/newsfirstlive-kannada/media/media_files/2025/09/13/hassan-medical-college-2025-09-13-18-14-13.jpg)
ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನ್ ಸಾವು
ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಟ್ರಕ್ ಹರಿದ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಇಂದು ಬೆಳಿಗ್ಗೆಯವರೆಗೂ 9 ಮಂದಿ ಸಾವನ್ನಪ್ಪಿದ್ದರು. ಹಾಸನ ತಾಲ್ಲೂಕಿನ ಶಿವಯ್ಯನ ಕೊಪ್ಪಲು ಗ್ರಾಮದ ಯುವಕ 26 ವರ್ಷದ ಚಂದನ್ ಗಂಭೀರ ಸ್ಥಿತಿಯಲ್ಲಿ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ದುರಾದೃಷ್ಟವಶಾತ್ ಟ್ರಕ್ ಹರಿದಿದ್ದರಿಂದ ಚಂದನ್ ಬ್ರೇನ್ ಡೆಡ್ ಸ್ಥಿತಿಯಲ್ಲಿತ್ತು. ಹೀಗಾಗಿ ಚಂದನ್ ನನ್ನು ಬದುಕಿ ಉಳಿಸುವ ವೈದ್ಯರ ಪ್ರಯತ್ನಗಳೆಲ್ಲಾ ವಿಫಲವಾದವು. ಇಂದು ಸಂಜೆ ಚಂದನ್ ಮೃತಪಟ್ಟಿದ್ದಾನೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಚಂದನ್, ಶಿವಯ್ಯನ ಕೊಪ್ಪಲು ಗ್ರಾಮದ ಚಂದ್ರಶೇಖರ್ ಮತ್ತು ಮಂಜುಳಾ ದಂಪತಿಯ ಏಕೈಕ ಪುತ್ರ. ಊರಿನಲ್ಲಿ ಕೃಷಿ ಮಾಡಿಕೊಂಡು, ಟ್ರಾಕ್ಟರ್ ಓಡಿಸಿಕೊಂಡು ಚಂದನ್ ಜೀವನ ಸಾಗಿಸುತ್ತಿದ್ದ. ತಂದೆ, ತಾಯಿಗೆ ಆಸರೆಯಾಗಿದ್ದ ಏಕೈಕ ಮಗನೂ ಈಗ ಇಲ್ಲವಾಗಿದ್ದಾನೆ. ತಂದೆ-ತಾಯಿಗೆ ತಮ್ಮ ಕಣ್ಣೆದುರೇ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ದುರಂತ, ಕೆಟ್ಟ ಘಳಿಗೆ ಎದುರಾಗಿದೆ. ಯಾವ ತಂದೆ ತಾಯಿಯೂ ತಮ್ಮ ಕಣ್ಣೆದುರೇ ತಮ್ಮ ಮಗ ಸಾವನ್ನಪ್ಪುವುದನ್ನು ಊಹಿಸುವುದಿಲ್ಲ. ಆದರೇ, ಶಿವಯ್ಯನಕೊಪ್ಪಲು ಗ್ರಾಮದ ಚಂದ್ರಶೇಖರ್- ಮಂಜುಳಾ ದಂಪತಿಗೆ ಈಗ ಬರಸಿಡಿಲು ಬಡಿದಂತೆ ಆಗಿದೆ.