/newsfirstlive-kannada/media/media_files/2025/10/30/srinivass-vs-tejaswi-surya-2025-10-30-12-16-42.jpg)
ಬಿ.ವಿ.ಶ್ರೀನಿವಾಸ್ ವರ್ಸಸ್ ತೇಜಸ್ವಿ ಸೂರ್ಯ
* ವಿಮಾನದಲ್ಲಿನ ತುರ್ತು ನಿರ್ಗಮನ ದ್ವಾರ ಯಾವಾಗ ತೆರೆಯಬೇಕು ಎಂಬುದರ ಅರಿವಿಲ್ಲದ ಸಂಸದ ತೇಜಸ್ವಿ ಸೂರ್ಯ ಈಗ ‘ಬೆಂಗಳೂರು ಸಂಚಾರದಟ್ಟಣೆ ನಿವಾರಣೆ’ ಕುರಿತು ಉಪನ್ಯಾಸ ನೀಡುತ್ತಿದ್ದಾರೆ. ಎಂತಹ ವಿಪರ್ಯಾಸ! ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪುಂಡರು ಅಧಿಕಾರದಲ್ಲಿ ಇದ್ದಾಗ ಇವರಿಗೆ ನಗರದ ಸಂಚಾರದಟ್ಟಣೆ ಸಮಸ್ಯೆ ನೆನಪಾಗಲಿಲ್ಲವೇ? ಕಾಂಗ್ರೆಸ್ ಸರ್ಕಾರ ಕೈಗೊಳ್ಳುವ ಯೋಜನೆಗಳಿಗೆ ಅಡ್ಡಿ ಮಾಡುವ ಇವರು ಬಿಜೆಪಿ ಸರ್ಕಾರ ಇದ್ದಾಗ ಅವರು ಸಂಚಾರದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಏನು ಮಾಡಿದ್ದರು? ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ದೋಸೆ ಸೆಲ್ಫಿಗಳಲ್ಲೇ ಇರಲಿ:
ತೇಜಸ್ವಿ ಸೂರ್ಯ ಅವರು ತಮ್ಮ ಪ್ರೀತಿಯ ದೋಸೆ ಸೆಲ್ಫಿಗಳಲ್ಲೇ ಮುಳುಗಿರಲಿ. ಬಿಜೆಪಿಯು ಬಿಟ್ಟು ಹೋಗಿರುವ ಅವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಸರಿ ಮಾಡುತ್ತಿದೆ.
ಬೆಂಗಳೂರು ಭಾರತದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಕಾಂಗ್ರೆಸ್ ಕಾಲದಲ್ಲೇ ಗಳಿಸಿತ್ತು. ಈಗಲೂ ತೇಜಸ್ವಿ ಸೂರ್ಯರಂತಹ ಅರ್ಬನ್ ವಿಷನರಿ ಚಿಂಟುಗಳ ಗಲಾಟೆಯ ನಡುವೆಯೂ ಬೆಂಗಳೂರು ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ.
ಈಗ ಪಿಪಿಟಿ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಬಂದಿರುವ ತೇಜಸ್ವಿ ಸೂರ್ಯ ಅವರು, ‘ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬಾಕಿಯಿರುವ ಸಾವಿರಾರು ಕೋಟಿ ರೂಪಾಯಿಗಳ ಜಿಎಸ್‌ಟಿ ಪರಿಹಾರ ಮತ್ತು ತೆರಿಗೆ ಪಾಲು ಕೇಳಲು ಮುಂದೆ ಬರಲಿಲ್ಲ’.
ತಮ್ಮದೇ ಪಕ್ಷದ ಸರ್ಕಾರ ಇದ್ದಾಗ ರಾಜ್ಯದ ಪಾಲಿಗೆ ಬರಬೇಕಾಗಿದ್ದ ನ್ಯಾಯಯುತ ಹಣಕ್ಕಾಗಿ ಎಷ್ಟು ಬಾರಿ ಧ್ವನಿ ಎತ್ತಿದ್ದರು?
- ಅಂಕಿ ಅಂಶಗಳ ಪ್ರಕಾರ ಕೇಂದ್ರದ ಜಿಎಸ್‌ಟಿ ಅನ್ಯಾಯದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳಲ್ಲಿ ಸುಮಾರು 59,274 ಕೋಟಿ ರೂಪಾಯಿ ನಷ್ಟವಾಗಿದೆ.
- ಅಕ್ಟೋಬರ್ 2023ರ ವೇಳೆಗೆ 2,333 ಕೋಟಿ ರುಪಾಯಿ ಜಿಎಸ್ಟಿ ಪರಿಹಾರ ಇನ್ನೂ ಬಾಕಿ ಉಳಿಸಿಕೊಂಡಿದೆ.
- 2017-18 ರಿಂದ 2022-23 ರವರೆಗೆ ಕೇಂದ್ರವು ಒಟ್ಟು 1.06 ಲಕ್ಷ ಕೋಟಿ ರುಪಾಯಿ ಹಣ ನೀಡಿದೆ ಎಂದು ಬಿಜೆಪಿ ವಾದ ಮಾಡುತ್ತಿದೆ. ಅದರಲ್ಲಿ 75,742 ಕೋಟಿ ರುಪಾಯಿ ಪರಿಹಾರ ಹಾಗೂ 30,516 ಕೋಟಿ ಸಾಲ ರೂಪದಲ್ಲಿ ಮಾತ್ರ ನೀಡಲಾಗಿದೆ.
- ಹೀಗಿದ್ದರೂ ಕೇಂದ್ರದ ಮುಂದೆ ರಾಜ್ಯಕ್ಕೆ ಬರಬೇಕಾಗಿದ್ದ ನ್ಯಾಯಯುತ ಹಣ ಕೇಳದೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಅಡ್ಡಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ವಿ.ಶ್ರೀನಿವಾಸ್ ಟೀಕಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/30/bv-srinivasa-2025-10-30-12-11-55.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us