/newsfirstlive-kannada/media/media_files/2026/03/01/passenger-stranded-in-airports-2026-03-01-17-45-14.jpg)
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರು
ಇರಾನ್ ಹಾಗೂ ಇಸ್ರೇಲ್ ಯುದ್ಧ ದಾಹ ಸದ್ಯ ಕನ್ನಡಿಗರನ್ನೂ ಪರದಾಡುವಂತೆ ಮಾಡಿದೆ.. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರೋ ಕನ್ನಡಿಗರು ಜೀವ ಕೈಯಲ್ಲಿ ಹಿಡಿದು ಸಮಯ ಕಳೆಯುತ್ತಿದ್ದಾರೆ.. ತಾಯ್ನಾಡಿಗೆ ಮರಳಲು ಹಂಬಲಿಸುತ್ತಿರೋ ನೂರಾರು ಕನ್ನಡಿಗರು ಕ್ಷಿಪಣಿಗಳ ಸದ್ದಿಗೆ ಭಯಗೊಂಡು ಸಹಾಯದ ನೀರೀಕ್ಷೆಯಲ್ಲಿದ್ದಾರೆ.
ಇಸ್ರೇಲ್ ಹಾಗೂ ಇರಾನ್ ಯುದ್ಧ ಕನ್ನಡಿಗರಿಗೂ ಕಂಟಕ ತಂದೊಡ್ಡಿದೆ.. ಕೊಲ್ಲಿ ರಾಷ್ಟ್ರಗಳಲ್ಲಿರೋ ಕನ್ನಡಿಗರು ತಾಯ್ನಾಡಿಗೆ ಮರಳಾಗದೇ ಪರದಾಡ್ತಿದ್ದಾರೆ.. ಕ್ಷಣ ಕ್ಷಣಕ್ಕೂ ಇಸ್ರೇಲ್​ ಹಾಗೂ ಇರಾನ್​ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ.. ದೇವರೇ ಸೇಫ್​ ಆಗಿ ವಾಪಸ್​ ಹೋದ್ರೆ ಸಾಕಪ್ಪ ಅಂತ ಕನ್ನಡಿಗರು ಪರಿತಪ್ಪಿಸುತ್ತಿದ್ದಾರೆ.
ದುಬೈನಲ್ಲಿ ಬಳ್ಳಾರಿಯ 35 ಪ್ರವಾಸಿಗರ ಪರದಾಟ
ಇಸ್ರೇಲ್-ಇರಾನ್ ಯುದ್ಧದಿಂದ ಬಹ್ರೇನ್​ನಲ್ಲಿ ಹಾಸನ ಜಿಲ್ಲೆಯ ಐವರು ಕನ್ನಡಿಗರು ಸಿಲುಕಿದ್ದಾರೆ.. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿಯ ಗ್ರಾಮಸ್ಥರು ಬಹರೇನ್ ರಾಜಧಾನಿ ಮನಾಮದಲ್ಲಿರುವ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದಾರೆ.. ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಕೂಡ ಕುಟುಂಬದ ಜೊತೆ ದುಬೈನಲ್ಲಿದ್ದು, ಬುರ್ಜ್ ಖಲೀಫಾ ಬಳಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ದುಬೈ ಪ್ರವಾಸಕ್ಕೆ ತೆರಳಿದ್ದ 35ಕ್ಕೂ ಹೆಚ್ಚು ಮಂದಿಗೆ ಸಂಕಷ್ಟ
ದಾವಣಗೆರೆ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಿಂದ ಫೆಬ್ರವರಿ 23ರಂದು ದುಬೈ ಪ್ರವಾಸಕ್ಕೆ ತೆರಳಿದ್ದ 35ಕ್ಕೂ ಹೆಚ್ಚು ವೃದ್ಧರು ದುಬೈನಲ್ಲಿ ಸಿಲುಕಿದ್ದಾರೆ.. ಶಾರ್ಜಾ ವಿಮಾನ ನಿಲ್ದಾಣ ಬಂದ್ ಆಗಿರೋ ಹಿನ್ನೆಲೆ 12 ಗಂಟೆ ಲಾಡ್ಜ್ ಬುಕ್ ಮಾಡಲು ತಲಾ ಒಬ್ಬರು 10 ಸಾವಿರ ರೂಪಾಯಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.. ಈ ಬಗ್ಗೆ ವಿಡಿಯೋ ಮಾಡಿ ಸಹಾಯಕ್ಕಾಗಿ ವೃದ್ಧರು ಮನವಿ ಮಾಡಿದ್ದಾರೆ.. ಇನ್ನೂ ಕೆಲಸದ ನಿಮಿತ್ತ ದುಬೈ ಮಾರ್ಗವಾಗಿ ಪ್ಯಾರಿಸ್​​​ಗೆ ಹೊರಟಿದ್ದ ಬಾಗಲಕೋಟೆ ಮೂಲದ ಟೆಕ್ಕಿ ಗಿರೀಶ್ ಕೆರೂರು ಎಂಬುವರು ಸಹ ದುಬೈನಲ್ಲಿ ಅತಂತ್ರರಾಗಿದ್ದಾರೆ.. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ ಸಹ ದುಬೈನಲ್ಲಿ ಸಿಲುಕಿದ್ದಾರೆ.
‘ನಮಗೆ ಸಹಾಯ ಮಾಡಿ’ ‘ಸದ್ಯಕ್ಕೆ ಸೇಫ್ ಇದ್ದೇವೆ’
ಕ್ಷಿಪಣಿಗಳು ಬೀಳುತ್ತಿರುವ ವಿಡಿಯೋ ಹಂಚಿಕೊಂಡ ಭಾರತೀಯ
ಇರಾನ್- ಇಸ್ರೇಲ್ ಯುದ್ಧದ ಹಿನ್ನಲೆ ಕತಾರ್​ ದೇಶದ ರಾಜಧಾನಿ ದೋಹಾ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.. ಈ ಬಗ್ಗೆ ಬಾಗಲಕೋಟೆ ಮೂಲದ ಸಾಫ್ಟ್‌ವೇರ್ ಇಂಜಿನಿಯರ್​ ಅರವಿಂದ, ದೋಹಾ ಪರಿಸ್ಥಿತಿ ಬಗ್ಗೆ ವಿವರಿಸಿದ್ದು, ಕ್ಷಿಪಣಿಗಳು ಬೀಳುತ್ತಿರುವ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.. ಇನ್ನೂ ರಾಯಚೂರಿನ ಸಿಂಧನೂರು ಮೂಲದ ಮಕ್ಕಳ ವೈದ್ಯ ಡಾ. ಶಿವರಾಜ್​ ದುಬೈನಲ್ಲಿ ಸಿಲುಕಿದ್ದಾರೆ.. ದುಬೈನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಗಲಕೋಟೆಯ ಧ್ರುವ ಸಂತೋಷ ಹೊಕ್ರಾನಿ ಹಾಸ್ಟೆಲ್ ರೂಮ್​ನಲ್ಲಿದ್ದು 400 ರಿಂದ 500 ಜನ ಭಾರತೀಯ ವಿದ್ಯಾರ್ಥಿಗಳ ಜೊತೆ ಸುರಕ್ಷಿತವಾಗಿದ್ದಾರೆ.. ದುಬೈನಲ್ಲಿ ಸಿಲುಕಿರೋ ಕನ್ನಡಿಗರಾದ ರಕ್ಷಿತಾ, ಯತೀಶ್​, ಅಕ್ಷಯ್​ ನ್ಯೂಸ್​ ಫಸ್ಟ್ ಜೊತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಹಂಚಿಕೊಂಡಿದ್ದಾರೆ.
ಒಟ್ನಲ್ಲಿ ಇಸ್ರೇಲ್​ ಹಾಗೂ ಇರಾನ್​ನಲ್ಲಿ ಕವಿದಿರೋ ಯುದ್ಧದ ಕಾರ್ಮೋಡ ಅಲ್ಲಿರೋ ಕನ್ನಡಿಗರ ಕಣ್ಣಲ್ಲಿ ಕಣ್ಣೀರು ತರಿಸಿದಂತು ನಿಜ.. ಎಲ್ಲರೂ ಸೇಫ್ ಆಗಿ ತಾಯ್ನಾಡಿಗೆ ವಾಪಸ್​ ಬರಲಿ ಅಂತ ಎಲ್ಲರೂ ದೇವರಲ್ಲಿ ಪ್ರಾರ್ಥಿಸೋದೊಂದೇ ಸದ್ಯಕ್ಕೆ ಉಳಿದಿರೋ ದಾರಿ.
ಕನ್ನಡಿಗರ ಜೊತೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತುಕತೆ
ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್​ ಮೂಲಕ ಮಾಹಿತಿ ನೀಡಿದ್ದಾರೆ.. ಅಲ್ಲದೇ ಕನ್ನಡಿಗರ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿ ಧೈರ್ಯ ತುಂಬಿದ್ದಾರೆ.
ನ್ಯೂಸ್​ ಫಸ್ಟ್​ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us