ನಟ ದರ್ಶನ್‌ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಕೋರಿದ ಅರ್ಜಿ ವಿಚಾರಣೆ ಮುಂದೂಡಿಕೆ, ಕೋರ್ಟ್ ನಲ್ಲಿ ಏನೇನಾಯಿತು?

ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೋರಿರುವ ಅರ್ಜಿ ವಿಚಾರಣೆ ಇಂದು 64ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಿತು. ಅರ್ಜಿಗೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಎ 1 ಆರೋಪಿ ಪವಿತ್ರಾಗೌಡ ತಾಂತ್ರಿಕ ಕಾರಣದ ಆಧಾರದ ಮೇಲೆ ಜಾಮೀನು ನೀಡಲು ಕೋರಿದ್ದಾರೆ.

author-image
Chandramohan
actor darshan pavithra photos

ಆರೋಪಿ ನಟ ದರ್ಶನ್ ಹಾಗೂ ಪವಿತ್ರಗೌಡ

Advertisment
  • ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಕೋರಿದ್ದ ಅರ್ಜಿ ವಿಚಾರಣೆ
  • ತಾಂತ್ರಿಕ ಕಾರಣದ ಮೇಲೆ ಜಾಮೀನು ನೀಡಿಕೆಗೆ ಪವಿತ್ರಾಗೌಡ ಮನವಿ
  • ಸೆಪ್ಟೆಂಬರ್ 2 ರಂದು ಪವಿತ್ರಾಗೌಡ ಅರ್ಜಿ ಬಗ್ಗೆ ಆದೇಶ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್  ಅನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಬೇಕೆಂದು ಜೈಲು ಅಧಿಕಾರಿಗಳು  ಬೆಂಗಳೂರಿನ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯು ಇಂದು ನಡೆಯಿತು. ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಜೈಲು ಅಧಿಕಾರಿಗಳು 64ನೇ ಸೆಷನ್ಸ್  ಕೋರ್ಟ್ ಗೆ ಮನವಿ  ಮಾಡಿದ್ದರು. ಇದಕ್ಕೆ ನಟ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ ಮಾತ್ರವಲ್ಲದೇ, ಆರೋಪಿ ಲಕ್ಷ್ಮಣ್, ಆರೋಪಿ ನಾಗರಾಜ್ ಪರ ವಕೀಲರೂ ಆಕ್ಷೇಪಣೆ ಸಲ್ಲಿಸಿದ್ದಾರೆ. 
ನಟ ದರ್ಶನ್‌ ಬಳ್ಳಾರಿ ಶಿಫ್ಟ್ ಗೆ ಆಕ್ಷೇಪಣೆ ಸಲ್ಲಿಕೆ

ಕೊಲೆ ಪ್ರಕರಣದ ಟ್ರಯಲ್ ಅತಿ ಶೀಘ್ರದಲ್ಲಿ ಪ್ರಾರಂಭ ಆಗ್ತಿದೆ. ಅಲ್ಲದೆ ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ವಕೀಲರ ಭೇಟಿಗೆ ಅಸಾಧ್ಯವಾಗುತ್ತೆ.  ಪ್ರತಿ ಬಾರಿ ವಿಚಾರಣೆಗೆ ಹಾಜರುಪಡಿಸಲು ಸಾಧ್ಯವಿಲ್ಲ. ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತ ಇದ್ದಾರೆ. ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟ.  ಹೀಗಾಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಗೆ ಆಕ್ಷೇಪಣೆಯನ್ನು  ನಟ ದರ್ಶನ್ ಪರ ವಕೀಲ ಸುನೀಲ್  ಕೋರ್ಟ್ ಗೆ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರ ವಕೀಲರ ಅರ್ಜಿಗೆ ದರ್ಶನ್ ಪರ ವಕೀಲರು ಆಕ್ಷೇಪಣೆಯನ್ನು ಕೋರ್ಟ್ ಗೆ  ಸಲ್ಲಿಕೆ ಮಾಡಿದ್ದರು. 
 ಇನ್ನೂ  ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಹತ್ಯೆ ಕೇಸ್  ನಲ್ಲೇ ಜೈಲು ಪಾಲಾಗಿರುವ ಎ 1 ಆರೋಪಿ ಪವಿತ್ರಾಗೌಡ ಮತ್ತೆ ಜಾಮೀನು ಕೋರಿ ಬೆಂಗಳೂರಿನ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾಗೌಡ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ,ಪ್ರಾಸಿಕ್ಯೂಷನ್ ಪರ ವಕೀಲರಿಗೆ   ಸೂಚನೆ ನೀಡಿದೆ. ಬಳಿಕ ವಿಚಾರಣೆಯನ್ನು  ಕೆಲ ಕಾಲ ಕೋರ್ಟ್ ಮುಂದೂಡಿತ್ತು. 

ದರ್ಶನ್‌ಗೆ ತಲೆ ದಿಂಬು, ಬೆಡ್‌ಶೀಟ್ ನೀಡಲು ಮನವಿ


ಬಳಿಕ ಮತ್ತೆ ಕೋರ್ಟ್ ವಿಚಾರಣೆ ಆರಂಭವಾದಾಗ, ದರ್ಶನ್ ಪರ ವಕೀಲರು ವಾದ ಮಂಡನೆಗೆ ಸಮಯಾವಕಾಶ ಕೋರಿದ್ದರು. ದರ್ಶನ್ ಪರ ವಕೀಲ ಸುನೀಲ್ ಮತ್ತೆ ವಾದಮಂಡನೆ ಮಾಡಿದ್ದರು.  ಜೈಲಿನಲ್ಲಿ ಯಾವುದೇ ಸಾಮಾನ್ಯ ಖೈದಿಗೆ ನೀಡುವ ಸೌಲಭ್ಯ ಗಳನ್ನ ನೀಡುತ್ತಿಲ್ಲ. ಮೂಲಭೂತ ಸೌಲಭ್ಯಗಳನ್ನು ನಟ ದರ್ಶನ್‌ಗೆ  ನೀಡುತ್ತಿಲ್ಲ. ವಿಚಾರಣಾಧೀನ ಖೈದಿಗೆ ಏನೇನು ನೀಡಬೇಕು ಎಂಬ ಜೈಲು ಮ್ಯಾನೂವಲ್ ನಲ್ಲಿ ಇದೆ. ಬಟ್ಟೆ, ಹಾಸಿಗಗಳನ್ನು ತಮ್ಮ ಖರ್ಚಿನಲ್ಲಿ ಪಡೆದುಕೊಳ್ಳಲು ಮಾರ್ಗಸೂಚಿಯಲ್ಲಿದೆ. ಬಟ್ಟೆ ,ಹಾಸಿಗೆ,  ದಿಬ್ಬು , ಬೆಡ್ ಶೀಟ್ ಒದಗಿಸುವಂತೆ ದರ್ಶನ್ ಪರ ವಕೀಲರು ಕೋರ್ಟ್ ಗೆ   ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಚಳಿಗಾಲ ಇದೆ. ಯಾವುದೇ ಬೆಡ್ ಶೀಟ್ ಸಹ ನೀಡುತ್ತಿಲ್ಲ. ಜೈಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್ ನಲ್ಲಿ ವಾದಮಂಡನೆ ಮಾಡಿದ್ದರು. ಜೈಲು ಅಧಿಕಾರಿಗಳನ್ನು ಕೇಳಿದ್ರೆ ನಮಗೆ ಕೋರ್ಟ್ ನಿಂದ ಆದೇಶ ಇಲ್ಲ ಅಂತ ವಾಪಸ್ಸು ಕಳಿಸುತ್ತಾರೆ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದರು. 
ಪವಿತ್ರಾಗೌಡಗೆ ಜಾಮೀನು ನೀಡುವಂತೆ ವಕೀಲ ಬಾಲನ್ ಅರ್ಜಿ ಸಲ್ಲಿಕೆ

ಇನ್ನೂ ಕೇಸ್ ನ ಎ1  ಆರೋಪಿ  ಪವಿತ್ರಗೌಡ ಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಬಾಲನ್ ಅರ್ಜಿ ಸಲ್ಲಿಸಿದ್ದರು.  ಕಳೆದ ಬಾರಿಯೇ ಜಾಮೀನು ನೀಡುವಂತೆ ಪವಿತ್ರಗೌಡ  ಪರ ವಕೀಲ ಬಾಲನ್ ಅರ್ಜಿ ಸಲ್ಲಿಸಿದ್ದರು. CRPC ಮತ್ತು BNSS ಇರುವ ವ್ಯತ್ಯಾಸದ ಬಗ್ಗೆ ಹಿರಿಯ ವಕೀಲ ಬಾಲನ್ ವಾದ ಮಂಡನೆ ಮಾಡಿದ್ದರು.  ಪ್ರಾಸಿಕ್ಯೂಷನ್ CRPC ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ‌. BNSS ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿತ್ತು.  ಕಳೆದ ವರ್ಷ ಸೆಪ್ಟೆಂಬರ್ ‌ನಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.  IPC ಅಡಿಯಲ್ಲಿ ಸೆಕ್ಷನ್ ದಾಖಲು ಮಾಡಿದ್ದಾರೆ.  ವಿಚಾರಣೆ ಮತ್ತು ಚಾರ್ಜ್ ಶೀಟ್ ಅನ್ನೂ crpc ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. Crpc 173  ಈಗ ಅಮ್ಯಾನವಾಗಿದೆ . BNSS ಬಂದ ಬಳಿಕ ಹಳೆ ಸೆಕ್ಷನ್ ಗಳು ಇಲ್ಲ. ಹಳೆಯ ಕಾಯ್ದೆ ಅಡಿಯಲ್ಲಿ ಕೋರ್ಟ್ ಚಾರ್ಜ್ ಶೀಟ್ ಪರಿಗಣಿಸಿದ್ದು ಸರಿಯಲ್ಲ. ಅಸ್ತಿತ್ವದಲ್ಲಿ ಇಲ್ಲದ ಸಿಆರ್ ಪಿಸಿ ಕಾಯ್ದೆಯಡಿ ಜೈಲಿಗೆ ರಿಮಾಂಡ್ ನೀಡಿದ್ದು ಸರಿಯಲ್ಲ. ಐಪಿಸಿ ಅಡಿ ಕೇಸ್ ದಾಖಲಾಗಿದ್ದರೂ ಬಿಎನ್ ಎಸ್ ಎಸ್ ಅಡಿಯಲ್ಲಿ ತನಿಖೆ ನಡೆಯಬೇಕು. ಜುಲೈ 1  2024 ರಿಂದ ಯಾವುದೇ ಅರ್ಜಿ ಬಿಎನ್ ಎಸ್ ಎಸ್ ಅಡಿ ಸಲ್ಲಿಸಬೇಕು.  ಆದರೆ ಆರೋಪಪಟ್ಟಿ ಹಾಗೂ ಕಾಗ್ನಿಜೆನ್ಸ್ ಕಾನೂನು ಬದ್ದವಾಗಿಲ್ಲ ಎಂದು ವಕೀಲ ಬಾಲನ್ ವಾದ ಮಂಡಿಸಿದ್ದರು. 

bangalore central jail

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು

ಬಿಎನ್ ಎಸ್ ಎಸ್ ಬದಲು ಸಿ ಆರ್ ಪಿ ಸಿ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಪಂಜಾಬ್ ,ಹರಿಯಾಣ ಹೈಕೋರ್ಟ್ ಆದೇಶ ಉಲ್ಲೇಖಿಸಿ ವಾದ ಮಂಡಿಸಿದ್ದರು.  ಸಿ ಆರ್ ಪಿ ಸಿ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರಾದ ಪವಿತ್ರಾಗೌಡ ಅರ್ಹರು.  ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಪವಿತ್ರಗೌಡ ಪರ ವಕೀಲ ಬಾಲನ್ ವಾದ  ಮಂಡಿಸಿದ್ದರು. 
ಸುಪ್ರೀಂಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ. ತಾಂತ್ರಿಕ ಲೋಪ ಇರುವ ಕಾರಣ ಜಾಮೀನು ನೀಡುವಂತೆ ಬಾಲನ್  ವಾದ ಮಂಡಿಸಿದ್ದರು. 

ಪವಿತ್ರಾಗೌಡ ಪರ ವಕೀಲ  ಬಾಲನ್ ವಾದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿ ವಾದಿಸಿದ್ದರು. 531 BNSS ನಲ್ಲಿಯೇ ಸ್ಪಷ್ಟವಾಗಿದೆ . ಬಿಎನ್ ಎಸ್ ಎಸ್ ಜಾರಿಗೆ ಬರುವ ಮುಂಚಿನ ಅಪರಾಧಗಳು ತನಿಖೆ ಹಿಂದಿನ ಐಪಿಸಿ ಅನುಸಾರ ನಡೆಸಬೇಕು.  ಪವಿತ್ರಗೌಡ ಕೂಡಾ ಜಾಮೀನು  ಅರ್ಜಿ ಸಲ್ಲಿಸಿದ್ದು ಹಾಗೂ ಜಾಮೀನು  ಸಿಕ್ಕಿದೇ ಸಿ ಆರ್ ಪಿ ಸಿ ಅನ್ವಯ ಎಂದು ಪ್ರಾಸಿಕ್ಯೂಷನ್ ಪರ  ವಕೀಲರು ಬಾಲನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಾದಿಸಿದ್ದರು. 

ಕೈ ಹಿಡಿದು ಫೋನ್ ನಂಬರ್ ಕೇಳಿದ ಪವಿತ್ರಾ ಗೌಡ.. ದುಂಬಾಲು ಬಿದ್ದ ಗೆಳತಿಗೆ ದರ್ಶನ್ ಮಾಡಿದ್ದೇನು?

ಸೆಪ್ಟೆಂಬರ್ 2ಕ್ಕೆ ಪವಿತ್ರಾಗೌಡ ಜಾಮೀನು ಅರ್ಜಿ ಆದೇಶ
ಸೆಪ್ಟೆಂಬರ್ 2ಕ್ಕೆ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಕೋರಿದ ಅರ್ಜಿ ವಿಚಾರಣೆ

ಬಳಿಕ 64ನೇ ಸೆಷನ್ಸ್ ಕೋರ್ಟ್ ಪವಿತ್ರಾಗೌಡ ಜಾಮೀನು ಅರ್ಜಿಯ ತೀರ್ಪು  ಅನ್ನು ಸೆಪ್ಟೆಂಬರ್ 2 ಕ್ಕೆ ಕಾಯ್ದಿರಿಸಿದೆ. 
ಇನ್ನೂ ನಟ ದರ್ಶನ್‌ಗೆ ತಲೆ ದಿಂಬು, ಬೆಡ್ ಶೀಟ್ ಕೋರಿರುವ ಅರ್ಜಿಯ ಬಗ್ಗೆಯೂ ಸೆಪ್ಟೆಂಬರ್ 2 ರಂದೇ ಕೋರ್ಟ್ ಆದೇಶ ಪ್ರಕಟಿಸಲಿದೆ.  ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರಿರುವ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 2ಕ್ಕೆ ಮುಂದೂಡಿಕೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Actor Darshan
Advertisment