/newsfirstlive-kannada/media/media_files/2025/09/01/gurugram-rain02-2025-09-01-20-03-48.jpg)
ಗುರುಗ್ರಾಮದಲ್ಲಿ ಮಳೆಯಿಂದ ರಸ್ತೆಗಳು ಜಲಾವೃತ್ತ
ದೆಹಲಿ ಹಾಗೂ ಎನ್‌ಸಿಆರ್ ನಗರಗಳಾದ ಗುರುಗ್ರಾಮ, ಫರೀದಾಬಾದ್, ನೋಯ್ಡಾದಲ್ಲಿ ಇಂದು ಮಧ್ಯಾಹ್ನ ಭಾರಿ ಮಳೆಯಾಗಿದೆ. ಇದರಿಂದ ಗುರುಗ್ರಾಮ ಹಾಗೂ ನೋಯ್ಡಾದ ಐ.ಟಿ. ಕಂಪನಿಯ ಉದ್ಯೋಗಿಗಳಿಗೆ ಸಂಜೆ ಮನೆಗೆ ಹೋಗೋದು ಹೇಗೆ ಎಂಬ ಚಿಂತೆ ಶುರುವಾಗಿದೆ. ಏಕೆಂದರೇ, ಗುರುಗ್ರಾಮದ ಪ್ರಮುಖ ರಸ್ತಗಳೆಲ್ಲಾ ಜಲಾವೃತ್ತವಾಗಿವೆ. ಇನ್ನೂ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗಳಲ್ಲೇ ಕಾರ್ ಗಳು ಸಿಲುಕಿಕೊಂಡಿವೆ. ಹೀಗಾಗಿ ಇವತ್ತು ಸಂಜೆ ಮನೆಗೆ ಹೋಗೋದು ಕಷ್ಟ . ಹಾಗಾಗಿ ರಾತ್ರಿ ಆಫೀಸ್ ನಲ್ಲೇ ನಿದ್ದೆ ಮಾಡೋಣ ಎಂದು ಅನೇಕರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಇಂದು ಮಧ್ಯಾಹ್ನ ಸುಮಾರು 2 ಗಂಟೆ ಕಾಲ ಗುರುಗ್ರಾಮದಲ್ಲಿ ಭಾರಿ ಮಳೆಯಾಗಿದೆ. ಭಾರಿ ಮಳೆಗೆ ರಸ್ತೆಗಳೇ ಕೆರೆಯಂತಾಗಿವೆ.
ಸಂಜೆಯೂ ಗಾಳಿ, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ರಾತ್ರಿ 10 ಗಂಟೆಯವರೆಗೂ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಾದ ಗುರುಗ್ರಾಮ, ನೋಯ್ಡಾ, ಫರಿದಾಬಾದ್ ನಗರಗಳಿಗೆ ಆರೇಂಜ್ ಆಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.
ದೆಹಲಿ, ಗುರುಗ್ರಾಮದ ರಸ್ತೆಗಳು ಜಲಾವೃತ್ತ.
2 ಗಂಟೆಯ ಮಳೆಗೆ ಗುರುಗ್ರಾಮ, ದೆಹಲಿಯ ರಸ್ತೆಗಳೇ ಕೆರೆಗಳಂತಾಗಿವೆ. ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತ್ತವಾಗುತ್ತಾವೆ ಎಂದು ಟೀಕಿಸುವ ಬೆಂಗಳೂರಿನಲ್ಲಿರುವ ಟೆಕ್ಕಿಗಳು ಈಗ ಉತ್ತರದ ಗುರುಗ್ರಾಮ, ನೋಯ್ಡಾ, ದೆಹಲಿಯ ರಸ್ತೆಗಳ ಸ್ಥಿತಿಯನ್ನ ಒಮ್ಮೆ ನೋಡಲಿ. ಬೆಂಗಳೂರಿನ ಮಳೆಯಿಂದ ತೊಂದರೆಯಾದರೇ, ಗುರುಗ್ರಾಮ, ನೋಯ್ಡಾಗೆ ವಾಪಸ್ ಹೋಗಲಿ ಎಂದು ಬೆಂಗಳೂರಿನ ಕನ್ನಡಿಗ ಟೆಕ್ಕಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ಭಾರತದ ಟೆಕ್ಕಿಗಳ ಕಾಲೆಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.