/newsfirstlive-kannada/media/media_files/2025/09/10/kalburagi-sedam-murder01-2025-09-10-13-33-20.jpg)
ಹತ್ಯೆಯಾದ ಶೇಖ್ ರಿಯಾಜ್ ಮಿಯ್ಯಾ ಹಾಗೂ ಮೊದಲ ಪತ್ನಿ ಬೇಗಂ
ಕಲ್ಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪತ್ನಿಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಸೇಡಂನ ಸಾಯಿ ಬಾಬಾ ಕಾಲೋನಿ ನಿವಾಸಿ ಶೇಖ್ ರಿಯಾಜ್ ಮಿಯ್ಯಾಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಬೇಗಂ ಅನ್ನು ಬಿಟ್ಟು ಎರಡನೇ ಪತ್ನಿಯ ಜೊತೆ ಶೇಖ್ ರಿಯಾಜ್ ಮಿಯ್ಯಾ ವಾಸ ಇದ್ದ. ಆದರೇ, ಮೊದಲ ಪತ್ನಿ ಬೇಗಂಗೆ ಜಹೀರ್ ಎನ್ನುವವನ ಜೊತೆ ಅಫೇರ್ ಬೆಳೆದಿತ್ತು. ಲಾರಿ ಚಾಲಕನಾಗಿದ್ದ ಶೇಖ್ ರಿಯಾಜ್ ಮಿಯ್ಯಾಗೂ ಈ ವಿಷಯ ಗೊತ್ತಾಗಿದೆ. ತನ್ನ ಮೊದಲ ಪತ್ನಿ ಬೇಗಂ ಮನೆಗೆ ಹೋಗಿ ಗಂಡ ಶೇಖ್ ರಿಯಾಜ್ ಮಿಯ್ಯಾ ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಈ ವಿಷಯವಾಗಿ ಗಂಡ ಶೇಖ್ ರಿಯಾಜ್ ಮಿಯ್ಯಾ ಹಾಗೂ ಮೊದಲ ಪತ್ನಿಯ ಮಧ್ಯೆ ಜಗಳವಾಗಿದೆ.
ಈ ಅನೈತಿಕ ಸಂಬಂಧದ ವಿಷಯವೇ ಗಂಡ ಹಾಗೂ ಮೊದಲ ಪತ್ನಿಯ ಮಧ್ಯೆ ಆಗ್ಗಾಗ್ಗೆ ಜಗಳಕ್ಕೂ ಕಾರಣವಾಗಿದೆ. ಮೊನ್ನೆ ರಾತ್ರಿ ಮೊದಲ ಪತ್ನಿ ಬೇಗಂ ಮನೆಗೆ ಗಂಡ ಶೇಖ್ ರಿಯಾಜ್ ಮಿಯ್ಯಾ ಬಂದಾಗ, ಪತ್ನಿ ಪೋನ್ ನಲ್ಲಿ ಮಾತುಕತೆಯಲ್ಲೇ ಬ್ಯುಸಿಯಾಗಿದ್ದಳು. ಇದರಿಂದ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ.
ಮೊದಲ ಪತ್ನಿ ಜಹೀರ್ ಎನ್ನುವವನ ಜೊತೆ ಅಫೇರ್ ಹೊಂದಿದ್ದರಿಂದ ಪತ್ನಿ ಹಾಗೂ ಜಹೀರ್ ವಿರುದ್ಥ ಪೊಲೀಸ್ ಠಾಣೆಗೆ ದೂರು ನೀಡಲು ಶೇಖ್ ರಿಯಾಜ್ ಮಿಯ್ಯಾ ಹೋಗುತ್ತಿದ್ದ. ಈ ವೇಳೆ ಪ್ರಿಯಕರ ಜಹೀರ್ ನನ್ನು ಪೋನ್ ಮಾಡಿ, ಶೇಖ್ ರಿಯಾಜ್ ಪತ್ನಿ ಕರೆಸಿಕೊಂಡಿದ್ದಾಳೆ. ಬಳಿಕ ಜಹೀರ್, ಶೇಖ್ ರಿಯಾಜ್ ಮಿಯ್ಯಾನ ಬೆನ್ನತ್ತಿ ಹೋಗಿ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿ ಜಹೀರ್ ಮತ್ತು ಸೇಡಂ ಪೊಲೀಸ್ ಠಾಣೆ
ಸೇಡಂನ ಉಡಗಿ ಕ್ರಾಸ್ ನಲ್ಲಿ ಶೇಖ್ ರಿಯಾಜ್ ಮಿಯ್ಯಾನ ಕೊಲೆ ನಡೆದಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಸೇಡಂ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಜಹೀರ್ ಹಾಗೂ ಶೇಖ್ ರಿಯಾಜ್ ಮಿಯ್ಯಾನ ಮೊದಲ ಪತ್ನಿ ಬೇಗಂ ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.