ಯೂಟ್ಯೂಬರ್ ಸಮೀರ್‌ಗೆ ಪೊಲೀಸ್ ವಿಚಾರಣೆ ಬಿಸಿ ಹೇಗಿತ್ತು? ಮುಂದೇನಾಗುತ್ತೆ?

ಯೂಟ್ಯೂಬರ್ ಸಮೀರ್ ನನ್ನು ನಿನ್ನೆ ಎಸ್‌ಐಟಿ ಪೊಲೀಸರು ಬರೋಬ್ಬರಿ 9 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ. ಮಹೇಶ್ ಶೆಟ್ಟಿ ತಿಮ್ಮರೋಡಿ ಸೋದರನ ಕಾರ್ ನಲ್ಲಿ ವಿಚಾರಣೆಗೆ ಬಂದಾಗಲೇ ಸಮೀರ್‌ಗೂ ಮಹೇಶ್ ಶೆಟ್ಟಿ ತಿಮ್ಮರೋಡಿಗೂ ಸಂಪರ್ಕ ಇರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮೀರ್‌ ಆರ್ಥಿಕ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆದಿದೆ.

author-image
Chandramohan
sameer md(6)

ಪೊಲೀಸ್ ವಿಚಾರಣೆಗೆ ಹಾಜರಾಗಿರುವ ಸಮೀರ್‌

Advertisment
  • ನಿನ್ನೆ ದೂತ ಸಮೀರ್‌ಗೆ 9 ಗಂಟೆ ಪೊಲೀಸ್ ವಿಚಾರಣೆ
  • ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿದ್ದ ಬಗ್ಗೆ ವಿಚಾರಣೆ
  • ಸಮೀರ್ ಆರ್ಥಿಕ ವ್ಯವಹಾರಗಳ ಬಗ್ಗೆ ತೀವ್ರ ವಿಚಾರಣೆ

ಜನ ಮರಳೋ ಜಾತ್ರೆ ಮರಳೋ ಅನ್ನೋ ಹಾಗೆ.. ವಿಡಿಯೋದಿಂದಲೇ ಕರ್ನಾಟಕ ಅಲ್ಲ ಜಗತ್ತನ್ನೆ ಮಕ್ಕರ್ ಮಾಡಿದ ಸಮೀರ್​ಗೆ ಕಾನೂನಿನ ಕಂಟಕ ಕಾಡ್ತಿದೆ.. ಭಾನುವಾರ ಐದು ಗಂಟೆ ವಿಚಾರಣೆ ಎದುರಿಸಿದ್ದ ದೂತನಿಗೆ ಎರಡನೇ ದಿನವೂ ಫುಲ್ ಡ್ರಿಲ್ ಮಾಡಲಾಗಿದೆ. ಈ ಮಧ್ಯೆ ಪೊಲೀಸರು ಸಮೀರ್ ಆದಾಯದ ಮೇಲೂ ಕಣ್ಣಿಟ್ಟಿದ್ದು ಅಸಲಿ ಸತ್ಯವೇನು ಅನ್ನೋದು ಗೊತ್ತಾಗಬೇಕಿದೆ.. ಅಷ್ಟಕ್ಕೂ ಎರಡನೇ ದಿನದ ವಿಚಾರಣೆಯಲ್ಲಿ ಸಮೀರ್ ಹೇಳಿದ್ದೇನು? ತಿಮರೋಡಿ ಕಾರ್​ನಲ್ಲಿ ಬಂದಿದ್ಯಾಕೆ ದೂತ? ಈ ಎಲ್ಲ ಪ್ರಶ್ನೆಗಳಿಗೆ ಈ ರಿಪೋರ್ಟ್ ನಲ್ಲಿ ಉತ್ತರ ನೀಡ್ತೀವಿ ಓದಿ
ಸಾಕ್ಷಿ.. ಸಾಕ್ಷಿ.. ನೋಡಿ ಸಾರ್ ನಾವು ಸಾಕ್ಷಿಯನ್ನ ತೋರಿಸ್ತೀದ್ವಿ ಅಂತ ಸಮೀರ್ ನೂರಾರು ಹೆಣಗಳನ್ನ ಹೂತಿರೋ ಕೇಸ್​  ಬಗ್ಗೆಯೇ ವಿಡಿಯೋ ಮಾಡಿದ್ದ.. ಈ ವಿಡಿಯೋ ಸೃಷ್ಟಿಸಿದ್ದ ಸಂಚಲನಕ್ಕೆ ಲಕ್ಷದಲ್ಲಿ ಫಾಲೋವ್ ಮಾಡ್ತಿದ್ದ ಸಮೀರ್ ಸಬ್​ಸ್ಕ್ರೈಬರ್ ಸಂಖ್ಯೆ ಮಿಲಿಯನ್​ ದಾಟಿತ್ತು.. ಈಗ ಯ್ಯೂಟೂಬರ್​​ ಸಮೀರ್ ಬರೋಬ್ಬರಿ 10 ಲಕ್ಷದ 25 ಸಾವಿರ ಜನ ಫಾಲೋವ್ ಮಾಡ್ತಿದ್ದಾರೆ.. ಆದ್ರೆ ಈ AI ಹಮ್ಮೀರ ಮಾಡಿದ್ದ ವಿಡಿಯೋವನ್ನ ಕೋಟಿ ಕೋಟಿ ಜನರೇ ನೋಡಿದ್ರು.. ಹೇಳಿದ್ದೆಲ್ಲ ಸತ್ಯವೇನು? ಧರ್ಮಸ್ಥಳದಲ್ಲಿ ಹಿಂಗಾಗಿತ್ತೇನೋ ಅಂತಲೇ  ಜನ ಅಂದ್ಕೊಂಡಿದ್ರು. ಇವನ ಸ್ಕ್ರಿಪ್ಟ್​, ವಿಡಿಯೋ, ಗ್ರಾಫಿಕ್ಸ್​.. ಅಬಬ್ಬ ಅಬ್ಬಬ್ಬಾ ನೋಡಿದವರೆಲ್ಲ ಮಮ್ಮಲ ಮರುಗಿ ಹೋಗಿದ್ರು..  ಹೊಸ ಸಾಕ್ಷಿ ಬಂದಿದೆ ಯಾವ ವಿಡಿಯೋ ಮಾಡಿದ್ನೋ.. ಅದೇ ವಿಡಿಯೋ ಈಗ ಸಮೀರ್​​ನನ್ನ ಕಾನೂನಿನ ಕಂಟಕಕ್ಕೆ ತಳ್ಳಿದ್ದು ಪೊಲೀಸರು ಕೇಳೋ ಪ್ರಶ್ನೆಗಳಿಗೆ ಥಂಡ ಹೊಡೆಯುವಂತೆ ಮಾಡಿದೆ. 

ಪೊಲೀಸ್​ ಪ್ರಶ್ನೆಗಳಿಗೆ ದೂತ ಥಂಡಾ.. 2ನೇ ದಿನವೂ ಗ್ರಿಲ್
ಕೇಸ್​.. AI ವಿಡಿಯೋ.. ತಿಮರೋಡಿ ಕಾರಿನ ರಹಸ್ಯವೇನು?
ಈ ಸಮೀರ್​​ ಮೇಲೆ ಕೇಸ್ ಆಗಿ ವಿಚಾರಣೆಗೆ ಬಾರಪ್ಪ ಅಂತ ಪೊಲೀಸರು ಮನೆ ಮುಂದೆ ಬಂದಾಗ ಈ ಆಸಾಮಿ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ..  ಕೊನೆಗೆ ಬೇಲ್ ಪಡೆದು ನಿಟ್ಟುಸಿರು ಬಿಟ್ಟು ಬೆಳ್ತಂಗಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ. ಆದ್ರೆ ಪೊಲೀಸ್ ಠಾಣೆಗೆ AI ಹಮ್ಮೀರ ಸಮೀರ ಬಂದ ಸ್ಟೈಲ್ ನೋಡ್ಬೇಕು.. ಅಬಬ್ಬಾ ಕಣ್ಣಿಗೆ ಗ್ಲಾಸ್.. ಕೈಯನಲ್ಲಿ ಒಂದಿಷ್ಟು ಫೈಲು.. ಕಣ್ಣಲ್ಲಿ ಏನನ್ನೋ ಸಾಧಿಸಿದಂತೆ ಅನ್ನ ಆಪ್ತಮಿತ್ರ ಡೈಲಾಗ್​ನಂತೆ ಸಮೀರ್ ಎಂಟ್ರಿ ಕೊಟ್ಟಿದ್ದ... ಆದ್ರೆ ಠಾಣೆ ಒಳಗೆ ಹೋಗ್ತಿದ್ದಂತೆ ಪೊಲೀಸರು ಕೇಳ್ತಿದ್ದ ಪ್ರಶ್ನಗಳಿಗೆ ಅಕ್ಷರಶಃ ಥಂಡ ಹೊಡೆದು ಹೋಗಿದ್ದ. 
ಭಾನುವಾರ, ಸೋಮವಾರ 2 ದಿನವೂ ವಿಚಾರಣೆ.. ಪ್ರಶ್ನೆಗಳ ಸುರಿಮಳೆ!
ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ಸಮೀರ್​ಗೆ ಪೊಲೀಸರು ಬೆವರಿಳಿಸಿದ್ರು. ಸೋಮವಾರವೂ ಸಮೀರ್‌ ನನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಯಾಕಂದ್ರೆ ಸಮೀರ್​ ಮಾಡಿದ್ದ AI ವಿಡಿಯೋಗೆ ಯಾವ ದಾಖಲೆಗಳು ಇದ್ವೋ? ವಿಡಿಯೋ ಮಾಡಿದ್ದು ಯಾಕೆ? ವಿಡಿಯೋ ಹಿಂದಿನ ಉದ್ದೇಶವೇನು? ಅದ್ರಲ್ಲು ಧರ್ಮಸ್ಥಳದ ಬಗ್ಗೆಯೇ ವಿಡಿಯೋ ಮಾಡಿದ್ಯಾಕೆ? ಅನ್ನೋ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ್ರು.. ಈ ಪ್ರಶ್ನೆಗಳಿಗೆ ಸಮೀರ್ ಉತ್ತರ ಕೊಟ್ಟಿದಾನೋ ಇಲ್ವೋ ಗೊತ್ತಿಲ್ಲ.. ಆದ್ರೆ ಸ್ವಲ್ಪ ಶೇಕ್ ಆಗಿದ್ದಂತೂ ಸತ್ಯ..  ಮೊದಲ ದಿನ ಐದು ಗಂಟೆ ವಿಚಾರಣೆ ನಡೆಸಿದ್ದ ಪೊಲೀಸರು ಸಮೀರ್ ವಾಯ್ಸ್​ ಸ್ಯಾಂಪಲ್ ಕೂಡ ಪಡೆದಿದ್ದು, ಒಂದೇ ಸ್ಕ್ರಿಪ್ಟ್​ನ್ನ ಮೂರು ಬಾರಿ ಓದಿಸಿ ಟೆಸ್ಟ್ ಮಾಡಿದ್ರು. ಬಳಿಕ ವಿಡಿಯೋ ವಾಯ್ಸ್, ಸ್ಯಾಂಪಲ್ ವಾಯ್ಸ್ ತಾಳೆ ಹಾಕಲು FSLಗೆ ಕಳಿಸಲಾಗಿತ್ತು. ಇದಾದ ಬಳಿಕ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಮತ್ತೆ ಮೂವರ ವಕೀಲರೊಂದಿಗೆ ಸಮೀರ್ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದ. 
ಎಡಿಟಿಂಗ್​ಗೆ ಬಳಸಿದ ಕಂಪ್ಯೂಟರ್, ಮೊಬೈಲ್ ವಶಕ್ಕೆ?
ಸಮೀರ್ ವಿಡಿಯೋ ಕ್ಲಾರಿಟಿ ಆ್ಯಂಡ ಕ್ವಾಲಿಟಿ ನೋಡಿ ಜನ ಏನಪ್ಪ ಇದು ಹಿಂಗ್​ ಇದೆ ಅಂತ  ಬಾಯ್ ಮೇಲೆ ಬೆರಳು ಇಟ್ಕೊಂಡಿದ್ರು. ಈಗ ವಿಡಿಯೋಗಾಗಿ ಬಳಸಿದ್ದ ಕಂಪ್ಯೂಟರ್​ ಮತ್ತು ಸಮೀರ್​ ಮೊಬೈಲ್​ ಮೇಲೂ ಹದ್ದಿನ ಕಣ್ಣೀಟ್ಟಿದ್ದು, ಮೊಬೈಲ್ ಮತ್ತು ಕಂಪ್ಯೂಟರ್​ನ್ನ ವಶಕ್ಕೆ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ. ಈಗ ಭಾನುವಾರ ಸಮೀರ ಎರಡನೇ ದಿನದ ವಿಚಾರಣೆಗೆ ಹಾಜರಾಗಿದ್ದಾನೆ. 
ಸಮೀರ್​ಗೆ ‘ವಿಡಿಯೋ’ ವ್ಯೂಹ 
ಪೊಲೀಸರ ವಿಚಾರಣೆ ವ್ಯೂಹದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ
ಸೋಮವಾರ ಕೂಡ ಬೆಳ್ತಂಗಡಿ ಠಾಣೆಯಲ್ಲಿ ಸಮೀರ್ ಎಂ.ಡಿ ವಿಚಾರಣೆ
ಒಟ್ಟು ಎರಡು ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಪೊಲೀಸರು
ಖಾಸಗಿ ಚಾನೆಲ್ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಮಾಹಿತಿ ಕಲೆ
ಉಜಿರೆ ಆಸ್ಪತ್ರೆ ಬಳಿಯ ಗಲಾಟೆ ಪ್ರಕರಣದ ಬಗ್ಗೆಯೂ ವಿಚಾರಣೆ
ಪೊಲೀಸರ ವಿಚಾರಣೆ ವ್ಯೂಹದಲ್ಲಿ ಸಮೀರ್ ಸಿಲುಕಿಕೊಂಡಿದ್ದು, ಸೋಮವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸಮೀರ್ ಹಾಜರಾಗಿದ್ದಾನೆ.  ಎರಡು ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿದೆ.. ಖಾಸಗಿ ಚಾನೆಲ್ ಮೇಲೆ ಹಲ್ಲೆ ಪ್ರಕರಣದ ಮಾಹಿತಿ ಕಲೆ ಹಾಕಲಾಗಿದ್ದು, ಉಜಿರೆ ಆಸ್ಪತ್ರೆ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಕೂಡ ವಿಚಾರಣೆ ನಡೆಸಲಾಗಿದೆ. 

sameer md(4)

ಇರಲಾರದೇ ಇರುವೆ ಬಿಟ್ಕೊಲೋದು ಅಂತಾರಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ದೂತ ಸಮೀರ.. ಯಾಕಂದ್ರೆ ಸುಮ್ನೆ ಯ್ಯೂಟೂಬ್ ವಿಡಿಯೋ ಮಾಡ್ಕೊಂಡಿದಿದ್ರೆ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಇರ್ತಿದ್ದ.. ಅದು ಬಿಟ್ಟು ಯಾರೋ ಹೇಳಿದ ಕತೆ ಕೇಳಿ, ಅದನ್ನೆ ಸತ್ಯ ಅಂತ ನಂಬಿ ನೂರಾರು ಜನರ ಧಾರ್ಮಿಕ ಭಾವನೆ ಇರೋ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿರೋ ಆರೋಪ ಹೊತ್ತು ಈಗ ಪೊಲೀಸ್ ಠಾಣೆಗೆ ಅಲೆಯೋ ಪರಿಸ್ಥಿತಿ ಬಂದಿದೆ. ತನಿಖಾಧಿಕಾರಿ ನಾಗೇಶ್.ಕೆ ಅವರಿಂದ ದೂತನ ವಿಚಾರಣೆ ನಡೆದಿದ್ದು, ದಾಖಲಾದ FIR ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ವಿಡಿಯೋ ಹಿಂದೆ ಕಾಣದ ಕೈಗಳ ಕೆಲಸ ಮಾಡಿದಾವ ಅನ್ನೋದ್ರ ಬಗ್ಗೆಯೂ ಪೊಲೀಸರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. 
23 ನಿಮಿಷ 52 ಸೆಕೆಂಡ್​ ವಿಡಿಯೋಗೆ ದಾಖಲೆ ನೀಡ್ಬೇಕು!
ಒಂದಲ್ಲ ಎರಡಲ್ಲ ಬರೋಬ್ಬರಿ 23 ನಿಮಿಷದ 52 ಸೆಕೆಂಡ್​ನ ವಿಡಿಯೋವನ್ನ ಸಮೀರ್ ಮಾಡಿ ಯ್ಯೂಟೂಬ್​ನಲ್ಲಿ ಅಪಲೋಡ್ ಮಾಡಿದ್ದ.. ಇದೇ ವಿಡಿಯೋ ಸಂಬಂಧವೇ ಈಗ ಸಮೀರ್ ಮೇಲೆ ಕೇಸ್ ದಾಖಲಾಗಿತ್ತು.. ಹೀಗಾಗಿ ಈ ವಿಡಿಯೋದಲ್ಲಿ ಮಾಡಿರೋ ಆರೋಪಕ್ಕೆ ಸಮೀರ್ ಈಗ ಸಾಕ್ಷಿಗಳು ಮತ್ತು ದಾಖಲೆಗಳನ್ನ ನೀಡ್ಬೇಕಾಗಿದೆ. ಇದೆಲ್ಲದರ ಮಧ್ಯೆ ಸಮೀರ್​ ಪೊಲೀಸ್ ಠಾಣೆಗೆ ಹಾಜರಾಗಿದ್ದ ಕಾರ್​ ಬೇರೆಯದ್ದೆ ಕತೆಯನ್ನೆ ಹೇಳ್ತಿದೆ. 
ತಿಮರೋಡಿ ಕಾರಲ್ಲಿ ಯೂಟ್ಯೂಬರ್​ ಸಮೀರ್​ ಕಾರುಬಾರು!
ತಿಮರೋಡಿ ಫಾರ್ಚುನರ್​ ಕಾರಲ್ಲಿಯೇ ಸಮೀರ್​ನ ಎಂಟ್ರಿ!
ಹೌದು ಸಮೀರ್​ ಭಾನುವಾರ ಮತ್ತು ಸೋಮವಾರ ಎರಡು ದಿನ ಪೊಲೀಸ್ ಠಾಣೆಗೆ ಬಂದಾಗ ಸಮೀರ್ ಮಹೇಶ್ ಶೆಟ್ಟಿ ತಿಮರೋಡಿ ಕಾರ್​ನಲ್ಲಿಯೇ ಬಂದಿದ್ದ.  ತಿಮರೋಡಿ KA 04 MQ 2999 ನಂಬರ್​ನ ಫಾರ್ಚುನರ್ ಇದಾಗಿದ್ದು, ಕಾರಿನ ಹಿಂದೆ ಧರ್ಮೋ ರಕ್ಷತಿ ರಕ್ಚಿತಃ ಧರ್ಮೋ ರಕ್ಷತಿ ರಕ್ಚಿತಃ  ಅಂತ ಬರೆಯಲಾಗಿದ್ದು, ಇಬ್ಬರು ಒಂದೇ ಕಾರಲ್ಲಿ ಓಡಾಡ್ತಿರೋ ಹಿಂದಿನ ಮರ್ಮವೇನು ಅನ್ನೋ ಪ್ರಶ್ನೆ ಕೂಡ ಹುಟ್ಕೊಂಡಿದೆ. 
ತಿಮರೋಡಿ ಕಾರಲ್ಲಿ ಬಂದಿದ್ದೇಕೆ ಸಮೀರ್?  
ತಿಮರೋಡಿ ಸಹೋದರ ಮೋಹನ್ ಕುಮಾರ್ ಶೆಟ್ಟಿಗೆ ಸೇರಿದ ಕಾರು
ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಆಗಮಿಸಿರುವ ದೂತ ಸಮೀರ್
KA 04 MQ 2999 ನಂಬರ್​ನ ಫಾರ್ಚುನರ್ ಕಾರಿನಲ್ಲಿ ಆಗಮನ
ಧರ್ಮೋ ರಕ್ಷತಿ ರಕ್ಚಿತಃ ಎಂಬ ಬರಹಗಳಿರುವ ಫಾರ್ಚ್ಯೂನರ್ ಕಾರು
ಭಾನುವಾರ ಇದೇ ಕಾರಿನಲ್ಲಿ ವಿಚಾರಣೆಗೆ ಹಾಜರಾಗಿದ್ದ ಯುಟ್ಯೂಬರ್​​
ಮೋಹನ್ ಕುಮಾರ್ ಶೆಟ್ಟಿ ಪುತ್ರನಿಂದಲೇ ಫಾರ್ಚುನರ್ ಕಾರು ಚಾಲನೆ
ತಿಮರೋಡಿ ಮನೆಯಲ್ಲಿಯೇ ಸಮೀರ್ ಉಳಿದುಕೊಂಡಿರೋ ಮಾಹಿತಿ
ತಿಮರೋಡಿ ಸಹೋದರ ಮೋಹನ್​ಕುಮಾರ್ ಶೆಟ್ಟಿಗೆ ಈ ಕಾರು ಸೇರಿದ್ದು ಇದೇ ಟೊಯೋಟಾ ಪಾರ್ಚುನರ್ ಕಾರ್​ನಲ್ಲಿ ದೂತ ಸಮೀರ್ ವಿಚಾರಣೆಗೆ ಆಗಮಿಸಿದ್ದ. KA 04 MQ 2999 ನಂಬರ್​ನ ಕಾರಿನಲ್ಲಿ ಬಂದಿದ್ದು, ಧರ್ಮೋ ರಕ್ಷತಿ ರಕ್ಚಿತಃ ಅಂತ ಕಾರ್ ಹಿಂದೆ ಬರೆಯಲಾಗಿದೆ. ಭಾನುವಾರ ಕೂಡ ಇದೇ ಕಾರಿನಲ್ಲಿ ಸಮೀರ್​ ವಿಚಾರಣೆಗ ಹಾಜರಾಗಿದ್ದ. ಮೋಹನ್ ಕುಮಾರ್ ಶೆಟ್ಟಿಯ ಪುತ್ರ ಈ ಕಾರು ಚಾಲನೆ ಮಾಡ್ಕೊಮಡು ಬಂದಿದ್ದ. ಹೀಗಾಗಿ ಸಮೀರ್ ತಿಮರೋಡಿ ಮನೆಯಲ್ಲಿಯೆ ಉಳಿದಿರೋ ಬಗ್ಗೆ ಮಾಹಿತಿಯಿದೆ. 
ಇದ್ದ ಮೂವರಲ್ಲಿ ಕದ್ದವಱರು ಅನ್ನೋ ಹಾಗೆ.. ವಿಡಿಯೋ ಹಿಂದಿನ ಕೈಗಳು ಯಾರದು? ಅನ್ನೋ ಸತ್ಯ ಈಗ ಬಯಲಾಗ್ಬೇಕಿದೆ.. ಒಂದ್ಕಡೆ ಪೊಲೀಸರು AI ವಿಡಿಯೋ ಸಂಬಂಧ ವಿಚಾರಣೆ ನಡೆಸ್ತಿದ್ರೆ, ಇನ್ನೊಂದೆಡೆ ಯೂಟ್ಯೂಬ್​ ಆದಾಯದ ಬಗ್ಗೆಯೂ ವಿಚಾರಣೆ ನಡೆಸಿರೋದು ದೂತನ ಭೂತ ಬಿಡಿಸಿದಂತಾಗಿದೆ. 
ಪೊಲೀಸರು ಒಂದ್ಕಡೆ AI ವಿಡಿಯೋ ಬೆನ್ನು ಬಿದ್ದಿದ್ರೆ, ಇನ್ನೊಂದ್ಕಡೆ ಸಮೀರ್ ಆದಾಯದ ಮೂಲವನ್ನ ಪೊಲೀಸರು ಕೆದಕ್ತಿದ್ದಾರೆ..  ಸಮೀರ್ ಯ್ಯೂಟೂಬ್ ಮೂಲಕವೇ ಪೇಮಸ್ ಆಗಿದ್ದ..  ಹೀಗಾಗಿ ಪೊಲೀಸರು ಯ್ಯೂಟೂಬ್​ ಆದಾಯದ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದ್ದಾರೆ. 
ಒಂದು ಯ್ಯೂಟೂಬ್​ ವಿಡಿಯೋ ಇವತ್ತು ಹಂಗಾಮವನ್ನೆ ಸೃಷ್ಟಿ ಮಾಡಿದೆ.. ಇದೇ ವಿಡಿಯೋ ಈಗ ಸಮೀರ್​​ನನ್ನ ಕಾನೂನಿನ ಕಂಟಕಕ್ಕೂ ಸಿಲುಕಿಸಿದೆ.. ಆದ್ರೆ ಈ ಮಧ್ಯೆ ಸಮೀರ್ ಆದಾಯದ ಮೂಲದತ್ತಲೂ ಪೊಲೀಸರು ಕಣ್ಣೀಟ್ಟಿದ್ದಾರೆ ಎನ್ನಲಾಗಿದೆ.. ಮೊನ್ನೆಯಷ್ಟೆ ಇಡಿಯವರು ಕೂಡ ಸಮೀರ್​ ಅಕೌಂಟ್ ಬಗ್ಗೆ ಪರಿಶೀಲನೆ ನಡೆಸ್ತಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಈಗ ಪೊಲೀಸರು ಸಮೀರ್ ಆದಾಯದ ಮೂಲದ ಬಗ್ಗೆ ದಾಖಲೆ ಕೇಳಿದ್ದಾರೆ. 
ಈ ವಿಡಿಯೋ ಕೇಸ್​ಗೆ ಹಣಕಾಸಿನ ಸಾಕ್ಷ್ಯ ಸಂಗ್ರಹ ತುಂಬಾನೇ ಮುಖ್ಯ.. ಯಾಕಂದ್ರೆ ಸಮೀರ್ ಅಪಡೇಟ್ ಟೆಕ್ನಾಲಜಿಯನ್ನ ಬಳಸಿ ವಿಡಿಯೋ ಮಾಡಿದ್ದ.. AI ಗ್ರಾಫಿಕ್ಸ್ ಎಲ್ಲವೂ ರಿಚ್ ಆಗಿತ್ತು.. ಇಂತಾದೊಂದು ವಿಡಿಯೋ ಮಾಡ್ಬೇಕಾದ್ರೆ ಅದಕ್ಕೆ ಹಣ ಖರ್ಚು ಮಾಡ್ಲೇಬೇಕು. ಹೀಗಾಗಿ ಪೊಲೀಸರು ಸಮೀರ್ ಹಣದ ಮೂಲ ಯಾವುದು ಅಂತಲೂ ಕೆದಕ್ತಿದ್ದಾರೆ. ಹೀಗಾಗಿ ಯ್ಯೂಟೂಬ್ ಆದಾಯದ ದಾಖಲೆ ಕೇಳಿದ್ದಾರೆ..

Sameer M D


ದೂತನ ವಿಚಾರಣೆ!
ಪ್ರಶ್ನೆ 01
ಆರ್ಥಿಕ ಲಾಭಕ್ಕಾಗಿ ವಿವಾದಿತ ವಿಡಿಯೋಗಳನ್ನ ಮಾಡಲಾಯ್ತಾ?
ನಿಮಗೆಲ್ಲ ಗೊತ್ತಿರೋ ಹಾಗೆ ಯೂಟ್ಯೂಬ್​ನಲ್ಲಿ ವಿಡಿಯೋ ಮಾಡೋದೆ ಹಣ ಮಾಡೋದಕ್ಕೆ.. ಸಾಮಾನ್ಯ ವಿಷ್ಯಗಳ ವಿಚಾರವಾಗಿದಿದ್ರೆ ಓಕೆ.. ಆದ್ರೆ ಧಾರ್ಮಿಕ  ಕ್ಷೇತ್ರದ ಬಗ್ಗೆ ಸಾಕ್ಷಿಗಳಿಲ್ಲದೇ ವಿಡಿಯೋ ಮಾಡಿರೋ ಕಾರಣಕ್ಕೆ, ಪೊಲೀಸರು ಈ ಪ್ರಶ್ನೆಯನ್ನ ಕೇಳಿದ್ದಾರೆ. ಸಣ್ಣ ಪುಟ್ಟ ವಿಚಾರವಾದ್ರೆ ವಿಡಿಯೋಗಳು ಓಡೋದಿಲ್ಲ, ಕಮೆಂಟ್ ಬರೋದಿಲ್ಲ. ಅದೇ ಒಂದು ವಿವಾದಿತ ವಿಚಾರವಾಗಿದ್ರೆ ಜನರ ಗಮನ ಅಲ್ಲೇ ಇರುತ್ತೆ. ಹೀಗಾಗಿ ಪೊಲೀಸರು ಆರ್ಥಿಕ ಲಾಭಕ್ಕೆ ಅಂತಲೇ ಈ ವಿವಾದಿತ ವಿಡಿಯೋ ಮಾಡಿದ್ರಾ? ಅನ್ನೋ ಪ್ರಶ್ನೆಯನ್ನ ಕೇಳಿದ್ದಾರೆ. 
ಪ್ರಶ್ನೆ 02
ಹೆಚ್ಚಿನ ಆದಾಯಕ್ಕಾಗಿ ಸುಳ್ಳು ವಿಷಯಗಳ ಬಿತ್ತರ ಮಾಡಲಾಯ್ತಾ?
ಸಮೀರ್ ಮಾಡಿರೋ ವಿಡಿಯೋದಲ್ಲಿ ಇದೇ ಬುರುಡೆ ರಹಸ್ಯವನ್ನ ಹೇಳಿದ್ದ.. ಆದ್ರೀಗ ಅನಾಮಿಕ ವ್ಯಕ್ತಿಯಾಗಿದ್ದ ಚೆನ್ನನ ಒಂದೊಂದೆ ಮುಖಗಳು ಬಯಲಾಗ್ತಾನೆ ಇವೆ.. ಚೆನ್ನ ಹೇಳಿದ ಕತೆಯೇ ಸುಳ್ಳು ಎನ್ನಲಾಗ್ತಿದೆ.. ಸೋ ಹೆಚ್ಚಿನ ಆದಾಯಕ್ಕೆ ಅಂತಲೇ ಈ ರೀತಿ ಸುಳ್ಳು ವಿಷಯಗಳನ್ನ ಬಿತ್ತರ ಮಾಡಿದ್ರಾ? ಅಂತಲೂ ವಿಚಾರಣೆ ನಡೆಸಿದ್ದಾರೆ. 
ಪ್ರಶ್ನೆ 03
ಚಾನೆಲ್​ಗೆ ಸಂಬಂಧಿಸಿದ AdSense ಅಕೌಂಟ್ ಯಾರ ಹೆಸರಲ್ಲಿದೆ?
ಯೂಟ್ಯೂಬ್ ಆದಾಯ ಬರಬೇಕಾದ್ರೆ ಆ್ಯಡ್ ಸೆನ್ಸ್ ಅಕೌಂಟ್ ತುಂಬಾನೇ ಮುಖ್ಯ... ಹೀಗಾಗಿ ಪೊಲೀಸರು ಈ ಆ್ಯಡ್ ಸೆನ್ಸ್ ಅಕೌಂಟ್ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ಆ್ಯಡ್ ಸೆನ್ಸ್ ಅಕೌಂಟ್ ಯಾರ ಹೆಸರಲ್ಲಿದೆ ಅನ್ನೋ ಮಾಹಿತಿ ಕೂಡ ಪಡೆದಿದ್ದಾರೆ. 
ಪ್ರಶ್ನೆ 04
ಚಾನೆಲ್​ಗೆ ರಾಜಕೀಯ, ಸಾಮಾಜಿಕ ಸಂಘಟನೆಗಳ ನೆರವಿದೆಯಾ?
ಸಮೀರ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿದ್ವಾ? ಅನ್ನೋ ಅನುಮಾನ ಇದ್ದು ಈ ಬಗ್ಗೆಯೂ ಪೊಲೀಸರು ಖಡಕ್ಕಾಗಿಯೇ ಕೇಳಿದ್ದಾರೆ. ಚಾನೆಲ್​ಗೆ ರಾಜಕೀಯ ಅಥವಾ ಸಾಮಾಜಿ ಸಂಘಟನೆಗಳ ನೆರವಿದ್ಯಾ? ಅನ್ನೋ ಪ್ರಶ್ನೆಗಳು ಸಹ ಸಮೀರ್​ಗೆ ಕೇಳಿದ್ದಾರೆ. 
ಪ್ರಶ್ನೆ 05
ಯೂಟ್ಯೂಬ್​ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತೆ?
ಆದಾಯದ ಬಗ್ಗೆಯೂ ಪ್ರಶ್ನೆ ಮಾಡಿರೋ ಪೊಲೀಸರ, ಯ್ಯೂಟೂಬ್​ನಿಂದ ತಿಂಗಳಿಗೆ ಬರೋ ರೆವೆನ್ಯೂ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಒಂದು ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತೆ ಅನ್ನೋ ಮಾಹಿತಿಯನ್ನ ಸಮೀರ್​ನಿಂದ ತೆಗೆದುಕೊಂಡಿದ್ದಾರೆ. 
ಪ್ರಶ್ನೆ 06
Google/Youtbeನಿಂದ ಯಾವ ಬ್ಯಾಂಕ್​ ಖಾತೆಗೆ ಹಣ ಜಮಾ ಆಗುತ್ತೆ?
ಇನ್ನೂ ಗೂಗಲ್ ಅಥವಾ ಯ್ಯೂಟೂಬ್​​ನಿಂದ ಬರುವಂತ ಆದಾಯ ಯಾವ ಬ್ಯಾಂಕ್​ ಖಾತೆಗೆ ಜಮಾ ಆಗುತ್ತೆ ಅಂತಲೂ ಪೊಲೀಸರು ಕೇಳಿದ್ದಾರೆ. ಆ ಬ್ಯಾಂಕ್​ ನಂಬರ್​, ಬ್ರ್ಯಾಂಚ್​, ಸ್ಟೇಟ್​ಮೆಂಟ್​ಗಳ ಬಗ್ಗೆ ಸಮೀರ್​ಗೆ ಡಿಟೇಲ್ಸ್​ ಕೇಳಿದ್ದಾರೆ. 
5 ಪೇಜ್ ಗಳ ಸ್ಕ್ರೀಪ್ಟ್ ನೀಡಿ ಓದಲು ಹೇಳಿರುವ ಪೊಲೀಸರು
ಸೋಮವಾರ ಮಧ್ಯಾಹ್ನ 12.30 ರ ಸುಮಾರಿಗೆ ಸಮೀರ್ ವಿಚಾರಣೆಗೆ ಹಾಜರಾಗಿದ್ದ.. ಮಧ್ಯಾಹ್ನದ ತನಕ ವಿಡಿಯೋ ಸಂಬಂಧಿತ ಪ್ರಶ್ನೆ ಕೇಳಿದ್ದ, ತನಿಖಾಧಿಕಾರಿ ನಾಗೇಶ್ ಕದ್ರಿ  ಇವತ್ತು ಕೂಡ ಸಮೀರ್​ಗ ಸ್ಕ್ರಿಪ್ಟ್ ಓದೋದಕ್ಕೆ ಹೇಳಿದ್ರಂತೆ. 5 ಪೇಜ್ ಗಳ ಸ್ಕ್ರೀಪ್ಟ್ ಓದಿಸಿದ್ದು, ಮತ್ತೆ ಸಮೀರ್​ನ ವಾಯ್ಸ್ ಸ್ಯಾಂಪಲ್​ ಕಲೆಕ್ಟ್ ಮಾಡಿದ್ದಾರೆ. ಒಂದ್ಕಡೆ ಸಮೀರ್​​ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ  ನಡೆಸ್ತಿದ್ರೆ, ಅತ್ತ ಮಗಳು ಕಾಣೆಯಾದ ಬಗ್ಗೆ ಎಸ್​​ಐಟಿಗೆ ಕಂಪ್ಲೇಂಟ್ ಕೊಟ್ಟಿದ್ದ ಸುಜಾತಾ ಭಟ್ ನಾಪತ್ತೆಯಾಗಿದ್ದರು. ಆದರೇ, ಇಂದು ಬೆಳಂ ಬೆಳಿಗ್ಗೆಯೇ ಎಸ್‌ಐಟಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ. 

SIT ತನಿಖೆ ಚುರುಕು..  ಸುಜಾತಾ ಭಟ್  ವಿಚಾರಣೆಗೆ ಹಾಜರು!
ಪೊಲೀಸರು ಮಗಳ ಕಾಣೆಯಾದ ಕೇಸ್​ ಬಗ್ಗೆ ಸುಜಾತಾ ಭಟ್​ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ರು. ಆದ್ರೆ ಸುಜಾತಾ ಭಟ್​ 29 ನೇ ತಾರೀಕು ವಿಚಾರಣೆಗೆ ಬರೋದಾಗಿ ಹೇಳಿದ್ರು.. ಆದ್ರೀಗ ಸುಜಾತಾ ಭಟ್ ಮನೆಯಲ್ಲಿಲ್ಲ ಅನ್ನೋ ಮಾಹಿತಿ ಸಿಕ್ಕಿದೆ. ಸುಜಾತಾ ಭಟ್​ ಮನೆಯಲ್ಲಿ ಇಲ್ಲ ಅಂತ ಖುದ್ದ ಪೊಲೀಸರೇ ಮಾಹಿತಿ ನೀಡಿದ್ದು, ಸುಜಾತಾ ಭಟ್ ಎಲ್ಲಿಗೆ ಹೋದ್ರು ಅನ್ನೋದೆ ನಿಗೂಢವಾಗಿತ್ತು. ಇದ್ರ ಜೊತೆಗೆ ಸುಜಾತಾ ಪರ ನಿಂತಿದ್ದ ವಕೀಲರು ಸೈಲೆಂಟ್ ಆಗಿದ್ದು, ಸುಜಾತಾ ಭಟ್ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿದ್ದಾರೆ.
ಏಕಾಂಗಿ ಸುಜಾತ 
ಅನನ್ಯಾ ಫೋಟೊ ಸುಳ್ಳು, ಅನನ್ಯವೇ ಇಲ್ಲವೆಂದ ಸುಜಾತಾ
ಸುಜಾತಾ ಗಂಟೆಗೊಂದು ಹೇಳಿಕೆಗಳು, ದಿನಕ್ಕೊಂದು ಮಾತು
ಸುಜಾತಾ ಭಟ್​​​ ಅವ್ರ ಅವತಾರ ಕಂಡು ವಕೀಲರು ಸೈಲೆಂಟ್
ಸುತಾಜಾ ಮಾತನೆಲ್ಲ ನಿಜವೆಂದು ನಂಬಿ ಬಂದಿದ್ದ ವಕೀಲರು
ಸುಜಾತಾ ಭಟ್​​​​ ಅವರಿಂದ ಅಂತರ ಕಾಯ್ದುಕೊಂಡ ವಕೀಲರು
ಆ.29ರಂದು ಎಸ್ಐಟಿ ಎದುರು ಹಾಜರಾಗಲು ಸುಜಾತಾ ಸಿದ್ಧತೆ
ಆದರೆ ಯಾವ ವಕೀಲರು ಸುತಾಜಾ ಫೋನ್ ಕರೆ ಸ್ವೀಕರಿಸುತ್ತಿಲ್ಲ
ಒಂಟಿಯಾಗಿ ಎಸ್​ಐಟಿ ಎದುರು ಮಾಹಿತಿ ನೀಡುವಂತೆ ಸೂಚನೆ
ಈಗ ಒಂಟಿಯಾಗಿ ಹೋರಾಡಲು ಸುಜಾತಾ ಭಟ್​​​ ನಿರ್ಧಾರ
ಸದ್ಯ ವಕೀಲರ ಮನವೊಲಿಸಲು ಸುಜಾತಾ ಭಟ್​ರಿಂದ ಸರ್ಕಸ್
ಅನನ್ಯ ಫೋಟೋ ಸುಳ್ಳು, ಅನನ್ಯ ಅನ್ನೋ ಮಗಳಿಲ್ಲ ಎಂದಿದ್ದ ಸುಜಾತಾ ಭಟ್ ದಿನಕ್ಕೊಂದು ಗಂಟೆಗೊಂದು ಹೇಳಿಕೆಗಳನ್ನ ನೀಡಿದ್ರು. ಹೀಗಾಗಿ ಸುಜಾತಾ ಭಟ್​ ಅವತಾರ ಕಂಡು ಆಕೆ ಪರ ವಕೀಲರು ಕೂಡ ಸೈಲೆಂಟ್ ಆಗಿದ್ದಾರೆ.  ಸುಜಾತಾ ಭಟ್ ಹೇಳಿದ್ದು ನಿಜ ಅಂತಲೇ ನಂಬಿ ವಕೀಲರ ಆಕೆ ಪರ ಬಂದಿದ್ರು. ಆದ್ರೀಗ ಅಜ್ಜಿ ಹೇಳಿಕೆ ಬದಲಾಯಿಸಿದ್ದನ ಕಂಡು ಸುಜಾತಾ ಭಟ್​ನಿಂದ ವಕೀಲರು ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಆ.29ರಂದು ಎಸ್ಐಟಿ ಎದುರು ಸುಜಾತಾ ಭಟ್ ಹಾಜರಾಗ್ಬೇಕಿತ್ತು.. ಆದ್ರೆ ಯಾವ ವಕೀಲರು ಕೂಡ ಸುಜತಾ ಭಟ್ ಫೋನ್ ರಿಸೀವ್ ಮಾಡ್ತಿಲ್ವಂತೆ.  ಹೀಗಾಗಿ ಒಂಟಿಯಾಗಿ ಎಸ್ ಐ ಟಿ ಎದುರು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದ್ದು, ಒಂಟಿಯಾಗಿ ಹೋರಾಡಲು ಸುಜಾತಾ ಭಟ್​​​ ನಿರ್ಧರಿಸಿದ್ದಾರೆ.  ವಕೀಲರ ಮನವೊಲಿಸೋದಕ್ಕೆ ಹರ ಸಾಹಸ ಪಡ್ತಿದ್ದಾರೆ ಅನ್ನೋ ಮಾಹಿತಿಯಿದೆ. 
ಒಟ್ನಲ್ಲಿ ಮಾಡಿದ್ದುಣ್ಣ ಮಹರಾಯ ಅನ್ನೋ ಹಾಗೆ ಕಲರ್ ಕಲರ್ ಕಾಗೆ ಹಾರಿಸಿ ವಿಡಿಯೋ ಬಿಟ್ಟಿದ ಸಮೀರ್ ವಿಚಾರಣೆಯಿಂದ ಥಂಡಾ ಹೊಡೆದಿದ್ರೆ, ಅತ್ತ ಸುಜಾತಾ ಭಟ್ ಇಲ್ಲದ ಮಗಳ ಕತೆ ಕಟ್ಟಿ ದಿಕ್ಕು ದೆಸೆ ಇಲ್ಲದೇ ಈಗ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿರೋದಂತು ಸುಳ್ಳಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

dharmasthala case, sameer md Sameer MD
Advertisment