/newsfirstlive-kannada/media/media_files/2025/09/08/hdk-on-madduru-2025-09-08-15-20-00.jpg)
ಮದ್ದೂರಿನಲ್ಲಿ ಶಾಂತಿ ಕಾಪಾಡಲು ಕುಮಾರಸ್ವಾಮಿ ಮನವಿ
ಮದ್ದೂರು ಗಲಾಟೆ ಪ್ರಕರಣದ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ರಾತ್ರಿ ಗಣೇಶನ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ . ಕಳೆದ ವರ್ಷದ ಪ್ರಕರಣ ಮಂಡ್ಯದಲ್ಲಿ ಪುನರಾವರ್ತನೆ ಆಗಿದೆ. ನಾನು ಮಂಡ್ಯ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಘಟನೆಯನ್ನ ಹಿಂಸೆಯ ಕಡೆ ತೆಗೆದುಕೊಂಡು ಹೋಗಬೇಡಿ ಎಂದು ಮದ್ದೂರು ಜನರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಮಂಡ್ಯದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ . ಇಂಥ ಪ್ರಕರಣಗಳು ಮಂಡ್ಯದಲ್ಲಿ ಈ ಹಿಂದೆ ಆಗಿಲ್ಲ . ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರ ಕಾರಣ. ಹಿಂದೂ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಅಸಮಾಧಾನ ಆಗುತ್ತಿದೆ . ಇದಕ್ಕೆ ಕಾಂಗ್ರೆಸ್ ಆಡಳಿತ, ನಡವಳಿಕೆ ಕಾರಣ, ಇಡೀ ರಾಜ್ಯದಲ್ಲಿ ಮೂಲೆ ಮೂಲೆಯಲ್ಲಿ ಗಲಾಟೆ ನಡೆಯಲು ಕಾಂಗ್ರೆಸ್ ಆಡಳಿತ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ಮದ್ದೂರು ನಲ್ಲಿ ಪ್ರತಿಭಟನೆ ನಡೆಯುತ್ತಿರುವುದು ನೋಡಿದ್ರೆ ಕಾಂಗ್ರೆಸ್ ಪತನ ಶುರುವಾಗಿದೆ ಅಂತಾನೇ ಅರ್ಥ ಎಂದಿದ್ದಾರೆ. ಈಗಲಾದ್ರೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು . ಡಿಸಿ, ಎಸ್ಪಿ ಮಾತಾಡಿದ್ದೇನೆ. ಮದ್ದೂರು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದುರ್ಘಟನೆ ಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಕುಮಾರಸ್ವಾಮಿ ದೆಹಲಿಯಿಂದಲೇ ಮದ್ದೂರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಬೆಂಗಳೂರಿನಿಂದ ನಿಖಿಲ್ ಕುಮಾರಸ್ವಾಮಿ ಮದ್ದೂರಿನತ್ತ ಹೊರಟಿದ್ದಾರೆ. ಮದ್ದೂರಿಗೆ ಹೋಗುವ ಮುನ್ನ ನ್ಯೂಸ್ ಫಸ್ಟ್ ಜೊತೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದರು.
ನಿನ್ನೆ ಮದ್ದೂರಿನಲ್ಲಿ ನಡೆದ ಘಟನೆಯು, ಕಾಂಗ್ರೆಸ್ ಸರ್ಕಾರದ ಮೊದಲ ಘಟನೆಯಲ್ಲ . ನಾಗಮಂಗಲ, ಕೆರೆಗೋಡಿನಲ್ಲಿ ಇಂತಹ ಘಟನೆ ನಡೆದಿವೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕಾಂಗ್ರೆಸ್ ನ ಜನ ಪ್ರತಿನಿಧಿಗಳು ಧಕ್ಕೆಯುನ್ನುಂಟು ಮಾಡಿದ್ದಾರೆ . ಘಟನೆ ಬಗ್ಗೆ ಪೋಲಿಸ್ ಇಲಾಖೆಗೆ ದೂರುವುದಿಲ್ಲ. ಪೋಲಿಸರು ಸ್ವತಂತ್ರ ಕಳೆದುಕೊಂಡಿದ್ದಾರೆ . ಮಸೀದಿ ಮುಂದೆ ಕಿಡಿಗೇಡಿ ವರ್ತನೆ ತೋರಿಸಿದ್ದಾರೆ . ಇದಕ್ಕೆ ನೇರ ಹೊಣೆ ಸರ್ಕಾರ ಹಾಗೂ ಗುಪ್ತಚರ ಇಲಾಖೆ. ಪೋಲಿಸರು ಈ ಸರ್ಕಾರದಲ್ಲಿ ಸ್ವತಂತ್ರ ಕಳೆದುಕೊಂಡಿದ್ದಾರೆ. ಇದು ಜನರ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ . ಈ ಹಿಂದೆ ನಾಗಮಂಗಲ ಗಲಭೆಯಾದಾಗ, ಕೆರೆಗೋಡು ಘಟನೆಯಾದಾಗ ಜನರು ಊರು ಬಿಟ್ಟಿದ್ರು . ಈ ರೀತಿಯ ಘಟನೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.