/newsfirstlive-kannada/media/post_attachments/wp-content/uploads/2025/04/Gold-rate.jpg)
ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಹಬ್ಬ ಹರಿದಿನ, ಮದುವೆ ಹೀಗೆ ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
ಇಷ್ಟು ದಿನ ಚಿನ್ನ ಭಾರೀ ದುಬಾರಿ ಆಗಿದ್ದರಿಂದ ಖರೀದಿ ಮಾಡಲು ಜನರು ಕೊಂಚ ಯೋಚನೆ ಮಾಡುತ್ತಿದ್ದರು. ಸತತ ಬೆಲೆಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಕೆಲ ಗ್ರಾಹಕರಂತೂ ನಮಗೆ ಚಿನ್ನ ಬೇಡವೇ ಬೇಡ ಅಂತ ದೂರ ಹೋಗುತ್ತಿದ್ದರು. ಆದರೆ ಇದೀಗ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇದರಿಂದ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರು ಫುಲ್ ಖುಷ್ ಆಗಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆಯ ಇಳಿಕೆಯಾಗುತ್ತಲೇ ಇದೆ. ಇದಕ್ಕೆ ಹಲವು ಜಾಗತಿಕ ಮತ್ತು ದೇಶೀಯ ಕಾರಣಗಳು ಕಾರಣವಾಗಿವೆ. ಬೆಳ್ಳಿ ದರವು ಕೆ.ಜಿಗೆ ₹2,500 ಇಳಿಕೆಯಾಗಿ, ₹1,12,900ರಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರವು 400 ಕಡಿಮೆಯಾಗಿ, ₹99,810 ಆಗಿದೆ.
ಚಿನ್ನ ಬೆಲೆ ಎಷ್ಟು..?
24 ಕ್ಯಾರೆಟ್ 10 ಗ್ರಾಂ ಚಿನ್ನ: ₹99,810
ಬೆಳ್ಳಿ ಬೆಲೆ ಎಷ್ಟು..?
ಬೆಳ್ಳಿ 1ಕೆ.ಜಿಗೆ : ₹1,12,900
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ