/newsfirstlive-kannada/media/media_files/2025/10/02/h125-helicopter-2025-10-02-20-34-28.jpg)
ಏರ್ ಬಸ್ ಕಂಪನಿಯ H125 ಹೆಲಿಕಾಪ್ಟರ್
ಏರ್ ಬಸ್ , ಟಾಟಾ ಕಂಪನಿಯಿಂದ ಮೇಡ್ ಇನ್ ಇಂಡಿಯಾ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಕರ್ನಾಟಕದ ಕೋಲಾರದ ವೇಮಗಲ್ ನಲ್ಲಿ ಆರಂಭಿಸಲಾಗುತ್ತೆ. ಇದು ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಘಟಕವಾಗಿದೆ. ಏರ್ ಬಸ್ ಕಂಪನಿಯಿಂದ H125 ಹೆಲಿಕಾಪ್ಟರ್ ಉತ್ಪಾದನೆ ಘಟಕವನ್ನು ಕರ್ನಾಟಕದಲ್ಲಿ ಆರಂಭಿಸಲಾಗುತ್ತಿದೆ. ನಾಗರಿಕರ ಖಾಸಗಿ ಬಳಕೆ ಮತ್ತು ಸೇನೆಯ ಅಗತ್ಯತೆ ಪೂರೈಕೆಗೆ ಹೆಲಿಕಾಪ್ಟರ್ ಉತ್ಪಾದನೆ ಮಾಡಲಾಗುತ್ತೆ. ಇದು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಅಸೆಂಬ್ಲಿ ಘಟಕವಾಗಲಿದೆ.
ಈ ಯೋಜನೆಯು ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಈ ಹೊಸ ಘಟಕದಲ್ಲಿ ಏರ್ ಬಸ್ ಕಂಪನಿಯಿಂದ ಎಚ್ 125 ಹೆಲಿಕಾಪ್ಟರ್ ಗಳನ್ನು ಜೋಡಣೆ ಮಾಡಿ ಅಂತಿಮ ರೂಪ ನೀಡಲಾಗುತ್ತೆ. ಈ ಮಹತ್ವದ ಒಪ್ಪಂದದಿಂದ ಭಾರತವನ್ನು ಹೆಲಿಕಾಪ್ಟರ್ ಗಳ ಬಳಕೆದಾರನ ಸ್ಥಾನದಿಂದ ಉತ್ಪಾದಕನ ಸ್ಥಾನಕ್ಕೆ ಏರಿಸಲಿದೆ ಎಂದು ಏರ್ ಬಸ್ ಮತ್ತು ಟಾಟಾ ಕಂಪನಿಯ ಜಂಟಿ ಪ್ರಕಟಣೆ ಹೇಳಿದೆ.
ಭಾರತದಲ್ಲೇ ತಯಾರಾಗುವ ಮೊದಲ ಎಚ್ 125 ಹೆಲಿಕಾಪ್ಟರ್ 2027 ಕ್ಕೆ ತಯಾರಾಗುವ ನಿರೀಕ್ಷೆ ಇದೆ.
ಇಲ್ಲಿ ತಯಾರಾಗುವ ಹೆಲಿಕಾಪ್ಟರ್ ಗಳನ್ನು ನಾಗರಿಕರ ಖಾಸಗಿ ಬಳಕೆಗೆ ಮಾತ್ರವಲ್ಲದೇ, ಪ್ರವಾಸೋದ್ಯಮ, ವಿಪತ್ತು ನಿರ್ವಹಣೆಗೂ ಬಳಕೆ ಮಾಡಲಾಗುತ್ತೆ. ಜೊತೆಗೆ ಮಿಲಿಟರಿಯ ಅಗತ್ಯತೆಗಳನ್ನು ಪೂರೈಸಲು ಕೂಡ ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಲಾಗುತ್ತೆ ಎಂದು ಪ್ರಕಟಣೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.