/newsfirstlive-kannada/media/media_files/2025/08/13/rajani-coolie1-2025-08-13-12-12-51.jpg)
ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಮೊದಲದಿನವೇ ಸೂಪರ್ ಹಿಟ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ನಿನ್ನೆ ದೇಶ, ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಲಾಭ ಗಳಿಸಿದೆ. ಕೂಲಿ ಸಿನಿಮಾ, ರಜನಿಕಾಂತ್ ಅವರ 171 ನೇ ಸಿನಿಮಾ ಆಗಿದೆ. ಇದೇ ಮೊದಲ ಭಾರಿಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ರಜನಿಕಾಂತ್ ಗಾಗಿ ನಿರ್ದೇಶಿಸಿರುವ ಸಿನಿಮಾ ಇದು. ಕೂಲಿ ಸಿನಿಮಾ ಮೊದಲ ದಿನ ಎಲ್ಲ ಭಾಷೆಗಳಿಂದ ಒಟ್ಟಾರೆ ಬರೋಬ್ಬರಿ 65 ಕೋಟಿ ರೂಪಾಯಿ ಗಳಿಸಿದೆ. ಕೂಲಿ ಸಿನಿಮಾವು ಬಾಲಿವುಡ್ ಹೀರೋ ಹೃತಿಕ್ ರೋಷನ್- ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್-2 ಸಿನಿಮಾದ ಗಳಿಕೆಯನ್ನು ಮೀರಿಸಿದೆ. ವಾರ್-2 ಮೊದಲ ದಿನ 52.5 ಕೋಟಿ ರೂಪಾಯಿ ಗಳಿಸಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ತಮಿಳು ಸಿನಿಮಾ ರಂಗದಲ್ಲಿ ದೊಡ್ಡ ಓಪನಿಂಗ್ ಅನ್ನು ಪಡೆದುಕೊಂಡಿದೆ.
ತಮಿಳು ಭಾಷೆಯ ಸಿನಿಮಾ ಮಾರ್ನಿಂಗ್ ಷೋನಲ್ಲಿ ಶೇ.81.95 ರಷ್ಟು ಥಿಯೇಟರ್ ಸೀಟುಗಳು ಫುಲ್ ಆಗಿದ್ದವು. ಮಧ್ಯಾಹ್ನದ ಷೋನಲ್ಲಿ ಶೇ.85 ರಷ್ಟು ಸೀಟುಗಳು ಭರ್ತಿಯಾಗಿದ್ದವು. ಸಂಜೆಯ ಷೋನಲ್ಲಿ ಶೇ.86.5 ರಷ್ಟು ಸೀಟುಗಳು ಫುಲ್ ಆಗಿದ್ದವು. ರಾತ್ರಿ ಷೋನಲ್ಲಿ ಶೇ.94 ರಷ್ಟು ಸೀಟುಗಳು ಭರ್ತಿಯಾಗಿದ್ದವು.
ಮುಂಬೈನಲ್ಲಿ ಶೇ.35 ರಷ್ಟು ಮಾರ್ನಿಂಗ್ ಷೋನಲ್ಲಿ ಸೀಟು ಭರ್ತಿಯಾಗಿದ್ದರೇ, ಬೆಂಗಳೂರಿನಲ್ಲಿ ಶೇ.41 ರಷ್ಟು , ಕೋಲ್ಕತ್ತಾದರಲ್ಲಿ ಶೇ.41 ರಷ್ಟು, ಹಿಂದಿ ಭಾಷೆಯ ಸಿನಿಮಾಗೆ ಸೀಟುಗಳು ಭರ್ತಿಯಾಗಿದ್ದವು ಎಂದು ಟ್ರೇಡ್ ಟ್ರ್ಯಾಕರ್ ಸನನಿಲ್ಕ್ ಹೇಳಿದೆ.
ಕೂಲಿ ಸಿನಿಮಾ ರಜನಿಕಾಂತ್ ಅವರ ಇದುವರೆಗಿನ ಅಭಿನಯದ ಸಿನಿಮಾಗಳ ಪೈಕಿ ಮೊದಲ ದಿನವೇ ಭಾರಿ ಗಳಿಕೆ ಕಂಡ ಸಿನಿಮಾ ಆಗಿದೆ. ಆದರೇ, ವಿಜಯ ಅಭಿನಯದ ಲಿಯೋ ಸಿನಿಮಾ ಮೊದಲ ದಿನವೇ 66 ಕೋಟಿ ರೂಪಾಯಿ ಗಳಿಸಿತ್ತು. ಅದನ್ನು ಮೀರಿಸಲು ಕೂಲಿ ಸಿನಿಮಾದಿಂದ ಸಾಧ್ಯವಾಗಿಲ್ಲ.
ವೀಕೆಂಡ್ ನಲ್ಲಿ ಕೂಲಿ ಸಿನಿಮಾ ಭರ್ಜರಿ ಗಳಿಕೆ ಕಾಣುವ ನಿರೀಕ್ಷೆಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ