/newsfirstlive-kannada/media/media_files/2025/09/13/hassan-truck-accident-driver-2025-09-13-19-00-34.jpg)
ಹಾಸನದ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಟ್ರಕ್ ಹರಿದು 10 ಮಂದಿ ಸಾವನ್ನಪ್ಪಿದ್ದಾರೆ. ಟ್ರಕ್ ವೇಗವಾಗಿ ಬಂದು ಮೊದಲಿಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್ ದಾಟಿ ಮತ್ತೊಂದು ಬದಿಯಲ್ಲಿ ಸಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಹರಿದಿದೆ. ಡಿ.ಜೆ.ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದವರು ವೇಗವಾಗಿ ಟ್ರಕ್ ಬರುವುದನ್ನು ಗಮನಿಸುವಷ್ಟರಲ್ಲಿ ಎಲ್ಲರ ಮೇಲೆ ಟ್ರಕ್ ಹರಿದು ಬಿಟ್ಟಿತ್ತು. ಹೀಗೆ ಟ್ರಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದವನು ಇದೇ ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗಲಿ ಗ್ರಾಮದ ಭುವನೇಶ್.
ಈತನೇ ಟ್ರಕ್ ಚಾಲಕ ಭುವನೇಶ್, ಅಪಘಾತ ಮಾಡಿದ ಟ್ರಕ್
ಅಪಘಾತ ಸಂಭವಿಸಿದ ಬಳಿಕ ರೊಚ್ಚಿಗೆದ್ದ ಜನರು, ಟ್ರಕ್ ಚಾಲಕ ಭುವನೇಶ್ ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈತನೇ ಆ ಟ್ರಕ್ ಚಾಲಕ ಭುವನೇಶ್. ಬಿಜಿಎಸ್ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದೆ ಎಂದು ಚಾಲಕ ಭುವನೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈಗಾಗಲೇ ಚಾಲಕ ಮದ್ಯಪಾನ ಮಾಡಿದ್ದಾನಾ ಇಲ್ಲವಾ ಎಂಬುದರ ಪರೀಕ್ಷೆಗಾಗಿ ಈತನ ರಕ್ತಮಾದರಿ ಸಂಗ್ರಹಿಸಲಾಗಿದೆ. ಚಾಲಕನಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗಳು ಆಗಿಲ್ಲ . ಹೊಟ್ಟೆ ಭಾಗದಲ್ಲಿ ನೋವಾಗುತ್ತಿದೆ ಎಂದು ಚಾಲಕ ಭುವನೇಶ್ ಹೇಳಿದ್ದಾನೆ. ಚಾಲಕ ಸದ್ಯ ಆರೋಗ್ಯಕರವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇಂದು ರಾತ್ರಿ ಅಥವಾ ನಾಳೆಯೊಳಗೆ ಟ್ರಕ್ ಚಾಲಕ ಭುವನೇಶ್ ರಕ್ತ ಪರೀಕ್ಷೆಯ ರಿಪೋರ್ಟ್ ಬರಲಿದೆ. ಆದಾದ ಬಳಿಕ ಈತ ಮದ್ಯ ಸೇವಿಸಿ ಟ್ರಕ್ ಚಾಲನೆ ಮಾಡಿದ್ದಾನಾ ಇಲ್ಲವೇ ಎಂಬುದು ದೃಢವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.