/newsfirstlive-kannada/media/media_files/2025/09/27/hindu-economic-forum-02-2025-09-27-16-38-30.jpg)
ಮುಂಬೈನಲ್ಲಿ ನಡೆದಿದ್ದ ಹಿಂದೂ ಎಕನಾಮಿಕ್ ಪೋರಂ ಸಮಾವೇಶದ ದೃಶ್ಯ
ಹಿಂದೂ ಎಕನಾಮಿಕ್ ಫೋರಂ ಅಕ್ಟೋಬರ್ 4 ಮತ್ತು 5 ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ಎರಡು ದಿನದ HINDU BUSINESS EXPO ಮತ್ತು HINDU FOOD EXPO ಹಾಗೂ ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ ನ ಸ್ಥಾಪಕರು ಹಾಗೂ ವಿಶ್ವ ಹಿಂದೂ ಪರಿಷತ್ ನ ಗ್ಲೋಬಲ್ ಜಾಯಿಂಟ್ ಜನರಲ್ ಸೆಕ್ರೆಟರಿ ಆಗಿರುವ ಶ್ರೀ ಸ್ವಾಮಿ ವಿಗ್ಯಾನಾನಂದ ಜಿ ಅವರು ಬರೆದಿರುವ ದ ಹಿಂದು ಮ್ಯಾನಿಫೆಸ್ಟೋ ಪುಸ್ತಕದ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.
ಈ ಸಂದರ್ಭದಲ್ಲಿ ಸುಮಾರು 100 ಕ್ಕೂ ಅಧಿಕ ಸ್ಟಾಲ್ ಗಳ ಮೂಲಕ ಹಿಂದೂ ಬಿಸಿನೆಸ್ ಎಕ್ಸ್ ಪೋ ನಡೆಯಲಿದೆ. ಎರಡು ದಿನಗಳಿಗೆ 10 ಅಡಿ ಉದ್ದ ಮತ್ತು 10 ಅಡಿ ಅಗಲದ ಸ್ಟಾಲ್ ಅನ್ನು ಜಿಎಸ್ ಟಿ ಸೇರಿದಂತೆ ಹಾಗೂ ಎರಡು ದಿನಗಳ ಕಾಲ ಇಬ್ಬರಿಗೆ 2000 ರೂಪಾಯಿ ಮೌಲ್ಯದ ಫುಡ್ ಕೂಪನ್ ಒಳಗೊಂಡಂತೆ ಕೇವಲ ರೂ.13999 ರೂಪಾಯಿಗೆ ನೀಡಲಾಗುತ್ತಿದೆ.
ಅದೇ ರೀತಿ ಎರಡು ದಿನಗಳಿಗೆ ಆರು ಅಡಿ ಅಗಲ ಮತ್ತು ಆರು ಅಡಿ ಉದ್ದ ಅಳತೆಯ ಬಿಸಿನೆಸ್ ಟೇಬಲ್ ಗೆ ಜಿಎಸ್ ಟಿ ಸೇರಿದಂತೆ ಹಾಗೂ ಎರಡು ದಿನಗಳ ಕಾಲ ಇಬ್ಬರಿಗೆ 2000 ರೂಪಾಯಿ ಮೌಲ್ಯದ ಫುಡ್ ಕೂಪನ್ ಒಳಗೊಂಡಂತೆ ಕೇವಲ ರೂ.8999 ರೂಪಾಯಿಗೆ ನೀಡಲಾಗುತ್ತಿದೆ.
ಸ್ಟಾಲ್ ಬೇಕಾದವರು ತಕ್ಷಣ 94812 57666 ಹಾಗೂ 98866 56061 ಈ ನಂಬರ್ ಸಂಪರ್ಕಿಸಲು ಕೋರಲಾಗಿದೆ ಎಂದು ಹಿಂದೂ ಎಕನಾಮಿಕ್ ಫೋರಂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಟಿ. ಆರ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.