ಪತಿ ಫಸ್ಟ್ ನೈಟ್ ನಲ್ಲಿ ನನ್ನನ್ನು ಮುಟ್ಟಿಲ್ಲ, ಗಂಡ ನಪುಂಸಕ, 2 ಕೋಟಿ ಕೊಡಿ ಎಂದ ಹೆಂಡತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಪತಿ ಪ್ರವೀಣ್ ಮೊದಲ ರಾತ್ರಿಯಂದು ನನ್ನನ್ನು ಮುಟ್ಟಿಲ್ಲ. ನನ್ನ ಜೊತೆ ಫಸ್ಟ್ ನೈಟ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಪತ್ನಿ ಚ...ಅ.. ಗಲಾಟೆ ಮಾಡಿದ್ದಾಳೆ. ಪತಿ ಪ್ರವೀಣ್ ನಿಂದ ನನಗೆ 2 ಕೋಟಿ ರೂಪಾಯಿ ಕೊಡಬೇಕೆಂದು ಪಟ್ಟು ಹಿಡಿದು ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಪತಿ ಪ್ರವೀಣ್ ಇಕ್ಕಟ್ಟಿಗೆ ಸಿಲುಕಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

author-image
Chandramohan
impotent husband case

ಪತಿ ಪ್ರವೀಣ್ ವಿರುದ್ಧ ಆರೋಪ ಮಾಡಿದ ಪತ್ನಿ ಚ...ಅ.. ಹಾಗೂ ಎಐ ಚಿತ್ರ

Advertisment
  • ಪತಿ ಪ್ರವೀಣ್ ನಪುಂಸಕ ಎಂದು ಪತ್ನಿಯ ಗಂಭೀರ ಆರೋಪ
  • ಫಸ್ಟ್ ನೈಟ್ ನನ್ನನ್ನು ಮುಟ್ಟಿಲ್ಲ ಎಂದು ಪತ್ನಿಯ ಗಲಾಟೆ
  • ತನಗೆ ಪತಿ ಪ್ರವೀಣ್ 2 ಕೋಟಿರೂ. ಜೀವನಾಂಶ ನೀಡಲಿ ಎಂದು ಬೇಡಿಕೆ
  • ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪತಿ ಪ್ರವೀಣ್


ಫಸ್ಟ್ ನೈಟ್ ನಲ್ಲಿ ಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರಿಂದ ಹಣಕ್ಕೆ ಡಿಮಾಂಡ್  ಮಾಡಿದ ಆರೋಪದ ವಿಚಿತ್ರ ಕೇಸ್ ಬೆಂಗಳೂರಿನಲ್ಲಿ ದಾಖಲಾಗಿದೆ. ಪತಿ ಲೈಂಗಿಕ ಕ್ರಿಯೆ ನಡೆಸಲು ವಿಫಲನಾಗಿದ್ದಾನೆ.  ಹೀಗಾಗಿ ತನಗೆ ಕೋಟಿ ಕೋಟಿ ಹಣವನ್ನು ನೀಡಬೇಕೆಂದು ಪತ್ನಿ ಚ...ಅ.. ಬೇಡಿಕೆ ಇಟ್ಟಿದ್ದಾಳೆ. ಜೀವನಾಂಶಕ್ಕೆ ಬರೋಬ್ಬರಿ 2 ಕೋಟಿ ರೂಪಾಯಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಮದುವೆ ಆದ ಗಂಡ , ನಪುಂಸಕ ಎಂದು ಪತ್ನಿ ಚ..ಅ.. ಗಲಾಟೆ ಮಾಡಿದ್ದಾಳೆ. 
ಈಗ ಪತಿ ಪ್ರವೀಣ್ ಹಾಗೂ ಆತನ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದಾಗಿ ಬೇರೆ ದಾರಿ ಕಾಣದೇ, ಪತ್ನಿಯ ಬೇಡಿಕೆಯನ್ನು ಈಡೇರಿಸಲಾಗದೇ ಪತಿ ಪ್ರವೀಣ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.  ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪೋಷಕರ ವಿರುದ್ಧ ಪತಿ ಪ್ರವೀಣ್ ದೂರು ನೀಡಿದ್ದಾನೆ. 
ಪ್ರವೀಣ್ ಎಂಬ ಯುವಕ ಮೇ, 5 ರಂದು ಚಿಕ್ಕಮಗಳೂರು ಜಿಲ್ಲೆಯ ಯುವತಿಯನ್ನು ವಿವಾಹವಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಿವಾಹ ನಡೆದಿತ್ತು. ಮದುವೆಯಾದ ಮೊದಲ ರಾತ್ರಿ ಪತಿ ಪ್ರವೀಣ್, ಪತ್ನಿಯನ್ನು ಮುಟ್ಟಲು  ಹಿಂದೇಟು ಹಾಕಿದ್ದಾನೆ ಎಂದು ಪತ್ನಿ ಚ..ಅ.. ಆರೋಪ ಮಾಡಿದ್ದಾಳೆ. 
ಗಂಡ ಪ್ರವೀಣ್‌ನ ಪುರುಷತ್ವದ ಬಗ್ಗೆಯೇ ಪತ್ನಿ ಚ...ಅ.. ಗೆ ಅನುಮಾನ ಬಂದಿದೆ. ಹೀಗಾಗಿ ಗಂಡನ ಪುರುಷತ್ವದ ಬಗ್ಗೆ ವೈದ್ಯರ ಬಳಿ ಪರೀಕ್ಷೆ ಕೂಡ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಪತಿ ಪ್ರವೀಣ್ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೇ, ಮಾನಸಿಕ ಒತ್ತಡದಿಂದ ಸ್ವಲ್ಪ ಹಿಂದೇಟು ಹಾಕಿರಬಹುದು. ಸ್ಪಲ್ಪ ತಾಳ್ಮೆಯಿಂದ ಇರುವಂತೆ ಪತ್ನಿ ಚ..ಅ..ಗೆ ವೈದ್ಯರು ಸೂಚಿಸಿದ್ದಾರೆ. 

impotent husband case02



ಆದರೇ, ತಾಳ್ಮೆ ಕಳೆದುಕೊಂಡ ಪತ್ನಿ ಚ..ಅ... ಹಾಗೂ  ಆಕೆಯ ಪೋಷಕರು ಪತಿ ಪ್ರವೀಣ್ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಗಲಾಟೆ ಮಾಡಿದ್ದಾರೆ. ಆಗಸ್ಟ್ 17 ರಂದು ಪತಿ ಪ್ರವೀಣ್ ಮನೆಯಲ್ಲಿ ಪತ್ನಿ ಚ..ಅ.. ಕುಟುಂಬಸ್ಥರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಪತಿ ಪ್ರವೀಣ್ ಹಾಗೂ ಆತನ ಪೋಷಕರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಪತ್ನಿ ಚ..ಅ.. ಹಾಗೂ ಆಕೆಯ ಪೋಷಕರ ವಿರುದ್ಧ ಪತಿ ಪ್ರವೀಣ್ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

impotent husband case at Bangalore
Advertisment