/newsfirstlive-kannada/media/media_files/2025/08/28/jammu-kashmir8-2025-08-28-08-42-06.jpg)
ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದ ಭಾರಿ ಹಾನಿ
ಉತ್ತರ ಭಾರತದಲ್ಲಿ ಈಗ ಮಳೆಭೂಮಿಯಾಗಿ ಬದಲಾಗಿದೆ.. ಧಾರಾಕಾರ ಮಳೆಗೆ ಉತ್ತರ ತತ್ತರಿಸಿದೆ. ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್​ ಅಷ್ಟೇ ಅಲ್ಲ, ದಕ್ಷಿಣದ ತೆಲಂಗಾಣದಲ್ಲೂ ಪ್ರವಾಹ ರಣಾರ್ಭಟ ಸೃಷ್ಟಿಯಾಗಿದೆ. ಮಳೆ ಅಬ್ಬರ ಒಂದ್ಕಡೆಯಾದ್ರೆ.. ಜನರ ರಕ್ಷಣೆಗೆ ಪಡ್ತಿರೋ ಹರಸಾಹಸ ಒಂದೊಂದಲ್ಲ..
ಜಮ್ಮು ಮತ್ತು ಕಾಶ್ಮೀರ
ಸಾಮಾನ್ಯಕ್ಕಿಂತ ಶೇಕಡ 260 ರಷ್ಟು ಹೆಚ್ಚಿನ ಮಳೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯಕ್ಕಿಂತ ಶೇಕಡ 260 ರಷ್ಟು ಹೆಚ್ಚಿನ ಮಳೆಯಾಗಿದೆ. ಉಧಂಪುರದಲ್ಲಿ ಒಂದೇ ದಿನದಲ್ಲಿ 629.4 ಮಿಲಿ ಮೀಟರ್​ ಮಳೆಯಾಗಿದ್ದು, ಜಮ್ಮುವಿನ ಕೆಲ ಜಿಲ್ಲೆಗಳು ಕೆರೆಗಳಂತೆ ಬದಲಾಗಿವೆ. ಅನಂತ್‌ನಾಗ್ ಜಿಲ್ಲೆ, ದೋಡಾ ಜಿಲ್ಲೆ, ಕುಲ್ಗಮ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಪ್ರತಿಯೊಂದು ಜಿಲ್ಲೆಯಲ್ಲೂ ಶೇಕಡ 500ಕ್ಕಿಂತ ಹೆಚ್ಚು ಮಳೆ ಸುರಿದ ಬಗ್ಗೆ ದಾಖಲಾಗಿದೆ.
ಜಮ್ಮು ಮತ್ತು ಕಾಶ್ಮೀರ
ಮಳೆ ಪೀಡಿತ ಜಮ್ಮು ಭಾಗದಲ್ಲಿ ಆಗಸ್ಟ್ 30 ರವರೆಗೆ ಶಾಲೆಗಳಿಗೆ ರಜೆ
ಜಮ್ಮು ಪ್ರದೇಶದಲ್ಲಿ ದಾಖಲೆಯ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 45 ಕ್ಕೆ ಏರಿದೆ. ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ದಿನವೂ ಶಾಲೆಗಳು ಕ್ಲೋಸ್​ ಆಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆಗಸ್ಟ್ 30 ರವರೆಗೆ ಜಮ್ಮು ಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಜಮ್ಮು
ಪ್ರವಾಹ ಪೀಡಿತ ಜಮ್ಮು, ಸಾಂಬಾ, ಕಥುವಾ, ಪಠಾಣ್‌ಕೋಟ್ ಮತ್ತು ಗುರುದಾಸ್ಪುರದಲ್ಲಿ ಹಗಲು ರಾತ್ರಿ ರೈಸಿಂಗ್ ಸ್ಟಾರ್ ಕಾರ್ಪ್ಸ್ ನಿರಂತರ ರಕ್ಷಣಾ ಕಾರ್ಯಾಚರಣೆಯನ್ನ ಮುಂದುವರೆಸಿದೆ. ರಕ್ಷಣೆಗೆ ಅಂತ 20 ತಂಡಗಳನ್ನ ನಿಯೋಜಿಸಲಾಗಿದ್ದು, ಆರ್‌ಎಸ್ ಪುರದಲ್ಲಿನ ಅನಾಥಾಶ್ರಮದಿಂದ 50 ಮಕ್ಕಳು ಸೇರಿದಂತೆ 943 ಜನರನ್ನು ರಕ್ಷಿಸಿದೆ.
ಜಮ್ಮು ಜಿಲ್ಲೆಯ ಜೌರಿಯನ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಜನರನ್ನ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್‌ನ ಹೆಲಿಕಾಪ್ಟರ್​ ರಕ್ಷಣೆ ಕಾರ್ಯ ಮುಂದುವರೆಸಿದೆ.
ಹಿಮಾಚಲ ಪ್ರದೇಶ
ಮಳೆಯಿಂದಾಗಿ 310 ಸಾವು.. 369 ಗಾಯ... 38 ಮಂದಿ ನಾಪತ್ತೆ!
ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಿಂದ ಸುರಿಯುತ್ತಿರೋ ಮಳೆಯಿಂದಾಗಿ ಇಲ್ಲಿಯವರೆಗೆ ಸುಮಾರು 310 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಿಮಾಚಲ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವರದಿ ಪ್ರಕಟಿಸಿದ್ದು ವರದಿಯಲ್ಲಿ ಅನೇಕ ಅಂಶ ಉಲ್ಲೇಖಿಸಲಾಗಿದೆ.
ಸಾವಿನ ಮಳೆ!
ಘಟನೆ ಸಾವು
ಪ್ರಕೃತಿ ವಿಕೋಪ 158 ಜನರು
ರಸ್ತೆ ಅಪಘಾತ 152 ಜನರು
ಮಳೆ ಅಬ್ಬರ 369 ಗಾಯ, 38 ಕಾಣೆ
ಪ್ರವಾಹ 1,852 ಪ್ರಾಣಿ
ಮಳೆಯಿಂದ 25,755 ಕೋಳಿ ಸಾವು
ಹಿಮಾಚಲ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವರದಿ ಪ್ರಕಾರ, 310 ಪೈಕಿ 158 ಸಾವುಗಳು ಭೂಕುಸಿತ, ಹಠಾತ್ ಪ್ರವಾಹ, ಮೋಡ ಸ್ಫೋಟ, ವಿದ್ಯುತ್ ಆಘಾತ ಮತ್ತು ಇತರ ಹವಾಮಾನ-ಪ್ರೇರಿತ ಘಟನೆಯಿಂದ ಬಲಿಯಾಗಿದ್ದಾರೆ. 310 ಪೈಕಿ 152 ಮಂದು ರಸ್ತೆ ಅಪಘಾತಗಳ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ಮಳೆ ಅಬ್ಬರಕ್ಕೆ ಈವರೆಗೆ 369 ಮಂದಿ ಗಾಯಗೊಂಡಿದ್ದು, 38 ಮಂದಿ ಕಾಣೆಯಾಗಿದ್ದಾರೆ. ಮಳೆಯ ಪ್ರವಾಹದಿಂದಾಗಿ 1,852 ಪ್ರಾಣಿಗಳು ಮತ್ತು 25,755 ಕೋಳಿಗಳು ಬಲಿಯಾಗಿವೆ.
ಸೊಂಟದೆತ್ತರಕ್ಕೆ ನಿಂತ ನೀರು.. ಮಗುವನ್ನ ರಕ್ಷಿಸಿದ ತಾಯಿ!
ಮನೆಯ ಮುಂದಿರೋ ರಸ್ತೆ ಮೇಲೆ ಸೊಂಟದೆತ್ತರಕ್ಕೆ ನೀರು ತುಂಬಿ ಹರಿಯುತ್ತಿದ್ರೂ.. ತಾಯಿ ತನ್ನ ಮಗುವನ್ನ ಭುಜದ ಮೇಲೆ ಎತ್ತಿಕೊಂಡು.. ತನ್ನ ಪ್ರಾಣವನ್ನ ಪಣಕ್ಕಿಟ್ಟು.. ರಕ್ಷಿಸಿ.. ಸುರಕ್ಷಿತ ಸ್ಥಳಕ್ಕೆ ಬಿಟ್ಟ ಘಟನೆ ಪಂಜಾಬ್​ ಗಡಿ ಸಿಯಾಲ್‌ಕೋಟ್​ನಲ್ಲಿ ನಡೆದಿದೆ.
ಪಂಜಾಬ್
ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ ಕಾರ್ಯ ಮುಂದುವರಿಕೆ!
ಭಾರತೀಯ ಸೇನೆಯು ತನ್ನ ಮುಂದುವರಿದ ATOR N1200 ವಾಹನವನ್ನ ಪಂಜಾಬ್‌ನ ಪ್ರವಾಹ ಪೀಡಿತ ಅಮೃತಸರದಲ್ಲಿ ನಿಯೋಜಿಸಲಾಗಿದೆ. ಈ ಉಭಯಚರ ವಾಹನವು ಆಳವಾದ ನೀರು ಮತ್ತು ಒರಟಾದ ಭೂಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದ ಸಹಾಯದಿಂದ ರಕ್ಷಣಾ ತಂಡಗಳು ಪ್ರವಾಹದಲ್ಲಿ ಸಿಲುಕಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ತೆಲಂಗಾಣ
ತೆಲಂಗಾಣದಲ್ಲೂ ಮಳೆರಾಯನ ರಣಾರ್ಭಟ ಕಮ್ಮಿ ಏನಿಲ್ಲ.. ಲಂಗಾಣದ ರಾಷ್ಟ್ರೀಯ ಹೆದ್ದಾರಿ 44 ರ ಹಲವು ಭಾಗಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಇತ್ತ ಸಿರ್ಸಿಲ್ಲಾದಲ್ಲಿ ಮಳೆಯ ನಡುವೆಯೂ ಗಂಭೀರೋಪೇಟ್ ಮಾನೇರು ಯೋಜನೆಯ ಬಳಿ ಸಿಲುಕಿದ್ದ ಜನರನ್ನ ಸೇನಾ ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಒಟ್ಟಾರೆ, ಭಾರಿ ವರ್ಷಧಾರೆ ಹಾಗೂ ಪ್ರವಾಹಕ್ಕೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿದ್ದು, ಮಳೆ ಮುಂದುವರಿದ್ರೆ ಮತ್ತಷ್ಟು ಅನಾಹುತಗಳು ಆತಂಕ ಸೃಷ್ಟಿಸಿವೆ. ಕೊಂಚ ಗ್ಯಾಪ್​ ಕೊಟ್ಟಿದ್ದ ಮಳೆರಾಯ ದಕ್ಷಿಣದತ್ತ ಮುಖ ಮಾಡೋದಕ್ಕೆ ಶುರು ಮಾಡಿದ್ದಾನೆ ಅನ್ನೋ ಸೂಚನೆಗಳು ಸಿಕ್ಕಿವೆ.
/filters:format(webp)/newsfirstlive-kannada/media/media_files/2025/08/28/jammu-kashmir7-2025-08-28-08-41-17.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us