/newsfirstlive-kannada/media/media_files/2025/09/13/hindustan-uniliver-gst-cut-2025-09-13-12-10-18.jpg)
ಹಿಂದೂಸ್ತಾನ್ ಯೂನಿಲಿವರ್ ಕಂಪನಿಯಿಂದ ಬೆಲೆ ಕಡಿತ
ಸೆಪ್ಟೆಂಬರ್ 22 ರಿಂದ ದೇಶದಲ್ಲಿ ಜಿಎಸ್‌ಟಿ ದರ ಇಳಿಕೆಯಿಂದ ಎಲ್ಲ ಉತ್ಪನ್ನಗಳ ದರ ಇಳಿಕೆಯೂ ಆರಂಭವಾಗುತ್ತೆ. ಈಗಾಗಲೇ ಕಾರ್, ಬೈಕ್ ಗಳ ದರವನ್ನು ಇಳಿಕೆ ಮಾಡಲಾಗಿದೆ. ಮಹೀಂದ್ರಾ ಕಂಪನಿಯು ಸೆಪ್ಟೆಂಬರ್ 6ರಿಂದಲೇ ತನ್ನ ಎಲ್ಲ ಕಾರ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಈಗ ಗ್ರಾಹಕ ಬಳಕೆಯ ಉತ್ಪನ್ನಗಳ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಯು ತನ್ನ ಉತ್ಪನ್ನಗಳ ಬೆಲೆ ಕಡಿತ ಘೋಷಿಸಿದೆ.
ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಡೌವ್ ಶಾಂಪೂ, 340 ಎಂಎಲ್ ಬಾಟಲ್ ಬೆಲೆ 490 ರೂಪಾಯಿಯಿಂದ 435 ರೂಪಾಯಿಗೆ ಇಳಿಸಿದೆ.
200 ಗ್ರಾಂ ಜಾರ್ ಹಾರ್ಲಿಕ್ಸ್ ಬೆಲೆಯು 130 ರೂಪಾಯಿಯಿಂದ 110 ರೂಪಾಯಿಗೆ ಇಳಿದಿದೆ. ಇನ್ನೂ 200 ಗ್ರಾಂ ಕಿಸಾನ್ ಜಾಮ್ ಬೆಲೆಯನ್ನು 90 ರೂಪಾಯಿಯಿಂದ 80 ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿ ಉತ್ಪನ್ನಗಳು, ಕಂಪನಿ ಸಿಇಓ ಪ್ರಿಯಾ ನಾಯರ್
75 ಗ್ರಾಂ ಲೈಫ್ ಬಾಯ್ ಸೋಪ್ ಬೆಲೆ 68 ರೂಪಾಯಿಯಿಂದ 60 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಚಿಲ್ಲರೆ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಜಿಎಸ್‌ಟಿ ದರ ಬದಲಾವಣೆಯಿಂದ ಕೇಂದ್ರ ಸರ್ಕಾರವು ಎಲ್ಲ ಉತ್ಪನ್ನಗಳ ತಯಾರಕರಿಗೆ ಮಾರಾಟವಾಗದೇ ಇಳಿದ ಉತ್ಪನ್ನಗಳ ಎಂಆರ್‌ಪಿ ಬೆಲೆಯನ್ನು ಪರಿಷ್ಕರಿಸಲು ಸೂಚಿಸಿದೆ. ಡಿಸೆಂಬರ್ 31ರೊಳಗೆ ಎಲ್ಲ ಉತ್ಪನ್ನಗಳ ಬೆಲೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.