/newsfirstlive-kannada/media/media_files/2025/09/09/literacy-rate-in-india-2025-09-09-16-43-09.jpg)
ಹಿಮಾಚಲ ಪ್ರದೇಶ ನಾಲ್ಕನೇ ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯ!
ಹಿಮಾಚಲ ಪ್ರದೇಶ ರಾಜ್ಯ ಸಾಕ್ಷರತೆಯಲ್ಲಿ ಶೇ 99.3 ರಷ್ಟು ಸಾಕ್ಷರತಾ ಪ್ರಮಾಣ ದಾಖಲಿಸಿದೆ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂದ್ ಸುಖ್ಖು ಹೇಳಿದ್ದಾರೆ. ರಾಜ್ಯವು ಪೂರ್ಣ ಪ್ರಮಾಣದ ಸಾಕ್ಷರತೆಯನ್ನ ಸಾಧಿಸಿದೆ. ರಾಜ್ಯದಲ್ಲಿ ಸದ್ಯ ಶೇ 99.3 ರಷ್ಟು ಸಾಕ್ಷರತಾ ಪ್ರಮಾಣ ಸಾಧಿಸಿದ್ದು, ಇದು ದೇಶದ ಸಾಕ್ಷರತಾ ಪ್ರಮಾಣ ಬೆಂಚ್ ಮಾರ್ಕ್ ಶೇ 95 ಕ್ಕಿಂತ ಹೆಚ್ಚಿದೆ ಎಂದು ಸಿಎಂ ಸುಖವೀಂದರ್ ಸಿಂಗ್ ಸುಖ್ಖು ಹೇಳಿದ್ದಾರೆ. ರಾಜ್ಯದಲ್ಲಿ ಉತ್ತಮ ಶಿಕ್ಷಣವನ್ನ ನೀಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರಕ್ಕೆ ಜನರು ಬೆಂಬಲವನ್ನ ಸೂಚಿಸಿದ್ದಾರೆ ಎಂದು ಸಿಎಂ ಸುಖವೀಂದರ್ ಸಿಂಗ್ ಸುಖ್ಖು ಹೇಳಿದ್ದಾರೆ.
ಹಿಮಾಚಲ ಪ್ರದೇಶ ರಾಜ್ಯವು ದೇಶದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ನಾಲ್ಕನೇ ರಾಜ್ಯವಾಗಿದೆ. ಹಿಮಾಚಲ ಪ್ರದೇಶಕ್ಕೂ ಮುನ್ನ ಮೀಜೋರಾಂ, ಗೋವಾ, ತ್ರಿಪುರ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್ ಈ ಸಾಧನೆಯನ್ನು ಮಾಡಿವೆ.
2025ರ ಮೇ, 20 ರಂದು ಮಿಜೋರಾಂ ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿಕೊಂಡ ದೇಶದ ಮೊದಲ ರಾಜ್ಯವಾಗಿದೆ. ಮಿಜೋರಾಂ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ.98.2 ರಷ್ಟು ಇದೆ. 2011 ರಲ್ಲಿ ಮಿಜೋರಾಂ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ.91.33 ರಷ್ಟಿತ್ತು, ಆಗ ಮಿಜೋರಾಂ ಸಾಕ್ಷರತೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು.
ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರದಾನ್
ಇನ್ನೂ ಗೋವಾ ರಾಜ್ಯವು ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿಕೊಂಡ ಎರಡನೇ ರಾಜ್ಯವಾಗಿದೆ. ಗೋವಾ ರಾಜ್ಯ ಶೇ.100 ರಷ್ಟು ಸಾಕ್ಷರತೆಯನ್ನು ಸಾಧಿಸಿದೆ. ರಾಜ್ಯದಲ್ಲಿ ತರಬೇತಿಯ ಬಳಿಕ ಗೋವಾ ಶೇ.100 ರಷ್ಟು ಸಾಕ್ಷರತೆ ಸಾಧಿಸಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಈ ಮೊದಲು ಗೋವಾದ ಸಾಕ್ಷರತೆಯ ಪ್ರಮಾಣ ಶೇ.94 ರಷ್ಟು ಇತ್ತು.
ಇನ್ನೂ ತ್ರಿಪುರ ರಾಜ್ಯವು ಸಂಪೂರ್ಣ ಸಾಕ್ಷರತೆ ಘೋಷಿಸಿಕೊಂಡ ಮೂರನೇ ರಾಜ್ಯ. ತ್ರಿಪುರದ ಸಾಕ್ಷರತೆಯ ಪ್ರಮಾಣ ಶೇ.95.6 ರಷ್ಟು ಇದೆ. 1961 ರಲ್ಲಿ ತ್ರಿಪುರದ ಸಾಕ್ಷರತೆಯ ಪ್ರಮಾಣ ಶೇ.20.2 ರಷ್ಟು ಮಾತ್ರ ಇತ್ತು. ಈಗ ಅದ್ಭುತ ಸಾಧನೆ ಮಾಡಿದೆ.
ಇನ್ನೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಡಾಖ್ ಶೇ.97 ರಷ್ಟು ಸಾಕ್ಷರತೆಯನ್ನು ಸಾಧಿಸಿದೆ ಎಂದು ಲೆಫ್ಟಿನೆಂಟ್ ಗರ್ವನರ್ ಬಿ.ಡಿ.ಮಿಶ್ರಾ ಘೋಷಿಸಿದ್ದಾರೆ. ಸಂಪೂರ್ಣ ಸಾಕ್ಷರತೆ ಸಾಧಿಸಿದ ಮೊದಲನೇ ಕೇಂದ್ರಾಡಳಿತ ಪ್ರದೇಶ ಲಡಾಖ್ ಆಗಿದೆ.
ಇನ್ನೂ ಭಾರತವು 2023-24 ರಲ್ಲಿ ಶೇ.80.9 ರಷ್ಟು ಸಾಕ್ಷರತೆಯನ್ನು ಸಾಧಿಸಿದೆ ಎಂದು ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರೂ ಸಾಕ್ಷರರಾದಾಗ ಮಾತ್ರವೇ ನಿಜವಾದ ಪ್ರಗತಿ ಬರಲು ಸಾಧ್ಯ ೞಎಂದು ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ.
ಇನ್ನೂ ಕೇರಳ ರಾಜ್ಯವು ಶೇ.96.2 ರಷ್ಟು ಸಾಕ್ಷರತೆಯನ್ನು ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.