/newsfirstlive-kannada/media/media_files/2025/08/19/central-cabinet-meeting-2025-08-19-20-25-48.jpg)
ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಡಿಎ ಏರಿಕೆಗೆ ಒಪ್ಪಿಗೆ
ದಸರಾ ಹಬ್ಬಕ್ಕೂ ಒಂದು ದಿನ ಮೊದಲೇ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರದ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಈ ವರ್ಷದ ಜುಲೈ 1 ರಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಅನ್ನು ಶೇ.3 ರಷ್ಟು ಏರಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಡಿಎ ( ತುಟ್ಟಿಭತ್ಯೆ) ಏರಿಕೆಯ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದರಿಂದ ಕೇಂದ್ರ ಸರ್ಕಾರದ ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ. ದೇಶದಲ್ಲಿ ಹಣದುಬ್ಬರ ಹಾಗೂ ಜೀವನ ವೆಚ್ಚ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗುತ್ತೆ. ಕೇಂದ್ರ ಸರ್ಕಾರದಲ್ಲಿ 50 ಲಕ್ಷ ಹಾಲಿ ಸೇವೆ ಸಲ್ಲಿಸುತ್ತಿರುವ ನೌಕರರಿದ್ದರೇ, ಇನ್ನೂ 50 ಲಕ್ಷ ಪಿಂಚಣಿದಾರರು ಇದ್ದಾರೆ.
ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದ ಮೇಲೆ ಡಿಎ ಏರಿಕೆ ಮಾಡಲಾಗುತ್ತೆ. ವರ್ಷದಲ್ಲಿ 2 ಭಾರಿ ಕೇಂದ್ರ ಸರ್ಕಾರ ಡಿಎ ಏರಿಕೆ ಮಾಡುತ್ತೆ. ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಡಿಎ (ತುಟ್ಟಿಭತ್ಯೆ) ಏರಿಕೆ ಮಾಡಲಾಗುತ್ತೆ.
ಇನ್ನೂ ಈ ವರ್ಷದಲ್ಲಿ ಮಾರ್ಚ್ ತಿಂಗಳಿನಲ್ಲಿ ಶೇ.2 ರಷ್ಟು ಡಿಎ ಏರಿಕೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಉದ್ಯೋಗಿಗಳ ಬೇಸಿಕ್ ಸ್ಯಾಲರಿಯ ಶೇ.53 ರಿಂದ ಶೇ.55 ಕ್ಕೆ ಏರಿಕೆಯನ್ನು ಮಾಡಲಾಗಿತ್ತು. ಈಗ ಶೇ. 3 ರಷ್ಟು ಡಿಎ ಏರಿಕೆ ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಟೇಕ್ ಹೋಮ್ ಸ್ಯಾಲರಿ ಮತ್ತು ನಿವೃತ್ತ ನೌಕರರ ಪಿಂಚಣಿ ಮೊತ್ತ ಏರಿಕೆಯಾಗಲಿದೆ.
ಅನೇಕ ತಿಂಗಳುಗಳಿಂದ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಏರಿಕೆಯ ನಿರೀಕ್ಷೆಯಲ್ಲಿದ್ದರು. ಎಷ್ಟು ಮೊತ್ತದ ಡಿಎ ಏರಿಕೆಯಾಗಬಹುದೆಂಬ ಲೆಕ್ಕಾಚಾರದಲ್ಲಿದ್ದರು. ಕೊನೆಗೂ ಕೇಂದ್ರ ಸರ್ಕಾರದ ದಸರಾ ಹಬ್ಬದ ವೇಳೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಹಬ್ಬದ ಸಂಭ್ರಮ ಡಬಲ್ ಆಗುವಂತೆ ಮಾಡಿದೆ.
ದೀಪಾವಳಿ ಹಬ್ಬದ ವೇಳೆಗೆ ಡಿಎ ಏರಿಕೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕೂ ಮುನ್ನವೇ ದಸರಾ ಹಬ್ಬಕ್ಕೆ ಡಿಎ ಏರಿಕೆ ಮಾಡಿ ಕೇಂದ್ರದ ಕ್ಯಾಬಿನೆಟ್ ಇಂದು ತೀರ
ಇನ್ನೂ 8ನೇ ವೇತನ ಆಯೋಗವು ಆದಷ್ಟು ಬೇಗ ರಚನೆಯಾಗಲಿ ಎಂದು ಕೇಂದ್ರ ಸರ್ಕಾರಿ ನೌಕರರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಘೋಷಿಸಿದೆ. ಆದರೇ, ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸುವುದು ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.