/newsfirstlive-kannada/media/media_files/2025/10/04/heart-symbol-at-traffic-signal-2025-10-04-17-58-48.jpg)
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಾರ್ಟ್ ಸಿಂಬಲ್ ಏಕೆ ಗೊತ್ತಾ?
ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾರ್, ಬೈಕ್ ನಿಲ್ಲಿಸಿದಾಗ, ಹಾರ್ಟ್ ಶೇಪ್ ಮೂಢಿಬರುತ್ತಿರುವುದನ್ನು ನೀವು ನೋಡಿರಬಹುದು. ಟ್ರಾಫಿಕ್ ಸಿಗ್ನಲ್​ನಲ್ಲಿ ಹಾರ್ಟ್​ ಶೇಪ್​, ಹಾಗೇ ಡಿಫರೆಂಟ್ ಡಿಫರೆಂಟ್ ಎಮೋಜೀಸ್ ಬರುತ್ತಲ್ಲವೇ, ಇದನ್ನ ನೋಡಿ ನಿಮಗೆ ಸಪ್ರೈಸ್ ಆಗಿದೆ ಅಂತ ನಮಗೆ ಗೊತ್ತು. ಹಾಗಾದ್ರೆ, ಇದೇನು ಗೊತ್ತಾ? ಬೆಂಗಳೂರಿನ ಟ್ರಾಫಿಕ್ ಪೊಲೀಸ್, ಮಣಿಪಾಲ್ ಆಸ್ಪತ್ರೆ ಜಂಟಿಯಾಗಿ ಹೃದಯದ ಅಭಿಯಾನ ಮಾಡ್ತಿದ್ದು ಡಿಫರೆಂಟ್ ಸ್ಟೈಲ್​ನಲ್ಲಿ ಜಾಗೃತಿ ಮೂಡಿಸ್ತಿವೆ. ಇದ್ರ ಭಾಗವಾಗಿಯೇ ಎಂಜಿ ರಸ್ತೆ, ಟ್ರಿನಿಟಿ, ಕಬ್ಬನ್ ಪಾರ್ಕ್, ಬ್ರಿಗೇಡ್ ರಸ್ತೆ ಸೇರಿದಂತೆ 40 ಅಧಿಕ ಜಂಕ್ಷನ್​​ಗಳಲ್ಲಿ ಹಾರ್ಟ್ ಶೇಪ್ ಸಿಗ್ನಲ್​ನಲ್ಲಿ ಹಾಕಲಾಗಿದೆ. ಅಷ್ಟೇ ಅಲ್ಲ, ಹೃದಯಾಘಾತ ಮಾಹಿತಿಗಳನ್ನೊಳಗೊಂಡ ಕ್ಯೂಆರ್‌ಕೋಡ್ ಬೋರ್ಡ್‌ಗಳು ಎಲ್ಲ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಇದರ ಅರ್ಥ ಏನ್ ಗೊತ್ತಾ? ಹೃದಯಕ್ಕೂ ವಿಶ್ರಾಂತಿ ಅತ್ಯವಶ್ಯಕವೆಂದು ಅನ್ನೋದು.
ಜನರು ಹೃದಯ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನೋ ಸಂದೇಶ ನೀಡುವುದು. ಹೃದಯದ ಆರೋಗ್ಯವನ್ನ ಬದುಕಿನ ನಿತ್ಯ ಭಾಗವನ್ನಾಗಿ ಮಾಡುವುದು. ಪ್ರತಿಯೊಬ್ಬರೂ ಸ್ವಯಂ ಪರಿಶೀಲನೆ ಮಾಡಿ ಹೃದಯ ಸ್ನೇಹಿ ಜೀವನ ಶೈಲಿಯತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುವುದು ಈ ಹಾರ್ಟ್ ಶೇಪ್ ಗಳನ್ನು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಾಕಿರುವ ಉದ್ದೇಶ.
ಹೃದಯಾಘಾತ ಮಾಹಿತಿಗಳನ್ನೊಳಗೊಂಡ ಕ್ಯೂಆರ್‌ಕೋಡ್ ಬೋರ್ಡ್‌ಗಳು ಎಲ್ಲ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ನೆರವನ್ನು ಪಡೆಯಬಹುದಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.