/newsfirstlive-kannada/media/media_files/2025/09/11/cyberabad-renu-agarawal-murder-2025-09-11-12-57-27.jpg)
ಸೈಬರಾಬಾದ್ ನಲ್ಲಿ ಹತ್ಯೆಯಾದ ರೇಣು ಅಗರವಾಲ್
ಹೈದರಾಬಾದ್‌ನ ಸೈಬರಾಬಾದ್‌ನಲ್ಲಿ ಅಪಾರ್ಟ್ ಮೆಂಟ್‌ನ ಪ್ಲ್ಯಾಟ್ ನಲ್ಲಿ ವಾಸ ಇದ್ದ ಗೃಹಿಣಿಯನ್ನು ಆಕೆಯ ಪ್ಲ್ಯಾಟ್ ನಲ್ಲಿ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. 50 ವರ್ಷದ ಗೃಹಿಣಿ ರೇಣು ಅಗರವಾಲ್ ರ ಕೈ, ಕಾಲುಗಳನ್ನು ಕಟ್ಟಿ ಹಾಕಿ, ಪ್ರೆಷರ್ ಕುಕ್ಕರ್ ನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಬಳಿಕ ಹಂತಕರು ರೇಣು ಅಗರವಾಲ್ ಪ್ಲ್ಯಾಟ್ ನಲ್ಲಿ ಸ್ನಾನ ಮಾಡಿ ರಕ್ತ ಸಿಕ್ತ ಬಟ್ಟೆಗಳನ್ನು ಬದಲಾಯಿಸಿಕೊಂಡು ಪ್ಲ್ಯಾಟ್ ನಿಂದ ಪರಾರಿಯಾಗಿದ್ದಾರೆ.
ಸೈಬರಾಬಾದ್‌ನ ಗೇಟೆಡ್ ಕಮ್ಯೂನಿಟಿಯ ಅಪಾರ್ಟ್ ಮೆಂಟ್ ನಲ್ಲಿ ಈ ಭೀಕರ ಹತ್ಯೆಯ ಘಟನೆ ಹಗಲ್ಲಲ್ಲೇ ನಡೆದಿದೆ. ಇದರಿಂದಾಗಿ ಗೇಟೆಡ್ ಕಮ್ಯೂನಿಟಿಗಳ ಭದ್ರತೆ, ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಐಟಿ ಹಬ್ ಆಗಿರುವ ಸೈಬರಾಬಾದ್‌ನ ಸ್ವಾನ್ ಲೇಕ್ ಅಪಾರ್ಟ್ ಮೆಂಟ್‌ನ 13ನೇ ಪ್ಲೋರ್ ನಲ್ಲಿ ರೇಣು ಅಗರವಾಲ್ ತಮ್ಮ ಪತಿ ಹಾಗೂ 26 ವರ್ಷದ ಮಗನ ಜೊತೆ ವಾಸ ಇದ್ದರು. ರೇಣು ಅಗರವಾಲ್ ಪತಿ ಸ್ಟೀಲ್ ಬ್ಯುಸಿನೆಸ್ ನಲ್ಲಿದ್ದರು. ಬೆಳಿಗ್ಗೆ 10 ಗಂಟೆಗೆ ರೇಣು ಅಗರವಾಲ್ ಪತಿ ಪ್ಲ್ಯಾಟ್ ನಿಂದ ಕೆಲಸಕ್ಕಾಗಿ ಹೊರಗೆ ಹೋಗಿದ್ದಾರೆ. ಸಂಜೆ 5 ಗಂಟೆಯ ವೇಳೆಗೆ ಪತ್ನಿ ರೇಣುಗೆ ಪತಿ ಪೋನ್ ಕಾಲ್ ಮಾಡಿದ್ದಾರೆ. ಆದರೇ, ಪೋನ್ ಕಾಲ್ ಅನ್ನು ರೇಣು ಅಗರವಾಲ್ ರೀಸೀವ್ ಮಾಡಿಲ್ಲ. ಅನಿರೀಕ್ಷಿತ ಘಟನೆಯಿಂದ ಅಚ್ಚರಿಗೊಳಗಾದ ರೇಣು ಅಗರವಾಲ್ ಪತಿ ತಕ್ಷಣವೇ ಪ್ಲ್ಯಾಟ್ ಗೆ ಓಡೋಡಿ ಬಂದಿದ್ದಾರೆ. ಪ್ಲ್ಯಾಟ್ ನ ಬಾಗಿಲು ಹಾಕಿಯೇ ಇತ್ತು. ಬೆಲ್ ಮಾಡಿದರೂ ಬಾಗಿಲು ತೆಗೆದಿಲ್ಲ. ಬಳಿಕ ಪ್ಲಂಬರ್ ಸಹಾಯದಿಂದ ಬಾಲ್ಕನಿ ಮೂಲಕ ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆಯೊಳಗೆ ಹೋದಾಗ ರೇಣು ಅಗರವಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಕೇಶ್ ಮತ್ತು ರೇಣು ಅಗರವಾಲ್ ಪ್ಲ್ಯಾಟ್ ಹೊರಗೆ ಜಮಾಯಿಸಿದ ಜನರು
ರೇಣು ಅಗರವಾಲ್ ಅವರ ಕೈ , ಕಾಲುಗಳನ್ನು ಕಟ್ಟಿರುವುದು ಪೊಲೀಸರು ಬಂದು ನೋಡಿದಾಗ ಗೊತ್ತಾಗಿದೆ. ಜೊತೆಗೆ ಫ್ರೆಷರ್ ಕುಕ್ಕರ್ ನಿಂದ ರೇಣು ಅಗರವಾಲ್ ಗೆ ಹೊಡೆಯಲಾಗಿತ್ತು. ಚಾಕು, ಕತ್ತರಿಯಿಂದ ಕುತ್ತಿಗೆಯನ್ನು ಸೀಳಲಾಗಿತ್ತು.
ಮನೆಗೆ ನುಗ್ಗಿದ್ದ ಹಂತಕರು ಮನೆಯಲ್ಲಿದ್ದ 40 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದರು. ಪರಾರಿಯಾಗುವ ಮುನ್ನ ಮನೆಯಲ್ಲಿ ಸ್ನಾನ ಮಾಡಿದ್ದಾರೆ. ತಮ್ಮ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ರೇಣು ಅಗರವಾಲ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮನೆಗೆಲಸದವರೇ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಓರ್ವ ಮನೆಗೆಲಸದವನು, ರೇಣು ಅಗರವಾಲ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಪಕ್ಕದ ಪ್ಲ್ಯಾಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದ. ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಮನೆಕೆಲಸದವರು 13ನೇ ಪ್ಲೋರ್ ಪ್ರವೇಶ ಮಾಡುವ ದೃಶ್ಯ ದಾಖಲಾಗಿದೆ. ಸಂಜೆ 5.02 ಕ್ಕೆ ಇಬ್ಬರು ಹೊರ ಬಂದಿದ್ದಾರೆ. ಇಬ್ಬರು ಮನೆಕೆಲಸದವರೇ ಈ ಹತ್ಯೆ ಮಾಡಿದ್ದಾರೆ. ಬಳಿಕ ಜಾರ್ಖಂಡ್ ರಾಜ್ಯದ ರಾಂಚಿಗೆ ಪರಾರಿಯಾಗಿದ್ದಾರೆ.
ಹರ್ಷ ಎಂಬ ಮನೆಕೆಲಸದಾತ, ಜಾರ್ಖಂಡ್ ರಾಜ್ಯದವನಾಗಿದ್ದು, ರೇಣು ಅಗರವಾಲ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಈತನನ್ನು 10 ದಿನಗಳ ಹಿಂದೆ ಏಜೆನ್ಸಿಯೊಂದರಿಂದ ಮನೆ ಕೆಲಸಕ್ಕಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇನ್ನೂ ನೆರೆ ಮನೆಯ ಕೆಲಸಗಾರ ರೋಷನ್, 14ನೇ ಪ್ಲೋರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಹಂತಕರ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿವೆ.
ಪ್ರೆಷರ್ ಕುಕ್ಕರ್ ನಿಂದ ಹೊಡೆದು ಹತ್ಯೆ, ಸಿಸಿಟಿವಿಯಲ್ಲಿ ದಾಖಲಾದ ಹಂತಕರ ದೃಶ್ಯ .
ರೋಷನ್ ಗೆ ಕೆಲಸ ನೀಡಿದ್ದವರ ಮನೆಯ ಬೈಕ್ ನಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಕುಕ್ಕಟಪಲ್ಲಿ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು, ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.