಾರತದಲ್ಲಿ ಚಿನ್ನದ ಬೆಲೆಯು 24 ಕ್ಯಾರೆಟ್ ಗೋಲ್ಡ್ ಗೆ ಪ್ರತಿ ಗ್ರಾಂಗೆ 11,640 ರೂಪಾಯಿಗೆ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆಯು 1,16,400 ರೂಪಾಯಿ ಆಗಿದೆ. ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 10,670 ರೂಪಾಯಿ ಆಗಿದೆ.
ಭಾರತದಲ್ಲಿ ಬೆಳ್ಳಿ ಬೆಲೆ
ಇನ್ನೂ ಭಾರತದಲ್ಲಿ ಬೆಳ್ಳಿ ಬೆಲೆಯು ಐತಿಹಾಸಿಕ ಮಟ್ಟಕ್ಕೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 150 ರೂಪಾಯಿ ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 1,50,000 ರೂಪಾಯಿ ಆಗಿದೆ. ಎಂಸಿಎಕ್ಸ್ ಸಿಲ್ವರ್ ಪ್ಯೂಚರ್ ಪ್ರತಿ ಕೆ.ಜಿ.ಗೆ 1,43,968 ರೂಪಾಯಿಗೆ ಮಾರಾಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.