/newsfirstlive-kannada/media/media_files/2025/09/04/cath-lab01-2025-09-04-18-03-51.jpg)
ಹೃದಯದ ಆರೋಗ್ಯ ರಕ್ಷಣೆಗಾಗಿ ಕ್ಯಾತ್ ಲ್ಯಾಬ್ ಆರಂಭಕ್ಕೆ ಪ್ಲ್ಯಾನ್
ಹೃದಯಾಘಾತ... ಹೃದಯ ಸ್ತಂಭನ.. ಹೀಗೆ ಈ ಹಾರ್ಟಿಗೇನೋ ಆಗಿದೆ ಅನ್ನೋ ಚರ್ಚೆ ಇತ್ತೀಚೆಗೆ ಜೋರಾಗಿದೆ. ಯುವಕರಿಂದ ಹಿಡಿದು ವೃದ್ಧರವರೆಗೆ ವಿದೌಟ್ ಎನೀ ಕ್ಲೂ ಸಾವನ್ನಪ್ತಿದ್ದಾರೆ. ಹೀಗಾಗಿ, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಯನ್ನ ಮಟ್ಟಹಾಕಲು ಕ್ಯಾತ್ ಲ್ಯಾಬ್ ಅಸ್ತ್ರ ಪ್ರಯೋಗಿಸಿದೆ.
ಈ ದಿಲ್... ಹಾರ್ಟ್... ಹೃದಯ ಅಂತಾರಲ್ಲ. ಇದಕ್ಕೇನೇ ಈಗ ಢವಢವ ಶುರುವಾಗಿದೆ. ಹುಟ್ಟೋ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕರ ವರೆಗೂ ಈ ಹಾರ್ಟ್ ಸಮಸ್ಯೆ ಕಂಟಕವಾಗ್ಬಿಟ್ಟಿದೆ. ಆದ್ರೆ, ಇದಕ್ಕೊಂದು ಪರ್ಮನೆಂಟ್ ಸಲ್ಯೂಷನ್ ಕೊಡೋದಕ್ಕೆ ಆರೋಗ್ಯ ಇಲಾಖೆ ಪ್ಲಾನ್ ಮಾಡಿದ್ದು, ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ಯಾತ್ ಲ್ಯಾಬ್ ಆರಂಭಕ್ಕೆ ಸಜ್ಜಾಗಿದೆ.
ಏನಿದು ಕ್ಯಾತ್ ಲ್ಯಾಬ್?
ಹೃದಯ ಕಾಯಿಲೆಗಳ ಪತ್ತೆಹಚ್ಚುವ ಲ್ಯಾಬ್
ಸರ್ಜರಿ ಮಾಡದೇ ಚಿಕಿತ್ಸೆ ಕೊಡುವ ವಿಧಾನ
ಇದೊಂದು ಅಪಾಯ ತಡೆಗಟ್ಟುವ ಪ್ರಕ್ರಿಯೆ
ಹೃದಯ ಸಂಬಂಧಿ ಕಾಯಿಲೆಗಳ ಪತ್ತೆ ಹಚ್ಚುವ ಲ್ಯಾಬ್ ಇದಾಗಿದ್ದು, ಸರ್ಜರಿ ಮಾಡದೇ ಚಿಕಿತ್ಸೆ ಕೊಡುವ ವಿಧಾನವಾಗಿದೆ. ಅಪಾಯ ತಡೆಗಟ್ಟುವ ಪ್ರಕ್ರಿಯೆಯೇ ಕ್ಯಾತ್ ಲ್ಯಾಬ್.
ಕ್ಯಾತ್ ಲ್ಯಾಬ್ ಲಾಭ ಏನು?
ಹೃದ್ರೋಗಗಳ ಬಗ್ಗೆ ಕೊಡಲಿದೆ ನಿಖರ ಮಾಹಿತಿ
ಅಂಜಿಯೋಪ್ಲಾಸ್ಟ್, ಅಂಜಿಯೋ ಗ್ರಾಮ್ಗೆ ನೆರವು
ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಸಿಕ್ಕಾಪಟ್ಟೆ ಖರ್ಚು
ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಓಪನ್ ಆದ್ರೆ ಜನರಿಗೆ ಲಾಭ
ಇದು ಹೃದ್ರೋಗಗಳ ನಿಖರ ಮಾಹಿತಿ ಕೊಡುತ್ತೆ. ಅಂಜಿಯೋಪ್ಲಾಸ್ಟ್, ಅಂಜಿಯೋ ಗ್ರಾಮ್ ಮಾಡಲು ನೆರವು ನೀಡುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ವಿಧಾನ ಸಿಕ್ಕಾಪಟ್ಟೆ ಖರ್ಚು. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾತ್ ಲ್ಯಾಬ್ ಓಪನ್ ಆಗೋದ್ರಿಂದ ಜನ ಸಾಮಾನ್ಯರಿಗೆ ಲಾಭವಾಗಲಿದೆ.
ಒಟ್ನಲ್ಲಿ ಆರೋಗ್ಯ ಸಚಿವರ ನೇತೃತ್ವದಲ್ಲಿ ಇಲಾಖಾ ಹಂತದಲ್ಲಿ ಈ ಬಗ್ಗೆ ಸಭೆ ನಡೆಸಿದ್ದು, ಸದ್ಯ ಸರ್ ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ನೂತನ ಕ್ಯಾತ್ ಲ್ಯಾಬ್ ಆರಂಭ ಮಾಡಲು ಸಿದ್ಧತೆ ನಡೆದಿದೆ. ಅಂದುಕೊಂಡಂತೆ ಈ ಲ್ಯಾಬ್ ಜಾರಿಗೆ ಬಂದ್ರೆ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ.
ಪ್ರಗತಿ ಶೆಟ್ಟಿ, ನ್ಯೂಸ್ಫಸ್ಟ್ ಬೆಂಗಳೂರು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.