ಧರ್ಮಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕಿದ್ದು ಆಯ್ತು, ಈಗ ಎಸ್‌ಐಟಿ ಹೇಗೆ ತನಿಖೆ ಮಾಡುತ್ತೆ? ಮುಂದೇನಾಗುತ್ತೆ?

ಧರ್ಮಸ್ಥಳದಲ್ಲಿ ಅನಾಮಧೇಯ ತೋರಿಸಿದ ಸ್ಥಳದಲ್ಲಿ ಅಗೆದಾಗ ಏನೂ ಸಿಕ್ಕಿಲ್ಲ. ಆದರೇ, ಪಾಯಿಂಟ್‌ 6 ರಲ್ಲಿ 12 ಮೂಳೆ ಸಿಕ್ಕಿವೆ. ಈಗ ಎಸ್‌ಐಟಿ ಅಸ್ಥಿಪಂಜರದ ಬಗ್ಗೆಯೇ ತನಿಖೆ ನಡೆಸಲಿದೆ. ಅಸ್ಥಿಪಂಜರದ ಯಾರದ್ದು ಎಂದು ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಇದೇ ಎಸ್‌ಐಟಿಗೆ ದೊಡ್ಡ ಸವಾಲು.

author-image
Chandramohan
dharmasthala case(21)
Advertisment
  • ಧರ್ಮಸ್ಥಳದಲ್ಲಿ ಶನಿವಾರ ಬಾಕಿ ಉಳಿದ ನಾಲ್ಕು ಪಾಯಿಂಟ್ ಗಳ ಶೋಧ
  • ಇದುವರೆಗೂ 7 ಪಾಯಿಂಟ್ ಗಳಲ್ಲಿ ಶೋಧ ಕಾರ್ಯಾಚರಣೆ ಮುಕ್ತಾಯ
  • ಪಾಯಿಂಟ್ 6 ರಲ್ಲಿ ಮಾತ್ರವೇ 12 ಮನುಷ್ಯರ ಮೂಳೆಗಳು ಪತ್ತೆ

ಒಂದೇ ಒಂದು ಅಸ್ಥಿ ಪಂಜರ..  ಧರ್ಮಸ್ಥಳದ ನೇತ್ರಾವತಿ ತಟದಡಿ ಸಮಾಧಿಯಾಗಿದ್ದ ಮೂಳೆ ಸಿಕ್ಕಿದ್ದೆ ತಡ ಹಲ್​ಚಲ್ ಎದ್ದಿತ್ತು. ಅನಾಮಧೇಯ ಮಾರ್ಕಿಂಗ್  ಮಾಡಿದ್ದ ಜಾಗದಲ್ಲೇ ಮಾನವನ ಮೂಳೆ ಸಿಕ್ಕಿದ್ದು, ಕೇಸ್​ಗೆ ಮೇಜರ್ ಟ್ವಿಸ್ಟ್ ನೀಡಿತ್ತು.. ಈಗ ಎಸ್​ಐಟಿ ಆ ಮೂಳೆ ರಹಸ್ಯವನ್ನೆ ಭೇದಿಸೋಕೆ ಸಜ್ಜಾಗಿ ನಿಂತಿದೆ.. ಈ ಮಧ್ಯೆ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಸ್ಫೋಟಕ ರಹಸ್ಯವನ್ನೆ ರಿವೀಲ್ ಮಾಡಿದ್ದಾರೆ. ಅದೊಂದು ಪತ್ರದಲ್ಲಿ ಅನಾಮಿಕ ವ್ಯಕ್ತಿ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಆಪರೇಷನ್ ಅಸ್ಥಿ ಪಂಜರ ಹೇಗೆ ನಡೀತಿದೆ.. ಪಾಯಿಂಟ್ ನಂಬರ್ ಏಳು ಮತ್ತು ಎಂಟರಲ್ಲಿ ಸಿಕ್ಕಿದ್ದೇನು? ಎಂಬ ವಿವರವನ್ನು ಈ ರಿಪೋರ್ಟ್ ನಲ್ಲಿ ನೀಡಿದ್ದೇವೆ. 
ಒಂದಲ್ಲ ಎರಡಲ್ಲ...ನೂರಾರು ಶವಗಳನ್ನ ನೇತ್ರಾವತಿ ನದಿ ಅಕ್ಕಪಕ್ಕದಲ್ಲಿ ಹೂತು ಹಾಕಿದ್ದೇನೆ ಅಂತಾ ದೂರಿದ್ದ ಅನಾಮೇಧೆಯ ಬರೋಬ್ಬರಿ 13 ಪಾಯಿಂಟ್​ಗಳನ್ನ ಗುರುತು ಮಾಡಿದ್ದ.. ಆದ್ರೆ ಆರಂಭದಲ್ಲಿನ ಪಾಯಿಂಟ್​ಗಳ ರಾತ್ರಿ ತನಕ ಶೋಧ ನಡೆಸಿದ್ದ ಎಸ್​ಐಟಿ ಅಧಿಕಾರಿಗಳು ಬರೀಗೈನಲ್ಲಿ ವಾಪಸ್ ಆಗಿದ್ರು.. ಆದ್ರೆ ಗುರುವಾರ ಮಧ್ಯಾಹ್ನದ ಹೊತ್ತಿಗ್ಗ ಶವ ಹೂತಿಟ್ಟ​ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಅನಾಮೇಧೇಯ ವ್ಯಕ್ತಿ ಮಾರ್ಕ್ ಮಾಡಿದ್ದ ಆರನೇ ಪಾಯಿಂಟ್​​ನಲ್ಲಿ ಮನುಷ್ಯನ ಮೂಳೆ ಸಿಕ್ಕಿರೋದು ಸಂಚಲನಕ್ಕೆ ಕಾರಣವಾಗಿತ್ತು. ಅಷ್ಟಕ್ಕೂ  ಆಪರೇಷನ್ ಅಸ್ಥಿಪಂಜರ ಹೇಗೆ ಸಾಗ್ತಿದೆ? ಸಿಕ್ಕಿರೋ ಮೂಳೆ ರಹಸ್ಯ ಬಯಲಾಗುತ್ತಾ? ಅನ್ನೋ ಕುತೂಹಲ ಇದೆ. 
ಅನಾಮಧೇಯ ವ್ಯಕ್ತಿ ಒಂದಲ್ಲ ಎರಡಲ್ಲ, ನೂರಾರು ಮೃತ ದೇಹಗಳನ್ನ ನೇತ್ರಾವತಿ ನದಿಯ ದಡದಲ್ಲಿ ಹೂತು ಹಾಕಿದ್ದೇನೆ. ಅದ್ರಲ್ಲಿ ಬಹುಪಾಲು ದೇಹ ಮಹಿಳೆಯರದ್ದೇ ಆಗಿತ್ತು. ಅವು ರೇಪ್‌ ಆಗಿರೋ ದೇಹವಾಗಿತ್ತು ಅನ್ನೋ ಸ್ಫೋಟಕ ಆರೋಪ ಮಾಡಿದ್ದ.  ಈ ಆರೋಪ ಸುಳ್ಳಾ ಸತ್ಯವೇ  ಅನ್ನೋ ವಾದ ನಡೆಯುತ್ತಲೇ ಇದೆ.  ಹೀಗಿರುವಾಗ್ಲೇ  ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ 6ನೇ ಪಾಯಿಂಟ್‌ನಲ್ಲಿ ಸುಮಾರು 4 ರಿಂದ 5 ಅಡಿ ಆಳದ ಗುಂಡಿ ತೊಡ್ತಿದ್ದಂತೆ ಮಾನವನ ಮೂಳೆಗಳು ಪತ್ತೆಯಾಗಿಬಿಟ್ಟಿದ್ವು. ಇಲ್ಲಿಂದ ದಟ್ಟ ಕಾನನದಲ್ಲಿ ಹುದುಗಿದ್ದ ರಹಸ್ಯಗಳು ಸಮಾಧಿಯಿಂದ ಮೇಲೆದಿದ್ದು,   ಎರಡು ದಿನಗಳ ಕಾಲ ಅಗೆದರೂ ಬಗೆದರೂ ಸಿಗದ ಕುರುಹು ಬಹುದೊಡ್ಡ ತಿರುವು ಕೊಟ್ಟಿತ್ತು. 
ಸಮಾಧಿಯಲ್ಲಿ ಸಿಕ್ಕಿದ್ದೇನು? 
ಮಾನವ ದೇಹದ ತಲೆಬುರುಡೆಯ ಎರಡು ತುಂಡುಗಳು
ಕಾಲಿನ 2 ಮೂಳೆ, ಬೆನ್ನು ಮೂಳೆಗಳ, ಸಣ್ಣ ಮೂಳೆಗಳು
ತಲೆ ಬುರುಡೆಯ ಎರಡು ಚೂರುಗಳು ಸಹ ಪತ್ತೆ ಆಗಿವೆ
ತುಂಡಾದ ಎಲೆಸ್ಟಿಕ್ ಒಳ ಉಡುಪಿನ ತುಂಡು ಸಹ ಪತ್ತೆ
ಪಾಯಿಂಟ್-6ರಲ್ಲಿ 12 ಅಸ್ಥಿಪಂಜರ ಮೂಳೆಗಳು ಲಭ್ಯ
ಅವಶೇಷ ಸಿಕ್ಕ ಸ್ಥಳದಲ್ಲಿ ಹೆಚ್ಚಿನ ಭದ್ರತೆಗೆ SIT ಕ್ರಮ 
4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ
ಮಾನವ ದೇಹದ ತಲೆಬುರುಡೆಯ ಎರಡು ತುಂಡುಗಳು, ಕಾಲಿನ ಎರಡು ಮೂಳೆಗಳು  ಸಿಕ್ಕಿವೆ.. ಬೆನ್ನು ಮೂಳೆ ಸೇರಿ ಇತರೆ ಸಣ್ಣ ಸಣ್ಣ ಮೂಳೆಗಳು ಪತ್ತೆ ಆಗಿವೆ.. ತಲೆ ಬುರುಡೆಯ ಎರಡು ಚೂರು ಪತ್ತೆ ಆಗಿವೆ.. ಅಸ್ಥಿಪಂಜರ ಕಳೇಬರ ಜೊತೆ ತುಂಡಾದ ಎಲೆಸ್ಟಿಕ್ ಒಳ ಉಡುಪಿನ ತುಂಡು ಸಿಕ್ಕಿದೆ.. ಪಾಯಿಂಟ್-6ರಲ್ಲಿ 12 ಅಸ್ಥಿಪಂಜರದ ಮೂಳೆಗಳು ಸಿಕ್ಕಿವೆ.. ಅವಶೇಷ ಸಿಕ್ಕ ಸ್ಥಳದಲ್ಲಿ SIT ಹೆಚ್ಚಿನ ಭದ್ರತೆಗೆ ಕ್ರಮ ಕೈಗೊಂಡಿದೆ.. 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಿದೆ.. 

ಸಮಾಧಿಯಲ್ಲಿ ಸಿಕ್ಕಿರೋ ಮೂಳೆಗಳು ಮನುಷ್ಯರದ್ದೆ ಅನ್ನೋದು ಕನ್ಫರ್ಮ್ ಆಗಿದೆ..  ಹೀಗಾಗಿ ಎಸ್​ಐಟಿ ಸಿಕ್ಕಿರೋ ಮೂಳೆಗಳನ್ನ ಎಫ್‌​​ಎಸ್​​ಎಲ್​ಗೆ ರವಾನಿಸಿದೆ. ಗುರುವಾರ ಸಿಕ್ಕಿದ್ದ ಮೂಳೆಗಳನ್ನ ಆರಂಭದಲ್ಲಿ ನೀಟಾಗಿ ಜೋಡಿಸಿ, ಬಳಿಕ anatomical position ನಲ್ಲಿ ಇಟ್ಟು ಮಹಜರು ನಡೆಸಲಾಯ್ತು.. anatomical position ಅಂದ್ರೆ, ಮನುಷ್ಯ ದೇಹದ ರಚನೆ ಹೇಗಿದ್ಯೋ ಹಾಗೇ ಅಸ್ಥಿ ಪಂಜರವನ್ನ ಜೋಡಿಸೋದು.. ಗುರುವಾರ ಸಿಕ್ಕ ಮಾನವನ ಮೂಳೆಗಳನ್ನ  ಸಹ ಇದೇ anatomical position ನಲ್ಲಿ ಜೋಡಿಸಿ ಮಹಜರು ಮಾಡಲಾಗಿತ್ತು. ಇದಾದ ಮೇಲೆ ಸಿಕ್ಕಿರುವ ಮೂಳೆಗಳನ್ನ ಮಂಗಳೂರಿನ ಖಾಸಗಿ ಮೆಡಿಕಲ್​ ಕಾಲೇಜಿಗೆ ರವಾನೆ ಮಾಡಿ, ಬಳಿಕ ಅಲ್ಲಿಂದ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡ್ಲಾಗಿತ್ತು. 
ಮೂಳೆ ಪತ್ತೆಯಾಗ್ತಿದ್ದಂತೆ ಎಸ್​ಐಟಿ ಅಲರ್ಟ್! ಕಟ್ಟೆಚ್ಚರ!
ಯಾವಾಗ ಪಾಯಿಂಟ​್ ನಂಬರ್ ಆರರಲ್ಲಿ ಮನುಷ್ಯನ ದೇಹದ ಮೂಳೆಗಳು ಸಿಕ್ವು.. ಎಸ್​ಐಟಿ ಅಧಿಕಾರಿಗಳು ಅಲರ್ಟ್​ ಆಗಿದ್ರು.. ಸಾಕ್ಷಿಗಳನ್ನ ರಕ್ಷಣೆ ಮಾಡೋದಕ್ಕೆ ಗ್ರೀನ್ ಶೀಟ್ ಹಾಕಿ ಫುಲ್​ ಕಟ್ಟೆಚರ ವಹಿಸಿದ್ರು.. ಬಳಿಕ ಶುಕ್ರವಾರ ಮುಂಜಾನೆ ಮತ್ತೆ ಕಾರ್ಯಾಚರಣೆಗಿಳಿದ ಎಸ್​ಐಟಿ ಅಧಿಕಾರಿಗಳು, ಪಾಯಿಂಟ್​ ನಂಬರ್​​ ಏಳರಲ್ಲಿ ಅಗೆಯೋದಕ್ಕೆ ಶುರು ಮಾಡಿದ್ರು. ಕಳೆಬರಹ ಸಿಕ್ಕ ಬೆನ್ನಲ್ಲೇ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು,  ಆರನೇ ಪಾಯಿಂಟ್​​ ಪಕ್ಕದಲ್ಲೇ ಇರೋ ಏಳನೇ ಪಾಯಿಂಟ್​ ಅಗೆಯೋದಕ್ಕ ಜೆಸಿಬಿ ಎಂಟ್ರಿ ಕೊಟ್ಟಿತ್ತು. 
ಹಸಿರು ಪರದೆ! ಮೊಬೈಲ್​ ಬ್ಯಾನ್.. ಕಾಡಲ್ಲಿ ಹೇಗಿದೆ ಶೋಧ?
ಏಳನೇ ಪಾಯಿಂಟ್ ಅಗೆಯೋದಕ್ಕೆ ಮುನ್ನ ಆ ಜಾಗವನ್ನ  ಗ್ರೀನ್ ಟಾರ್ಪಲ್ ಹಾಕಿ  ಕವರ್ ಮಾಡಲಾಗಿತ್ತು.. ಕಾರ್ಯಾಚರಣೆಯ ಗೌಪ್ಯತೆ ಕಾಪಾಡೋದಕ್ಕೆ ಅಧಿಕಾರಿಗಳು, ಮತ್ತು ಸಿಬ್ಬಂದಿಯ ಮೊಬೈಲ್​ಗಳನ್ನ ಕಾರ್ಯಾಚರಣೆ ಸ್ಥಳಕ್ಕೆ ತರದಂತೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಯಾರಿಗೂ ಮೊಬೈಲ್ ಬಳಸಂದತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಇಬ್ಬರು ಅಧಿಕಾರಿಗಳಿಗೆ ಮಾತ್ರ ಮೊಬೈಲ್ ನೊಂದಿಗೆ ಪಾಯಿಂಟ್ ನಂಬರ್ 7ಕ್ಕೆ ತೆರಳಲು ಅವಕಾಶ ನೀಡಲಾಗಿದ್ದು, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗಿಸ್ ಹಾಗೂ ಎಸ್ಐಟಿ ತನಿಖಾಧಿಕಾರಿ ಎಸ್ ಪಿ ಜಿತೇಂದ್ರ ದಯಾಮ್ ಗೆ ಮಾತ್ರ ಮೊಬೈಲ್ ಗೆ ಬಳಕೆಗೆ ಅನುಮತಿ ನೀಡಲಾಗಿತ್ತು.. ಇವರಿಬ್ಬರನ್ನ ಬಿಟ್ಟು ಉಳಿದವರೆಲ್ಲ ಮೊಬೈಲ್​ ಇಲ್ದೇ ಕಾರ್ಯಾಚರಣೆ ಪ್ರದೇಶಕ್ಕೆ ತೆರಳಿದ್ರು. 
ಏಳನೇ ಪಾಯಿಂಟ್ ಡಿಗ್ಗಿಂಗ್.. ಸಿಕ್ತು ಒಂದು ಖರ್ಚೀಫ್!
ಆರನೇ ಪಾಯಿಂಟ್​ ಪಕ್ಕದಲ್ಲೇ ಇದ್ದ ಏಳನೇ ಪಾಯಿಂಟ್​ನಲ್ಲಿ ಬೆಳಗ್ಗೆಯಿಂದ ಸುಮಾರು ಮಧ್ಯಾಹ್ನ ಒಂದು ಗಂಟೆ ತನಕವೂ ಅಗೆಯಲಾಗಿತ್ತು.. ಆರನೇ ಪಾಯಿಂಟ್​ನಲ್ಲಿ ಮೂಳೆ ಸಿಕ್ಕ ಕಾರಣ ಪೊಲೀಸರು ತುಂಬಾನೆ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸ್ತಿದ್ರು. ಆದ್ರೆ ಪಾಯಿಂಟ್​ ನಂಬರ್ ಏಳು ಅನ್ನು  ಅಗೆಯುವಾಗ ಒಂದು ಖರ್ಚೀಪ್​ ಸಿಕ್ಕಿರೋ ಮಾಹಿತಿದೆ.. ಗುಂಡಿಯಲ್ಲಿ ಸಿಕ್ಕಿರೋ ಖರ್ಚೀಫ್ ಅ​ನ್ನು ಎಸ್​ಐಟಿ ಅಧಿಕಾರಿಗಳು ಸಂಗ್ರಹಿಸಿಟ್ಟು, ಬಳಿಕ ಅದನ್ನೆೇ ಎಫ್​ಎಸ್​​ಎಲ್​ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ ಅಂತ ತಿಳಿದು ಬಂದಿದೆ. 
ಇನ್ನು ಸ್ಥಳೀಯರು ಕೂಡ ಈ ಕಾರ್ಯಾಚರಣೆಯನ್ನ ಕುತೂಹಲದಿಂದಲೇ ನೋಡ್ತಿದ್ದಾರೆ. ಹೀಗಾಗಿ ಕೇಳಿ ಬರ್ತಿರೋ ಆರೋಪಗಳ ಬಗ್ಗೆ ಕೇಳಿದ್ರೆ.. ಇಲ್ಲಿ ಅಸ್ಥಿ ಪಂಜರ ಸಿಗೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ. ಯಾಕಂದ್ರೆ ತುಂಬಾ ಜನ ನದಿ ಘಟಕ್ಕೆ ಬಂದು ಸೂಸೈಡ್ ಮಾಡ್ಕೊಂಡಿದ್ದು. ಬೆಟ್ಟದಲ್ಲಿ ಕೊಲೆ ಮಾಡಿ ಬೀಸಾಕಿರೋ ಉದಾಹರಣೆಗಳು ಇವೆ.. ಹೀಗಾಗಿ ಅಸ್ಥಿ ಪಂಜರ ಸಿಕ್ಕಿರೋದು ನಮಗೆ ಆಶ್ಚರ್ಯವೇನಲ್ಲ ಅಂತಿದ್ದಾರೆ. 
ಇನ್ನು ಕೆಲವರು ಅಡಗಿರೋ ಸತ್ಯ ಏನಿದೆ ಆಚೆ ಬರಲಿ.. ಅವನು ಗುರುತು ಮಾಡಿರೋ ಏರಿಯಾದಲ್ಲಿ ಹೂತು ಹಾಕಿರೋ ಅವಶೇಷ ಸಿಗೋದು ಹೊಸದೇನಲ್ಲ. ಈಗ ಸಿಕ್ಕಿರೋ ಅವಶೇಷದ ದಾಖಲೆ ಸಿಕ್ಕರೆ ಅಸಲಿ ಸತ್ಯ ಏನು ಅನ್ನೋದು ಗೊತ್ತಾಗುತ್ತೆ ಅಂತಿದ್ದಾರೆ. 
ಸದ್ಯಕ್ಕೆ ಹೂತಿಟ್ಟಿರೋ ಜಾಗದಲ್ಲಿ ಅವಶೇಷ ಪತ್ತೆಯಾಗೋದಕ್ಕೆ ಮುಂಚೆ, ಒಂದು ಡೆಬಿಟ್ ಕಾರ್ಡ್​​ ಮತ್ತು ಪ್ಯಾನ್ ಕಾರ್ಡ್​​ ಸಿಕ್ಕಿತ್ತು.. ಆದ್ರೆ ಆ ಟೈಮ್​ನಲ್ಲಿ ಆ ಕಾರ್ಡ್​ ಯಾರದ್ದು ಅನ್ನೋದು ಗೊತ್ತಾಗಿರಲ್ಲಿಲ್ಲ.. ಆದ್ರೀಗ ಪ್ಯಾನ್​ ಕಾರ್ಡ್​ ರಹಸ್ಯ ರಿವೀಲ್ ಆಗಿದ್ದು, ಕಾರ್ಡ್​ನ ವಾರಸುದಾರರು ಪತ್ತೆಯಾಗಿದ್ದಾರೆ. ಈ ಮಧ್ಯೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅನಾಮೇಧೆಯ ವ್ಯಕ್ತಿಯ ಸ್ಫೋಟಕ ಪ್ಲ್ಯಾಶ್​ ಬ್ಯಾಕ್​ ಸತ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
ಪಾಯಿಂಟ್​ ನಂಬರ್ ಒಂದನ್ನ ಅಗೆಯೋ ಹೊತ್ತಲ್ಲಿ, ಎಸ್​ಐಟಿ ಅಧಿಕಾರಿಗಳಿಗೆ.. ಆರಂಭದಲ್ಲಿ ಒಂದು ಪ್ಯಾನ್ ಕಾರ್ಡ್​ ಮತ್ತು ಡೆಬಿಡ್ ಕಾರ್ಡ್ ಸಿಕ್ಕಿತ್ತು.. ಹೀಗಾಗಿ ಈ ಡೆಬಿಟ್ ಕಾರ್ಡ್ ಮತ್ತು ಪ್ಯಾನ್​ ಕಾರ್ಡ್​ ವಾರಸುದಾರರು ಯಾರು ಅನ್ನೋದನ್ನ ಪತ್ತೆ ಹಚ್ಚೋದಕ್ಕೆ ಮುಂದಾಗಿದ್ರು, ಈ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಸ್ಟೇಷನ್​ಗೂ ಮಾಹಿತಿ ನೀಡಿದ್ರು.. 
 ಪಾಯಿಂಟ್​ 1ರಲ್ಲಿ ಸಿಕ್ಕ ಡೆಬಿಟ್​ ಕಾರ್ಡ್​ ರಹಸ್ಯ ಬಯಲು !
ಡೆಬಿಟ್​ ಕಾರ್ಡ್​ ವಾರಸುದಾರ ಮಹಿಳೆ ಇನ್ನೂ ಜೀವಂತ!
ಪಾಯಿಂಟ್ 1ರಲ್ಲಿ ಪತ್ತೆಯಾಗಿದ್ದ ಡೆಬಿಟ್​ ಹಾಗು ಪಾನ್​ ಕಾರ್ಡ್​ಗೆ ಬೇರೆಯದ್ದೆ ತಿರುವು ಸಿಕ್ಕಿದೆ.. ಅನಾರೋಗ್ಯದಿಂದ ಪಾನ್​ ಕಾರ್ಡ್​ ವಾರಸುದಾರ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.. ಡೆಬಿಟ್ ಕಾರ್ಡ್​ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಆಕೆ ಜೀವಂತ ಇದ್ದಾರೆಂಬ ಮಾಹಿತಿ ಲಭ್ಯ ಆಗಿದೆ.. ಮಹಿಳೆಯನ್ನ ಸಂಪರ್ಕಿಸಿದ SIT, ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿ ಖಚಿತ ಪಡಿಸಿಕೊಂಡಿದೆ.. ಡೆಬಿಟ್ ಕಾರ್ಡ್ ಹಾಗು ಪಾನ್ ಕಾರ್ಡ್ ಕುರಿತು ಎದ್ದಿದ್ದ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದೆ.. ಬೆಂಗಳೂರು ಹೊರವಲಯದ ನೆಲಮಂಗಲ ನಿವಾಸಿ ಸುರೇಶ್​ ಅಂತ ಗೊತ್ತಾಗಿದೆ. ಆತ 5 ತಿಂಗಳ ಹಿಂದೆ ಜಾಂಡಿಸ್​ನಿಂದ ಸಾವನ್ನಪ್ಪಿದ್ದ ಅಂತ ತಾಯಿ ಸಿದ್ದಲಕ್ಷ್ಮಮ್ಮ ಹೇಳಿದ್ದಾರೆ.
ಗ್ರಾ.ಪಂ ಮಾಜಿ ಅಧ್ಯಕ್ಷ ಕೊಟ್ಟ ಟ್ವಿಸ್ಟ್! ಆ ರಹಸ್ಯ ಬಯಲು! 
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಧರ್ಮಸ್ಥಳದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವಗೌಡ ಹೆಣ ಹೂತಿಟ್ಟ ಕೇಸ್​ಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಇವತ್ತು ನದಿ ತಟದಲ್ಲಿ ನೂರಾರು ಹೆಣ ಹೂತಿರೋದಾಗಿ ಆರೋಪ ಮಾಡ್ತಿರೋ ಅನಾಮಧೇಯ ವ್ಯಕ್ತಿ ಹೆಣದ ಮೇಲಿನ ಚಿನ್ನ ಕದಿಯುತ್ತಿದ್ದ ಅಂತ ಆರೋಪ ಮಾಡಿದ್ದಾರೆ.. ನಿಜವಾಗ್ಲೂ ಅವನಿಗೆ ಜೀವ ಬೆದರಿಕೆ ಅನ್ನೋದು ಇದ್ದಿದ್ರೆ ಅವನು ಪೊಲೀಸ್ ಸ್ಟೇಷನ್​ಗೆ ದೂರು ಕೊಡ್ಬೇಕಾಗಿತ್ತು.. ಯಾಕೆ ದೂರು ಕೊಡಲ್ಲಿಲ್ಲ. ಓಡಿ ಹೋದ್ದದು ಯಾಕೆ ಅಂತ ಗ್ರಾಮ್​ ಪಂಚಾಯತನ ಮಾಜಿ ಅಧ್ಯಕ್ಷ ಕೇಶವಗೌಡ ಪ್ರಶ್ನೆ ಮಾಡ್ತಿದ್ದಾರೆ.. ಇನ್​ಫ್ಯಾಕ್ಷ್​ ಇವತ್ತು ದೂರು ಕೊಟ್ಟಿರೋ ವ್ಯಕ್ತಿ ಈ ಹಿಂದೆ ಗ್ರಾಮ ಪಂಚಾಯ್ತಿಯಲ್ಲೂ ಕೆಲಸ ಮಾಡಿದ್ನಂತೆ.. ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ  ಸ್ವಚ್ಛತಾ ಕೆಲಸಗಳನ್ನ ಮಾಡಿ ಕೊಡ್ತಿದ್ನಂತೆ.. ಹಗಲೊತ್ತಿನಲ್ಲಿ ಅಲ್ಲಿ ಕೆಲಸ ಮಾಡಿದ್ರೆ, ಸಂಜೆಯ ಹೊತ್ತಿನಲ್ಲಿ ಗ್ರಾಮ ಪಂಚಾಯ್ತಿಗೆ ಬಂದು ಕೆಲಸ ಮಾಡ್ತಿದ್ದ ಅನ್ನೋ ಸ್ಫೋಟಕ ಸತ್ಯಗಳನ್ನ ಕೇಶವಗೌಡ ಹೇಳಿದ್ದಾರೆ. 
ಇದಷ್ಟೆ ಅಲ್ಲ ಈ ಕೇಶವಗೌಡ ಅನಾಮಧೇಯ ವ್ಯಕ್ತಿಯನ್ನ ದೂರದಿಂದ ನೋಡಿದಾರಂತೆ ಕೂಡ.. ಯಾರೋ ಅನಾಮಿಕ ಬಂದು ಇಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎನ್ನುವುದಕ್ಕೆ ಇಲ್ಲಿ ಮಹಾಯುದ್ಧ ಆಗಿರಲಿಲ್ಲ. ಅನಾಮಿಕ ಯಾರು ಅನ್ನುವುದು ಧರ್ಮಸ್ಥಳದ ಜನರಿಗೆ ಗೊತ್ತಿದೆ. ಈ ವ್ಯಕ್ತಿ ನಟೋರಿಯಸ್ ಆಗಿದ್ದು, ಹೆಣಗಳ ಮೇಲಿದ್ದ ಚಿನ್ನ, ಹಣ ಕದಿಯುತ್ತಿದ್ದ. ಹೊಳೆಯಲ್ಲಿ ಅನಾಥ ಶವಗಳು ಸಿಕ್ಕರೆ ನುಗ್ಗಿ ಹೊಳೆಯಿಂದ ಚಿನ್ನ ತೆಗೆಯುತ್ತಿದ್ದೆ. ಆತ ಧರ್ಮಸ್ಥಳದಿಂದ ಓಡಿ ಹೋಗಿಲ್ಲ. ಆತ ಮಾಡಿದ ದುಷ್ಕೃತ್ಯಗಳಿಗೆ ಆತನನ್ನು ಕ್ಷೇತ್ರದಿಂದ ಬಹಿಷ್ಕಾರ ಹಾಕಲಾಗಿತ್ತು ಎಂದಿದ್ದಾರೆ. 
ಧರ್ಮಸ್ಥಳ ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್!
ಒಂದ್ಕಡೆ ಹೆಣ ಹೂತಿರೋ ಕೇಸ್​​ಗೆ ದಿನಕ್ಕೊಂದು ಟ್ವಿಸ್ಟ್ ಪಡೆದು ಕೊಳ್ತಿದ್ರೆ..  ಇನ್ನೊಂದೆಡೆ ಕೇರಳ ಫೈಲ್ಸ್.. ಕಾಶ್ಮೀರಿ ಫೈಲ್ಸ್ ರೀತಿ ಧರ್ಮಸ್ಥಳ ಫೈಲ್ಸ್ ಅಂತ ಸಿನಿಮಾ ಮಾಡೋದಕ್ಕೆ ಪ್ಲ್ಯಾನ್ ನಡೆದಿದ್ಯದಂತೆ.. ಈಗಾಗಲೇ ಚಿತ್ರತಂಡದಿಂದ ಟೈಟಲ್​ ಕೂಡ ರಿಜಿಸ್ಟರ್ ಆಗಿದ್ದು, ಶ್ರೀ ಚಾಮುಂಡೇಶ್ವರಿ ಪ್ರೊಡಕ್ಷನ್​ ಈ ಸಿನಿಮಾವನ್ನ ನಿರ್ಮಾಣ ಮಾಡ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ.ಕೇವಲ ಸಿನಿಮಾ ಮಾತ್ರವಲ್ಲ.. ನಿರ್ಮಾಣ ಸಂಸ್ಥೆ ಧರ್ಮಸ್ಥಳ ಫೈಲ್ಸ್​​ನ ವೆಬ್ ಸಿರೀಸ್ ಕೂಡ ಮಾಡೋದಕ್ಕೆ ಕತೆ ರೆಡಿ ಮಾಡ್ತಿದೆ ಎನ್ನಲಾಗಿದೆ.. ಒಂದು ವೇಳೆ ಕಾನೂನು ತೊಡಕಾದ್ರೆ ಅದರ ಪ್ರಕ್ರಿಯೆ ಪಾಲಿಸಿ ಸಿನಿಮಾ ಮಾಡೋದಕ್ಕ ಈ ತಂಡ ರೆಡಿಯಾಗಿದೆ. ಈಗಾಗಲೇ ನುರಿತ ನಿರ್ದೇಶಕರಿಂದ ಸ್ಟೋರಿ ಕೂಡ ಪ್ಲ್ಯಾನ್ ಮಾಡ್ತಿದ್ದು, ಎಂಎಸ್​ ರಮೇಶ್​ ಕತೆ ಬರೆಯುತ್ತಾರೆ ಎನ್ನಲಾಗಿದೆ. ಇನ್ನೂ ಮಲಯಾಳಂ ನಿರ್ದೇಶಕ ವಿ.ಕೆ ಪ್ರಕಾಶ್​ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದು, ಸದ್ಯದಲ್ಲಿಯೇ ಚಿತ್ರದ ಬಗ್ಗೆ ಬಹಿರಂಗವಾಗಿ ಅನೌನ್ಸ್ ಆಗೋ ಸಾಧ್ಯತೆಯಿದೆ. 
ಒಟ್ನಲ್ಲಿ ಶುಕ್ರವಾರ ಏಳು, ಎಂಟು ಎರಡು ಗುಂಡಿಗಳನ್ನ ಅಗೆಯಲಾಗಿದ್ದು, ಒಂದು ಪಾಯಿಂಟ್​ನಲ್ಲಿ ಮಾತ್ರ ಕರ್ಚಿಫ್​ ಬಿಟ್ರೆ ಬೇರೆ ಏನೂ ಸಿಕ್ಕಿಲ್ಲ.. ಎಂಟನೇ ಪಾಯಿಂಟ್​ನಲ್ಲಿ ಸುಮಾರು ಐದು ಅಡಿಯವರೆಗೂ ಅಗೆದ್ರೂ ಯಾವ ಕಳೇಬರವೂ ಪತ್ತೆಯಾಗಿಲ್ಲ... ಕೊನೆಗೆ ಸಂಜೆ ಹೊತ್ತಿಗೆ ಮೋಟರ್ ಪಂಪ್ ಹಾರೆಗಳನ್ನ ಸ್ವಚ್ಛಗೊಳಿಸಿದ ಕಾರ್ಮಿಕರು ವಾಪಸ್ ತೆರಳಿದ್ದಾರೆ. ಹೀಗಾಗಿ ಗುರುವಾರ ಅಗೆದ ಎರಡೂ ಪಾಯಿಂಟ್​ನಲ್ಲಿ ಯಾವ ಅಸ್ಥಿ ಪಂಜರವೂ ಸಿಕ್ಕಿಲ್ಲ. ಶನಿವಾರ ಒಂಬತ್ತನೇ ಪಾಯಿಂಟ್​ನಿಂದ ಮತ್ತೆ ಆಪರೇಷನ್ ಅಸ್ಥಿಪಂಜರ ಮುಂದುವರೆಯಲಿದೆ. ಶನಿವಾರ ನಾಲ್ಕು ಪಾಯಿಂಟ್ ಗಳ ಭೂಮಿ ಅಗೆತ ಕಾರ್ಯ ನಡೆಯಲಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Crime News in Kannada CM SIDDARAMAIAH
Advertisment