/newsfirstlive-kannada/media/media_files/2025/08/18/karnatka-rain02-2025-08-18-12-48-46.jpg)
ಕಳೆದ 24 ಗಂಟೆ ಅವಧಿಯಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆ
ಕರ್ನಾಟಕದಾದ್ಯಂತ ನಿನ್ನೆ ಬೆಳಿಗ್ಗೆ( ಆಗಸ್ಟ್ 17) 8.30 ರಿಂದ ಇಂದು ಬೆಳಿಗ್ಗೆ (ಆಗಸ್ಟ್ 18,2025) 8.30 ರವರೆಗೂ ಭಾರಿ ಮಳೆಯಾಗಿದೆ. ಉತ್ತರದ ತುತ್ತತುದಿಯಲ್ಲಿರುವ ಕರ್ನಾಟಕದ ಮುಕುಟ ಬೀದರ್ ಜಿಲ್ಲೆಯಿಂದ ಹಿಡಿದು ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೂ ಭಾರಿ ಮಳೆಯಾಗಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಸಾಧಾರಣದಿಂದ ಭಾರಿ ಪ್ರಮಾಣದ ಮಳೆಯಾಗಿದೆ. ಬೀದರ್ ಜಿಲ್ಲೆಯ ಕಮಲಾನಗರ ತಾಲ್ಲೂಕಿನ ಭಂಡರಾಕುಮಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋಬ್ಬರಿ 251 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ. 251 ಮಿಲಿಮೀಟರ್ ಅಂದರೇ, ಬರೋಬ್ಬರಿ 25 ಸೆಂಟೀಮೀಟರ್ ನಷ್ಟು ಭಾರಿ ಮಳೆಯಾಗಿದೆ. ಬಳಿಕ ಇದೇ ಕಮಲಾನಗರ ತಾಲ್ಲೂಕಿನ ಬೋಂತಿ ಗ್ರಾಮದಲ್ಲಿ 198.5 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಬೇಗರಾ ಗ್ರಾಮದಲ್ಲಿ 198 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ.
18ನೇ ಆಗಸ್ಟ್ 2025ರ ಬೆಳಗ್ಗೆ 8.30ರಂತೆ ರಾಜ್ಯ ದಲ್ಲಿ ದಾಖಲಾದ ಮಳೆ ಪ್ರಮಾಣ ವರದಿ. #KSNDMC@KarnatakaVarthepic.twitter.com/Tx7QaYhAzC
— Karnataka State Natural Disaster Monitoring Centre (@KarnatakaSNDMC) August 18, 2025
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕರ್ಕೇಶ್ವರದಲ್ಲಿ 168 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ. ಶೃಂಗೇರಿಯಲ್ಲಿ 109 ಮಿಲಿಮೀಟರ್ ಮಳೆಯಾಗಿದ್ದರೇ, ಪಕ್ಕದ ಉಡುಪಿ ಜಿಲ್ಲೆಯಲ್ಲೂ ಭಾರಿ ಪ್ರಮಾಣದ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಪ್ರಮಾಣದ ಮಳೆಯಾಗಿದೆ. ರಾಜ್ಯದಲ್ಲಿ ತುಮಕೂರು ನಗರದಲ್ಲಿ 19 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಕೊಪ್ಪಳದ ಜಿಲ್ಲೆಯ ಹಟ್ಟಿಯಲ್ಲಿ 12 ಮಿಲಿಮೀಟರ್ ನಷ್ಟು ಮಳೆಯಾಗಿರುವುದೇ 24 ಗಂಟೆಯ ಕನಿಷ್ಠ ಮಳೆ ಪ್ರಮಾಣವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಎಚ್.ಬಸವನಪುರ ಗ್ರಾಮದಲ್ಲಿ 15 ಮಿಲಿಮೀಟರ್ ಮಳೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶವು ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲೂ ಮಳೆ ಬಿದ್ದ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಿ ಪ್ರತಿ 24 ಗಂಟೆಗಳಿಗೊಮ್ಮೆ ಬಿಡುಗಡೆ ಮಾಡುತ್ತೆ. ಜನರಿಗೆ ಸೂಕ್ತ ಸಲಹೆಗಳನ್ನ ನೀಡುತ್ತೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎನ್ನುವುದನ್ನು ಕೆಎಸ್‌ಎನ್‌ಡಿಎಂಸಿ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದೆ.
— Karnataka State Natural Disaster Monitoring Centre (@KarnatakaSNDMC) August 18, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.