ಪಾಕಿಸ್ತಾನದಲ್ಲಿ 36 ಗಂಟೆಯಲ್ಲಿ 307 ಮಂದಿ ಸಾವು, ಏನಾಯಿತು? ಹೇಗಾಯ್ತು?

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ 36 ಗಂಟೆಯಲ್ಲಿ 307 ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಖೈಬರ್ ಪಖುನ್ತವ್ ಪ್ರಾಂತ್ಯ ಸೇರಿದಂತೆ ವಿವಿಧೆಡೆ ಭಾರಿ ಮಳೆಯಿಂದ ಧೀಡೀರ್ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಧೀಡೀರ್ ಪ್ರವಾಹದಿಂದ ಬುನೀರ್ ಜಿಲ್ಲೆಯಲ್ಲೇ 187 ಮಂದಿ ಸಾವನ್ನಪ್ಪಿದ್ದಾರೆ.

author-image
Chandramohan
pakistan flood

ಪಾಕಿಸ್ತಾನದಲ್ಲಿ ಭಾರಿ ಮಳೆಯಿಂದ ಧೀಡೀರ್ ಪ್ರವಾಹದ ಸ್ಥಿತಿ ನಿರ್ಮಾಣ

Advertisment
  • ಪಾಕ್, ಪಿಓಕೆಯಲ್ಲಿ 36 ಗಂಟೆಯಲ್ಲಿ 307 ಮಂದಿ ಸಾವು
  • ಬುನೇರ್ ಜಿಲ್ಲೆಯಲ್ಲೇ 187 ಮಂದಿ ಸಾವು ಎಂದ ಅಧಿಕಾರಿಗಳು
  • ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ ನ ಇಬ್ಬರು ಸಿಬ್ಬಂದಿ ಸಾವು

ಪಾಕಿಸ್ತಾನದಲ್ಲಿ ಕಳೆದ 36 ಗಂಟೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.  ಪಾಕಿಸ್ತಾನದ ಖೈಬರ್ ಪಖುನ್ತವ್ ಪ್ರಾಂತ್ಯದಲ್ಲಿ ಧೀಡೀರನೇ ಭಾರಿ ಮಳೆಯಾಗಿದೆ. ಪರಿಣಾಮ ಧೀಡೀರ್ ಪ್ರವಾಹದ ಸ್ಥಿತಿ ನಿರ್ಮಾಣವಾಗಿ 300 ಕ್ಕೂ ಹೆಚ್ಚು  ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.  
ಧಾರಾಕಾರ ಮಳೆಯಿಂದಾಗಿ ಖೈಬರ್ ಪಖುನ್ತವ್  ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಶುಕ್ರವಾರವೇ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರಾಂತ್ಯದ ಬಜೌರ್, ಬುನೇರ್, ಸ್ವಾತ್, ಮನೇಹ್ರಾ, ಶಾಂಗ್ಲಾ, ಟೋರ್ಘರ್ ಮತ್ತು ಬಟಾಗ್ರಾಮ್ ಜಿಲ್ಲೆಗಳಲ್ಲಿ ವಿನಾಶಕಾರಿ ಮಳೆ, ಮೇಘ ಸ್ಪೋಟ  ಮತ್ತು  ಧೀಡೀರ್  ಪ್ರವಾಹದಿಂದ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಫೈಜಿ ಹೇಳಿದ್ದಾರೆ.
ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತನ್ನ ವರದಿಯಲ್ಲಿ ಹಠಾತ್ ಪ್ರವಾಹದಲ್ಲಿ 307 ಜನರು ಸಾವನ್ನಪ್ಪಿದ್ದಾರೆ.  ಬುನೇರ್‌ನಲ್ಲಿ ಕನಿಷ್ಠ 184 ಸಾವುಗಳು ದಾಖಲಾಗಿವೆ ಎಂದು ಹೇಳಿದೆ. ಶಾಂಗ್ಲಾದಲ್ಲಿ  36 ಸಾವುಗಳು ವರದಿಯಾಗಿವೆ.  ನಂತರ ಮನ್ಸೆಹ್ರಾದಲ್ಲಿ 23, ಸ್ವಾತ್ 22, ಬಜೌರ್ 21, ಬಟ್ಟಗ್ರಾಮ್ 15, ಲೋವರ್ ದಿರ್‌ನಲ್ಲಿ ಐದು ಮತ್ತು ಅಬ್ಬೋಟಾಬಾದ್‌ನಲ್ಲಿ ಒಂದು ಮಗು ಸಹ ನೀರಿನಲ್ಲಿ  ಮುಳುಗಿ ಸಾವನ್ನಪ್ಪಿದೆ.

pakistan flood022


ಶುಕ್ರವಾರ, ಪಿಡಿಎಂಎ ವಕ್ತಾರರು, ಪೀಡಿತ ಪ್ರದೇಶಗಳಲ್ಲಿ ಇನ್ನೂ ಹಲವಾರು ಜನರು ಕಾಣೆಯಾಗಿರುವುದರಿಂದ ಸತ್ತವರ ಅಥವಾ ಗಾಯಗೊಂಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದರು.
ಮಳೆಗಾಲದ ಆರಂಭವಾದ ಜೂನ್ ಅಂತ್ಯದಿಂದ, ದೇಶಾದ್ಯಂತ ಧಾರಾಕಾರ ಮಳೆಯು ಹಾನಿಯನ್ನುಂಟುಮಾಡಿದೆ . ವಿಶೇಷವಾಗಿ ಖೈಬರ್ ಪಖ್ತುನವ್  ಮತ್ತು ಉತ್ತರ ಪ್ರದೇಶಗಳಲ್ಲಿ  ಧೀಡೀರ್  ಪ್ರವಾಹಗಳು, ಭೂಕುಸಿತ ಸಂಭವಿಸಿವೆ. 
ಜನರ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದ ಹೆಲಿಕಾಪ್ಟರ್ ನ ಇಬ್ಬರು ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PAKISTAN FLOOD
Advertisment