/newsfirstlive-kannada/media/media_files/2025/09/27/hindu-economic-forum-02-2025-09-27-16-38-30.jpg)
ಇಂದು ಜಾಗತಿಕ ಮಟ್ಟದಲ್ಲಿ ಹಿಂದೂ ಉದ್ಯಮಿಗಳು, ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಂತಿತರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಹಿಂದೂಗಳು ತಮ್ಮ ವ್ಯಾಪಾರ, ವಹಿವಾಟು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲೂ ಹಿಂದೂಗಳು ವ್ಯಾಪಾರ ನಡೆಸಿ ಬದುಕು ಕಟ್ಟಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಹಿಂದೂ ಉದ್ಯಮಿಗಳು, ವ್ಯಾಪಾರಸ್ಥರು ಹೊಸ ವ್ಯಾಪಾರ ವಹಿವಾಟು ಪ್ರಾರಂಭಿಸಲು ಭಯಭೀತರಾಗಿದ್ದಾರೆ.
ನಮ್ಮ ಪೂರ್ವಜರು ವೇದಗಳಲ್ಲಿ ಶತ ಹಸ್ತ ಸಮಾಹಾರ, ಸಹಸ್ರ ಹಸ್ತ ಸಂಕೀರ, ಅಂದರೆ ನೂರು ಕೈಗಳಿಂದ ಸಂಪತ್ತು ಸೃಷ್ಟಿಸಿ, ಸಾವಿರ ಕೈಗಳಿಂದ ಹಂಚಿ ಎಂದು ಹೇಳಿದ್ದಾರೆ. ಅದರಿಂದಾಗಿ ಕ್ರಿಸ್ತ ಶಕ 1 ರಷ್ಟು ಹಿಂದೆ ಅಂದರೆ ಸುಮಾರು 2000 ವರ್ಷಗಳ ಹಿಂದೆಯೇ ಹಿಂದೂಗಳು ಜಗತ್ತಿನ ಆರ್ಥಿಕತೆಗೆ ಶೇ. 33 ರಷ್ಟು ಕೊಡುಗೆ ಕೊಡುತ್ತಿದ್ದರು. ಇದು ಈಗ ಕೇವಲ ಶೇ. 5 ಕ್ಕೆ ಕುಸಿದಿದೆ.
ಇದಕ್ಕೆ ಹಿಂದೂ ಸಮಾಜದಲ್ಲಿ ವ್ಯಾಪಾರ ವಹಿವಾಟುಗಳನ್ನು ಬೆಂಬಲಿಸುವ, ಹಿಂದೂಗಳನ್ನು ಆರ್ಥಿಕವಾಗಿ ಒಟ್ಟಿಗೆ ತರುವ, ಹಿಂದೂಗಳ ನಡುವೆ ವಿಶ್ವಾಸ, ಅಭಿಮಾನ ಬೆಳೆಸುವ ವಾತಾವರಣ ಹಾಗೂ ಸಹಕಾರ ಇಲ್ಲದಿರುವುದು ಕೂಡ ಕಾರಣವಾಗಿದೆ.
ಈಗ ಹಿಂದೂ ಯುವ ಉದ್ಯಮಿಗಳನ್ನು, ವ್ಯಾಪಾರಸ್ಥರನ್ನು, ಸಣ್ಣಪುಟ್ಟ ವಹಿವಾಟು ನಡೆಸುವವರನ್ನು ಒಟ್ಟಿಗೆ ಸೇರಿಸಿ ಈ ಇತಿಹಾಸ ಮರು ನಿರ್ಮಾಣ ಮಾಡುವ ಸಂದರ್ಭ ಬಂದೊದಗಿದೆ.
ಇದಕ್ಕೆಲ್ಲ ಈಗ ಉತ್ತರ ನೀಡುತ್ತಿರುವುದೇ ಹಿಂದೂ ಎಕನಾಮಿಕ್ ಫೋರಂ (HEF)
HEF ಹಿಂದೂ ಸಮಾಜದ ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು, ವ್ಯಾಪಾರಿಗಳು, ಬ್ಯಾಂಕರ್‌ಗಳು, ಹೂಡಿಕೆದಾರರು, ತಾಂತ್ರಿಕರು, ವೃತ್ತಿಪರರು, ಆರ್ಥಶಾಸ್ತ್ರಜ್ಞರು, ಪಂಡಿತರು ಹಾಗೂ ಚಿಂತಕರನ್ನು ಒಳಗೊಂಡ ಜಗತ್ತಿನ ಏಕೈಕ ಜಾಗತಿಕ ಮಟ್ಟದ ಹಿಂದೂ ವ್ಯಾಪಾರ ವೇದಿಕೆ ಆಗಿದೆ. ಇದರ ಉದ್ದೇಶ ಪ್ರತಿ ಹಿಂದೂ ವ್ಯಾಪಾರಸ್ಥರು, ಉದ್ಯಮಿಗಳು ಆರ್ಥಿಕವಾಗಿ ಸಬಲರಾಗಬೇಕು, ಒಗ್ಗಟ್ಟು ಆಗಬೇಕು.
ಪ್ರಸ್ತುತ ಹಿಂದೂ ಎಕನಾಮಿಕ್ ಫೋರಂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಮಟ್ಟದ ಏಕೈಕ ಹಿಂದೂ ಬ್ಯುಸಿನೆಸ್ ಫೋರಂ ಆಗಿದೆ.
ಎರಡನೇ ಮಹಾಯುದ್ಧದ ಮಾರಣ ಹೋಮದ ನಂತರವೂ ಯೆಹೂದಿಗಳು ಕೇವಲ ಒಗ್ಗಟ್ಟಿನಿಂದ ತಮ್ಮ ಗತ ವೈಭವ ಪುನರ್ ನಿರ್ಮಿಸಿದರು. ಪ್ರಸ್ತುತ ಯೆಹೂದಿಗಳು ಜಗತ್ತಿನ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿ ಇರುವ ಸಮುದಾಯವಾಗಿ ಗುರುತಿಸಲ್ಪಟ್ಟಿದೆ. ಅದೇ ರೀತಿ, ದ್ವಿತೀಯ ವಿಶ್ವಯುದ್ಧದ ಧ್ವಂಸದ ನಂತರ ಜಪಾನ್ ಮತ್ತು ಜರ್ಮನಿ, ಇತ್ತೀಚಿನ ವರ್ಷಗಳಲ್ಲಿ ಚೀನಾ ಸ್ವಯಂ ಸಂಘಟನೆಯ ಮೂಲಕ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಿವೆ. ಈ ಹಿನ್ನೆಲೆಯಲ್ಲಿ ಈಗ HEF ಹಿಂದೂಗಳನ್ನು ಒಂದೇ ಆರ್ಥಿಕ ವೇದಿಕೆಗೆ ಕರೆತರುವ ಬೃಹತ್ ಪ್ರಯತ್ನಕ್ಕೆ ಚಾಲನೆ ನೀಡಿದೆ.
HEF ನ ಉದ್ದೇಶವೆಂದರೆ ಹಿಂದೂಗಳಿಗೆ ಸ್ಥಳೀಯವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಲಭ್ಯವಾಗುವ ಎಲ್ಲಾ ರೀತಿಯ ಸಂಪರ್ಕ ಸಾಧನಗಳು ಹಣಕಾಸಿನ ವ್ಯವಸ್ಥೆ, ಬ್ಯಾಂಕಿಂಗ್ ವ್ಯವಸ್ಥೆ ಮಾಡುವುದು ಆಗಿದೆ. ಇದಕ್ಕಾಗಿ HEF ದೇಶದ ವಿವಿಧ ಭಾಗಗಳಲ್ಲಿ ಹಣಕಾಸು ವಿಭಾಗಗಳನ್ನು ಪ್ರಾರಂಭಿಸುತ್ತಿದೆ. ಇಂತಹ ಪೂರಕ ಆರ್ಥಿಕ ಶಕ್ತಿಯನ್ನು ನಾವು ಸಾಧಿಸಿದಾಗ, ನಮ್ಮ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಿ, ಜಾಗತಿಕ ಸಮುದಾಯದಲ್ಲಿ ಗೌರವ ಪಡೆಯಲು ಸಾಧ್ಯವಾಗುತ್ತದೆ.
ದೃಷ್ಟಿಕೋನ (VISION)
ಒಟ್ಟಾಗಿ ಬೆಳೆಯೋಣ. ಒಟ್ಟಾಗಿ ಹಂಚಿಕೊಳ್ಳೋಣ.
ಮಿಷನ್ (MISSION)
100 ಕೈಗಳಿಂದ ಸಂಪತ್ತು ಸೃಷ್ಟಿಸಿ, 1000 ಕೈಗಳಿಂದ ಹಂಚಿ.
ತತ್ವ (PHILOSOPHY)
“ಧರ್ಮಸ್ಯ ಮೂಲಂ ಅರ್ಥಃ” (ಆರ್ಥಿಕತೆಯೇ ಶಕ್ತಿ) ~ ಆಚಾರ್ಯ ಚಾಣಕ್ಯ
ಹೆಚ್ಚಿನ ಮಾಹಿತಿಗಳಿಗೆ, ಸ್ಟಾಲ್ ಗಳಿಗೆ, ಹಿಂದೂ ಬಿಜಿನೆಸ್ ಕೂಪನ್ ಗೆ, ಶ್ರೀ ಸ್ವಾಮಿ ವಿಗ್ಯಾನಾನಂದ ಜಿ ಅವರು ಬರೆದಿರುವ 'ದ ಹಿಂದು ಮ್ಯಾನಿಫೆಸ್ಟೋ' ಪುಸ್ತಕ ಬಿಡುಗಡೆಯ ಬಗ್ಗೆ, ಶಿವಶ್ರೀ ಸ್ಕಂದಪ್ರಸಾದ್ ಅವರ ಸಂಗೀತ ಕಚೇರಿಯ ಪ್ರವೇಶದ ಟಿಕೆಟ್ ಬಗ್ಗೆ ಮಾಹಿತಿಗೆ ತಕ್ಷಣ ಈ ನಂಬರ್ ಗಳಿಗೆ ವಾಟ್ಸಪ್ ಮಾಡಿ. 94812 57666 | 99804 78444
ಬೆಂಗಳೂರಿನ ಗಾಂಧಿನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಅಡಿಟೋರಿಯಂನಲ್ಲಿ ಅಕ್ಟೋಬರ್ 4,5 ರಂದು ಹಿಂದೂ ಬ್ಯುಸಿನೆಸ್ ಎಕ್ಸ್ ಪೋ, ಹಿಂದೂ ಫುಡ್ ಎಕ್ಸ್ ಪೋ ನಡೆಯಲಿದೆ. ಜೊತೆಗೆ ಸ್ವಾಮಿ ವಿಗ್ಯಾನಾನಂದ ಜೀ ಅವರು ಬರೆದಿರುವ ಹಿಂದೂ ಮ್ಯಾನಿಫೆಸ್ಟೋ ಪುಸ್ತಕದ ಬಿಡುಗಡೆ ನಡೆಯಲಿದೆ. ನೂರಕ್ಕೂ ಅಧಿಕ ಸ್ಟಾಲ್ ಗಳನ್ನು ತೆರೆಯಲು ಅವಕಾಶ ಇದೆ. ಮೇಲೆ ನೀಡಿರುವ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಿ ಸ್ಟಾಲ್ ಗಳನ್ನು ಬುಕ್ ಮಾಡಬಹುದು. ಹಿಂದೂ ಬ್ಯುಸಿನೆಸ್ ಕೂಪನ್ ಅನ್ನು ಪಡೆಯಬಹುದು.
ಹಿಂದೂ ಎಕ್ಸ್ ಪೋ, ಫುಡ್ ಫೆಸ್ಟ್ ಗೆ UGGISO ಆಪ್ ಮೂಲಕ ನೀವು ಹಿಂದೂ ಬಿಸಿನೆಸ್ ಕೂಪನ್, ಸಂಗೀತ ಕಚೇರಿ ಟಿಕೆಟ್ ಗಳನ್ನು ಖರೀದಿಸಬಹುದು. ಜೊತೆಗೆ ಮೇಲೆ ನೀಡಿರುವ ಮೊಬೈಲ್ ನಂಬರ್, ವಾಟ್ಸಾಫ್ ನಂಬರ್ ಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.