ನಿಮಗೆಷ್ಟು ಧೈರ್ಯ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಐಪಿಎಸ್ ಅಧಿಕಾರಿಗೆ ಡಿಸಿಎಂ ಅಜಿತ್ ಪವಾರ್ ಬೆದರಿಕೆ, ವಿವಾದ ಸೃಷ್ಟಿ

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಹಾಗೂ ಡಿಸಿಎಂ ಅಜಿತ್ ಪವಾರ್ ನಡುವಿನ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ. ನಿಮಗೆಷ್ಟು ಧೈರ್ಯ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಂ ಅಜಿತ್ ಪವಾರ್ , ಅಂಜನಾ ಕೃಷ್ಣಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಈಗೇನಾಯಿತು?

author-image
Chandramohan
DCM AJIT PAWAR AND IPS OFFICER

ಡಿಸಿಎಂ ಅಜಿತ್ ಪವಾರ್ -ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ

Advertisment
  • ಡಿಸಿಎಂ ಅಜಿತ್ ಪವಾರ್ -ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಮಾತುಕತೆ ವಿವಾದ
  • ಐಪಿಎಸ್ ಅಧಿಕಾರಿಗೆ ಡಿಸಿಎಂ ಅಜಿತ್ ಪವಾರ್ ಬೆದರಿಕೆ ಹಾಕಿದ ಆರೋಪ
  • ಕಾನೂನು ಜಾರಿಯಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದ ಅಜಿತ್ ಪವಾರ್‌

ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್  ಓರ್ವ ಮಹಿಳಾ  ಐಪಿಎಸ್‌ ಅಧಿಕಾರಿಗೆ ಅವಾಜ್ ಹಾಕಿದ್ದಾರೆ. ಸೊಲ್ಲಾಪುರದಲ್ಲಿ ಅಕ್ರಮ ಮಣ್ಣು ತೆಗೆಯೋದನ್ನ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ  ತಡೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ವ್ಯಕ್ತಿಯೊಬ್ಬರು  ಡಿಸಿಎಂ ಅಜಿತ್ ಪವಾರ್ ಗೆ ಕರೆ ಮಾಡಿದ್ದಾರೆ.  ಆಗ ದೂರವಾಣಿಯಲ್ಲಿ ಮಾತನಾಡುವ ವೇಳೆ ನಾನು ಡಿಸಿಎಂ ಮಾತನಾಡುತ್ತಿದ್ದೇನೆ. ಕೂಡಲೇ ನೀವು ಮಾಡುತ್ತಿರೋ ಕೆಲಸ ನಿಲ್ಲಿಸಿ ಅಲ್ಲಿಂದ ತೆರಳಿ ಎಂದು ಡಿಸಿಎಂ ಅಜಿತ್ ಪವಾರ್ ಪೋನ್ ನಲ್ಲೇ ಹೇಳಿದ್ದಾರೆ.  ಆದರೇ, ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಗೆ ಡಿಸಿಎಂ ಅಜಿತ್ ಪವಾರ್ ಧ್ವನಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.  ಅದಕ್ಕೆ ನೀವು ನನ್ನ ಮೊಬೈಲ್ ಗೆ ಕರೆ ಮಾಡಿ, ನಿಮ್ಮ ದ್ವನಿ ಗುರುತಿಸುವುದಕ್ಕೆ   ಆಗುತ್ತಿಲ್ಲ  ಎಂದು ಐಪಿಎಸ್  ಅಧಿಕಾರಿ ಅಂಜನಾ ಕೃಷ್ಣ ನೇರವಾಗಿಯೇ ಡಿಸಿಎಂ ಅಜಿತ್ ಪವಾರ್ ಗೆ ಹೇಳಿದ್ದಾರೆ. ಜೊತೆಗೆ ನೀವು ವಾಟ್ಸಾಫ್   ಕರೆ ಮಾಡಿ ನಾನು ನಿಮ್ಮನ್ನು ನೋಡಿ ಗುರುತಿಸುತ್ತೇನೆ ಎಂದು ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ , ಡಿಸಿಎಂ ಅಜಿತ್ ಪವಾರ್ ಗೆ ಹೇಳಿದ್ದಾರೆ. 
ಆಗ ನಿಮಗೆಷ್ಟು ಧೈರ್ಯ, ನಿಮ್ಮ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ  (How dare you, i will take action against you) ಎಂದು ಡಿಸಿಎಂ  ಅಜಿತ್ ಪವಾರ್ ಅವಾಜ್ ಹಾಕಿದ್ದಾರೆ. 
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಟೀಕೆೆ ಮತ್ತು ಚರ್ಚೆಗೆ  ಗ್ರಾಸವಾಗಿದೆ.  ಡಿಸಿಎಂ ಅಜಿತ್ ಪವಾರ್ ಹಾಗೂ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಸಂಭಾಷಣೆಯ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ಅದನ್ನು ತಾವು ನೋಡಬಹುದು. 




ಇನ್ನೂ ಯಾರು ಈ ಅಂಜನಾ ಕೃಷ್ಣ?


ಇನ್ನೂ ಮಹಿಳಾ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಹಿನ್ನಲೆಯ ಬಗ್ಗೆಯೂ ಈಗ ಚರ್ಚೆಯಾಗುತ್ತಿದೆ. ಅಂಜನಾ ಕೃಷ್ಣ ಸದ್ಯ ಸೊಲ್ಲಾಪುರದಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ದಿಟ್ಟ, ಪ್ರಾಮಾಣಿಕ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ.  ಅಂಜನಾ ಕೃಷ್ಣ ಮೂಲತಃ ಕೇರಳದ ತಿರುವನಂತಪುರದಲ್ಲಿ ಹುಟ್ಟಿ ಬೆಳೆದವರು. ತಂದೆ ಟೆಕ್ಸ್ ಟೈಲ್ಸ್ ಬ್ಯುಸಿನೆಸ್ ನಲ್ಲಿದ್ದಾರೆ. ತಾಯಿ ಕೋರ್ಟ್ ನಲ್ಲಿ ಟೈಪಿಸ್ಟ್ ಆಗಿದ್ದಾರೆ. 2022 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 355 ಱಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. 

ips anjana krishna

IPS  ಅಧಿಕಾರಿ ಅಂಜನಾ ಕೃಷ್ಣ. 

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷವು, ಅಜಿತ್ ಪವಾರ್  ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.  ಅಜಿತ್ ಪವಾರ್ ಅಶಿಸ್ತು ಸಹಿಸಲ್ಲ ಎಂದು ಹೇಳಿದ್ದಾರೆ. ಹಾಗಾದರೇ, ಇದು ಏನು? ತಮ್ಮ ಪಕ್ಷದ ಕಳ್ಳರನ್ನು ಅಜಿತ್ ಪವಾರ್ ರಕ್ಷಣೆ ಮಾಡುತ್ತಿದ್ದಾರೆ.   ಮಿಸ್ಟರ್ ಪವಾರ್, ನಿಮ್ಮ ಶಿಸ್ತಿನ ಪ್ರಜ್ಞೆ ಎಲ್ಲಿದೆ?  ಆಕ್ರಮವಾಗಿ ಮಣ್ಣು ತೆಗೆಯುವುದು ರಾಜ್ಯದ ಖಜಾನೆಗೆ ವಂಚನೆ ಮಾಡಿದಂತೆ. ನೀವು ರಾಜ್ಯದ ಹಣಕಾಸು ಮಂತ್ರಿ.  ಆದರೂ, ನೀವು ಇದನ್ನು ಮಾಡಿದ್ದೀರಿ ಎಂದು ಶಿವಸೇನೆಯ ಸಂಜಯ ರಾವತ್ ಹೇಳಿದ್ದಾರೆ. 


ಇನ್ನೂ ಇದು ವಿವಾದವಾಗಿ ಬೆಳೆಯುತ್ತಿದ್ದಂತೆ, ಇಂದು ಮಧ್ಯಾಹ್ನ ಟ್ವೀಟರ್ ನಲ್ಲಿ ಡಿಸಿಎಂ ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಉದ್ದೇಶ ಕಾನೂನು ಜಾರಿಯಲ್ಲಿ ಮಧ್ಯಪ್ರವೇಶ ಮಾಡುವುದು ಆಗಿರಲಿಲ್ಲ.  ಪಾರದರ್ಶಕತೆಗೆ ನಾನು ಬದ್ದನಾಗಿದ್ದೇನೆ. ಗ್ರೌಂಡ್ ನಲ್ಲಿ ಪರಿಸ್ಥಿತಿ ಶಾಂತವಾಗಿರುವಂತೆ ನೋಡಿಕೊಳ್ಳುವ ಕೆಲಸ ಮಾಡಿದ್ದೇನೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಡೆದಿದ್ದೇನೆ. ಆಕ್ರಮ ಚಟುವಟಿಕೆಗೆ ಬೆಂಬಲ ನೀಡಲ್ಲ ಎಂದಿದ್ದಾರೆ. 




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

DCM AJIT PAWAR AND IPS OFFICER ANJANA KRISHNA TALK CONTRAVERSY
Advertisment