/newsfirstlive-kannada/media/media_files/2025/09/17/union-govt-employees-da-hike02-2025-09-17-14-55-19.jpg)
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ಪ್ರಕಟಣೆಗಾಗಿ ಹಲವು ದಿನಗಳಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಸಂಬಂಧ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಲಕ್ಷಾಂತರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ಕೊಟ್ಟಿದೆ.
ಕೇಂದ್ರ ಸರ್ಕಾರ ಕೊಟ್ಟ ಗುಡ್ನ್ಯೂಸ್ ಏನು!
ದೀಪಾವಳಿಗೂ ಮುನ್ನವೇ ಡಿಎ ಹೆಚ್ಚಳ ಘೋಷಣೆ ಮಾಡಲಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಹೊಸ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಪ್ರಕಾರ, ಕೇಂದ್ರ ನೌಕರರ ಡಿಎ 55% ನಿಂದ 58% ಗೆ ಏರಿಕೆಯಾಗಲಿದೆ. ಈ ಏರಿಕೆ ಜುಲೈ 1, 2025 ರಿಂದಲೇ ಜಾರಿಗೆ ಬರಲಿದೆ ಅಂತ ಹೇಳಲಾಗ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರಕಟಣೆ ಇನ್ನೂ ಬರಬೇಕಿದ್ದು, ಇದರ ನಂತರ ಡಿಎ ಹೆಚ್ಚಳದ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಭಾರತದಲ್ಲಿ 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಇದ್ದಾರೆ. ಇವರು ಪ್ರತಿ ಹಬ್ಬದ ಸೀಸನ್ನಲ್ಲೂ 'ಡಿಎ ಏರಿಕೆಗಾಗಿ ಎದುರು ನೋಡುತ್ತಾರೆ. ನಿಜ ಹೇಳಬೇಕು ಅಂದ್ರೆ ಎಲ್ಲರ ಬಾಯಲ್ಲೂ ಇದೇ ಪ್ರಶ್ನೆ ಕೇಳಿ ಬರುತ್ತೆ. ಇದಕ್ಕೆಲ್ಲಾ ಕಾರಣ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣ, ಮನೆ ಬಜೆಟ್, ಭವಿಷ್ಯದ ಪ್ಲಾನಿಂಗ್. ದಿನೇ ದಿನೆ ದುಬಾರಿ ಆಗ್ತಿರೋ ದುನಿಯಾದಲ್ಲಿ, ಸರ್ಕಾರ ಡಿಎ ಏರಿಕೆ ಮಾಡಿದ್ರೆ ಮಾತ್ರ ನೌಕರರಿಗೆ ನಿರಾಳತೆ ಸಿಗುತ್ತೆ.
ಡಿಎ ಶೇ. 3ರಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗಿದ್ರೂ ಸರ್ಕಾರ ಇದನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಮೂಲಗಳ ಪ್ರಕಾರ ದೀಪಾವಳಿಗೂ ಮುನ್ನ ಈ ಘೋಷಣೆ ಹೊರಬೀಳಲಿದೆ. ಸರ್ಕಾರದ ಈ ಘೋಷಣೆಯಿಂದ 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ ಈ ಬಗ್ಗೆ ಅಕ್ಟೋಬರ್‌ನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ. ಈ ಏರಿಕೆ ಜುಲೈ 1 ರಿಂದ ಜಾರಿಗೆ ಬರೋದ್ರಿಂದ, ನೌಕರರು ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಬಾಕಿ ಹಣ ಒಂದೇ ಬಾರಿಗೆ ಪಡೆಯುತ್ತಾರೆ. ಡಿಎ 58% ಅಂತ ನಿಗದಿಪಡಿಸಲಾಗಿದೆ. ಉದಾಹರಣೆಗೆ 18,000 ಮೂಲ ವೇತನ ಇರೋರಿಗೆ ತಿಂಗಳಿಗೆ 540 ರೂಪಾಯಿ ಹೆಚ್ಚುವರಿ ಆದಾಯದಂತೆ, ವರ್ಷಕ್ಕೆ ರೂ.6,480 ಏರಿಕೆ ಸಿಗಲಿದೆ.
ಇದು ಹಬ್ಬದ ಸೀಸನ್‌ನಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿ ಉಡುಗೊರೆ ಆಗಿ ಹೊರಬರೋದು ಬಹುತೇಕ ಫಿಕ್ಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.