/newsfirstlive-kannada/media/media_files/2025/08/15/gujarat-honour-killing-022-2025-08-15-18-47-18.jpg)
ಹರೀಶ್ ಚೌಧರಿ ಹಾಗೂ ಚಂದ್ರಿಕಾ ಚೌಧರಿ ಜೊತೆಯಾಗಿರುವ ಚಿತ್ರ
ಗೆಳೆಯನಿಗೆ ರಕ್ಷಿಸು ಎಂದು ಮೆಸೇಜ್ ಮಾಡಿದ ಹುಡುಗಿಯೊಬ್ಬಳು ಇದಾದ ಕೆಲ ಗಂಟೆಗಳಲ್ಲಿ ಸಾವನ್ನಪ್ಪಿದಂತಹ ಘಟನೆ ನಡೆದಿದ್ದು, ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ಮೂಡಿದೆ. ಚಂದ್ರಿಕಾ ಚೌಧರಿ ಸಾವನ್ನಪ್ಪಿದ ಯುವತಿ. ಈಕೆ ಮಧ್ಯರಾತ್ರಿ ತನ್ನ ಗೆಳೆಯನಿಗೆ ಇನ್ಸ್ ಟಗ್ರಾಮ್ ನಲ್ಲಿ ರಕ್ಷಿಸುವಂತೆ ಕೋರಿ( ಸೇವ್ ಮೀ) ಸಂದೇಶ ಕಳುಹಿಸಿದ್ದಾಳೆ. ಇದಾದ ಕೆಲ ಗಂಟೆಗಳಲ್ಲಿ ಅವಳ ಸಾವು ಸಂಭವಿಸಿದೆ. ಆರಂಭದಲ್ಲಿ ಇದು ಸಹಜ ಸಾವಿನಂತೆ ಕಾಣುತ್ತಿದ್ದು, ಈಗ ಪೋಷಕರ ಮೇಲೆ ಅನುಮಾನ ಮೂಡಿದೆ.
ಚಿಕ್ಕಪ್ಪನ ಬಂಧನ, ಅಪ್ಪ ನಾಪತ್ತೆ!
ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗಿಳಿದ ಪೊಲೀಸರು ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮೃತ ಚಂದ್ರಿಕಾ ಚೌಧರಿಯನ್ನು ಆಕೆಯ ತಂದೆ ಸೇಧಾಭಾಯಿ ಪಟೇಲ್ ಮತ್ತು ಚಿಕ್ಕಪ್ಪ ಶಿವಭಾಯಿ ಪಟೇಲ್ ಅವರು ಥರಾಡ್‌ನ ದಾಂಟಿಯಾದಲ್ಲಿರುವ ಅವರ ಮನೆಯಲ್ಲಿ ಕೊಲೆ ಮಾಡಿದ್ದಾರೆ. ಆಕೆಯ ತಂದೆ ನಾಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ನಾಲಾ ತಿಳಿಸಿದ್ದಾರೆ.
ಪ್ರೀತಿಗೆ ನಿರಾಕರಣೆ ಇತ್ತು!
ಮೃತ ಚಂದ್ರಿಕಾ ಚೌಧರಿಯು ಹರೀಶ್ ಚೌಧರಿ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಳು. ಆದರೆ ಆಕೆಯ ಮನೆಯರಿಗೆ ಇದು ಇಷ್ಟವಿರಲಿಲ್ಲ . ಆಕೆ ತಾವು ನೋಡಿದ ಹುಡುಗನನ್ನು ಮದುವೆಯಾಗಬೇಕು ಎಂದು ಅವರು ಬಯಸಿದ್ದರು. ಇತ್ತ ಪೋಷಕರು ತನ್ನ ಪ್ರೀತಿಗೆ ಒಪ್ಪುವುದಿಲ್ಲ ಎಂಬ ವಿಚಾರ ತಿಳಿದ ಚಂದ್ರಿಕಾ ಆ ವಿಚಾರವನ್ನು ಗೆಳೆಯ ಹರೀಶ್‌ಗೆ ತಿಳಿಸಿದ್ದಳು. ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದು ರಾತ್ರಿ ಗೆಳೆಯ ಹರೀಶ್ ಗೆ ಮೆಸೇಜ್ ಮಾಡಿದ್ದ ಆಕೆ ತನ್ನ ಕುಟುಂಬದಿಂದ ತನ್ನನ್ನು ರಕ್ಷಿಸುವಂತೆ ಕೇಳಿದ್ದಳು. ಬಂದು ನನ್ನನ್ನು ಕರೆದುಕೊಂಡು ಹೋಗಿ ಇಲ್ಲದಿದ್ದರೆ, ನನ್ನ ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ನನಗೆ ಮದುವೆ ಮಾಡುತ್ತಾರೆ. ನಾನು ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಉಳಿಸಿ ಎಂದು ಆಕೆ ಕೊನೆಯದಾಗಿ ತನ್ನ ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದಾಳೆ.
ಆಕೆ ಸಂದೇಶ ಕಳುಹಿಸಿದ ಕೆಲವು ಗಂಟೆಗಳ ನಂತರ ಆಕೆ ಮನೆಯಲ್ಲೇ ಶವವಾಗಿದ್ದಳು. ಆರಂಭದಲ್ಲಿ, ಇದು ಆತ್ಮ8ತ್ಯೆಯಂತೆ ಕಂಡುಬಂದರೂ, ಪೊಲೀಸರಿಗೆ ನೀಡಿದ ದೂರು ತನಿಖೆಗೆ ದಾರಿ ಮಾಡಿಕೊಟ್ಟಿತು. ತನ್ನ ಗೆಳತಿಯ ಮರಣದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಹರೀಶ್, ಚಂದ್ರಿಕಾ ಸ್ವಾಭಾವಿಕವಾಗಿ ಸಾಯಲಿಲ್ಲ, ಬದಲಾಗಿ ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.