/newsfirstlive-kannada/media/media_files/2025/08/05/hebbala-flyover-loop-ramp333-2025-08-05-12-04-50.jpg)
ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಹೆಬ್ಬಾಳ ಪ್ಲೈ ಓವರ್ ಮೇಲೆಯೇ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ನೀಡಲು ಪ್ಲೈ ಓವರ್ ಲೂಪ್ ರಾಂಪ್ ನಿರ್ಮಾಣ ಮಾಡಲಾಗಿದೆ. ಈ ಲೂಪ್ ರಾಂಪ್ ನಿರ್ಮಾಣ ಕಾಮಗಾರಿ ಮುಗಿದಿದೆ. ಹೊಸದಾಗಿ ನಿರ್ಮಾಣವಾಗಿರುವ ಲೂಪ್ ರಾಂಪ್ ಅನ್ನು ಆಗಸ್ಟ್ 15 ಕ್ಕೂ ಮುನ್ನ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತೆ. ಇದನ್ನು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಗವಾರ ಕಡೆಯಿಂದ ಬರುವ ವಾಹನಗಳು ಈ ಲೂಪ್ ರಾಂಪ್ ಮೇಲೆ ಹತ್ತಿ ಮೇಖ್ರಿ ಸರ್ಕಲ್, ವಿಂಡ್ಸರ್ ಮ್ಯಾನರ್, ವಿಧಾನಸೌಧದ ಕಡೆಗೆ ಸಂಚಾರ ಮಾಡಬಹುದು. ಹೆಬ್ಬಾಳ ಪ್ಲೈ ಓವರ್ ಮೇಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹೊಸದಾಗಿ ಈ ಲೂಪ್ ರಾಂಪ್ ನಿರ್ಮಾಣ ಮಾಡಲಾಗಿದೆ. ಲೂಪ್ ರಾಂಪ್ ಮೂಲಕ ಈ ಮೊದಲು ಇದ್ದ ಹೆಬ್ಬಾಳ ಪ್ಲೈ ಓವರ್‌ಗೆ ಮತ್ತೊಂದು ಹೊಸ ರಸ್ತೆ ಸೇರ್ಪಡೆಯಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸ್ಥಳದ ಪೈಕಿ ಹೆಬ್ಬಾಳ ಪ್ಲೈ ಓವರ್ ಕೂಡ ಪ್ರಮುಖವಾದುದು. ಏರ್ ಪೋರ್ಟ್ ಗೆ ಹೋಗುವವರು, ಏರ್ ಪೋರ್ಟ್ ನಿಂದ ಬೆಂಗಳೂರು ಸಿಟಿಗೆ ಬರುವವರು ಹೆಬ್ಬಾಳ ಪ್ಲೈ ಓವರ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಹೊಸದಾಗಿ ಲೂಪ್ ರಾಂಪ್ ಅನ್ನು ನಿರ್ಮಾಣ ಮಾಡಲಾಗಿದೆ. ಈ ಲೂಪ್ ರಾಂಪ್ ಮೂಲಕ ಏರ್ ಪೋರ್ಟ್ ಕಡೆ ಸಂಚರಿಸುವ ವಾಹನಗಳು, ತುಮಕೂರು ರಸ್ತೆಯ ಕಡೆ ಸಂಚರಿಸುವ ವಾಹನಗಳಿಗೆ ಪ್ರತೇಕ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾರಂಭದಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿಗೆ ಲೂಪ್ ರಾಂಪ್ ನಿರ್ಮಾಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿತ್ತು. ಆದರೇ, ವಿಳಂಬವಾಗಿ ಕಾಮಗಾರಿ ಮುಗಿದಿದ್ದು, ಈಗ ಅಂತಿಮ ಟಚ್ ನೀಡಲಾಗುತ್ತಿದೆ. ಹೆಬ್ಬಾಳ ಪ್ಲೈ ಓವರ್‌ಗೆ ಹೊಸದಾಗಿ ಲೂಪ್ ರಾಂಪ್ ನಿರ್ಮಾಣ ಮಾಡಿರುವುದರಿಂದ ಪೀಕ್ ಅವರ್ ಮತ್ತು ಹಬ್ಬದ ಸಂದರ್ಭಗಳಲ್ಲಿ ಏರ್ ಪೋರ್ಟ್ ಗೆ ಹೋಗುವವರು ಮತ್ತು ಬರುವವರಿಗೆ ಬೇಗನೇ ತಮ್ಮ ಸ್ಥಳ ತಲುಪಲು ಅನುಕೂಲವಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ