ಮಗನ ಬರ್ತಡೇ ಗೆ ಗಿಫ್ಟ್ ಕೊಟ್ಟಿಲ್ಲ ಎಂದು ಹೆಂಡತಿ, ಅತ್ತೆಯ ಉಸಿರು ನಿಲ್ಲಿಸಿದ ಪತಿರಾಯ

ಮಗನ ಬರ್ತ್ ಡೇಗೆ ಏನೂ ಗಿಫ್ಟ್ ಕೊಟ್ಟಿಲ್ಲ ಎಂದು ಕೋಪಗೊಂಡ ಪತಿರಾಯ ಹೆಂಡತಿ ಹಾಗೂ ಅತ್ತೆಯ ಜೀವವನ್ನೇ ತೆಗೆದಿದ್ದಾನೆ. ಬಳಿಕ ಮಕ್ಕಳೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಬರ್ತ್ ಡೇ ಗಿಫ್ಟ್ ವಿಷಯ ಇಬ್ಬರ ಜೀವ ತೆಗೆಯಲು ಕಾರಣವಾಗಿದ್ದು ದುರಾದೃಷ್ಟ. ತಂದೆ ಯೋಗೇಶ್ ಜೈಲುಪಾಲು, ಮಕ್ಕಳು ಅನಾಥವಾಗಿದ್ದಾರೆ.

author-image
Chandramohan
delhi double murder02

ಅತ್ತೆ ಕುಸುಮಾ ಸಿನ್ಹಾ , ಮಗಳು ಪ್ರಿಯಾ ಸೆಹಗಲ್

Advertisment
  • ಬರ್ತಡೇ ಗಿಫ್ಟ್ ವಿಷಯಕ್ಕೆ ಇಬ್ಬರ ಜೀವ ತೆಗೆದ ಪತಿ ಯೋಗೇಶ್
  • ಹೆಂಡತಿ ಪ್ರಿಯಾ ಸೆಹಗಲ್, ಅತ್ತೆ ಕುಸುಮ ಸಿನ್ಹಾ ಉಸಿರು ನಿಲ್ಲಿಸಿದ ಪತಿ
  • ಆರೋಪಿ ಯೋಗೇಶ್ ಬಂಧಿಸಿದ ಪೊಲೀಸರು, ಮಕ್ಕಳೀಗ ಅನಾಥ
ಅದು ಒಂದು ಸಣ್ಣ ಮಾತಿಗೆ ಗಂಡ ಹೆಂಡ್ತಿ ಮಧ್ಯೆ ಶುರುವಾಗಿದ್ದ ಗಲಾಟೆ..ಆ ಗಲಾಟೆಯಿಂದ ಅತ್ತೆ ದೂರಾನೇ ಇದ್ರು..ಆದ್ರೆ, ಪತಿ-ಪತ್ನಿ ನಡುವೆ ಶುರುವಾದ  ಮಾತಿನ ಜಗಳ ಹೋಗ್ತಾ ಹೋಗ್ತಾ ಅವನನ್ನ ರಾಕ್ಷಸನನ್ನಾಗಿ ಬದಲಾಯಿಸಿತ್ತು. ಮಾಡಬಾರದ ಘೋರ ಕೃತ್ಯವೆಸಗಿ ಮನೆಯಿಂದ ಮಕ್ಕಳ ಜೊತೆಗೆ ಎಸ್ಕೇಪ್​ ಆಗಿಬಿಟ್ಟಿದ್ದ..ಸಂಬಂಧಿಕರು ಮನೆಗೆ ಬಂದು ನೋಡಿದಾಗ, ಅಲ್ಲಿ ನಡೆದಿದ್ದ ಭೀಭತ್ಸ ಕಂಡು ಬೆಚ್ಚಿಬಿದ್ದಿದ್ರು. ರಾಷ್ಟ್ರರಾಜಧಾನಿಯಲ್ಲಿ ನಡೆದ ಈ ಡಬಲ್ ಮರ್ಡರ್ ಇಡೀ ದೆಹಲಿಯೇ ಬೆವರುವಂತೆ ಮಾಡಿದೆ.
ಇಡೀ ಏರಿಯಾಗೆ ಏರಿಯಾವೇ ಬೆಚ್ಚಿಬಿದ್ದಿದೆ..ಹೆಂಗಸರ ಆಕ್ರಂದನ, ಗೋಳಾಟ ಮುಗಿಲುಮುಟ್ಟಿದೆ..ಇಲ್ಲಾಗಿರೋ ಭೀಭತ್ಸವನ್ನ ಅರಗಿಸಿಕೊಳ್ಳೋದಕ್ಕೆ ಯಾರ ಕೈಯಲ್ಲೂ ಆಗ್ತಿಲ್ಲ.ಎಲ್ಲಾ ಚೆನ್ನಾಗಿತ್ತು..ಚೆನ್ನಾಗಿರೋವಾಗಲೇ ಯಾಕ್​ ಹಿಂಗ್​ ಆಯ್ತು ಅನ್ನೋ ಪ್ರಶ್ನೆಗಳು..ನಿಜಕ್ಕೂ ಇಲ್ಲಿ ನಡೆದಿರೋ ಘಟನೆ ಇದೊಂದು ಪ್ರದೇಶವನ್ನ ಮಾತ್ರವಲ್ಲ..ಇಡೀ ರಾಷ್ಟ್ರರಾಜಧಾನಿಯೇ  ಆತಂಕಗೊಳ್ಳುವಂತೆ ಮಾಡಿದೆ ಅಂದ್ರೆ ತಪ್ಪಿಲ್ಲ. 
ಆಗಸ್ಟ್​, 30
ಫೋನ್​ ಸ್ವೀಕರಿಸದ ತಾಯಿ-ಮಗಳು!
ಸಂಬಂಧಿಕರು ಮನೆಗೆ ಬಂದಾಗ ಬೆಚ್ಚಿಬಿದ್ದರು!

delhi double murder02

ತಾಯಿ ಕುಸುಮ ಸಿನ್ಹಾ ಮತ್ತು ಮಗಳು ಪ್ರಿಯಾ ಸೆಹಗಲ್

ಈ ಫೋಟೋದಲ್ಲಿ ಕಾಣ್ತಿದ್ದಾರಲ್ಲ, ಇವರಿಬ್ಬರೂ ಅಮ್ಮ-ಮಗಳು.ಮಗಳ ಹೆಸರು ಪ್ರಿಯಾ ಸೆಹಗಲ್  ಅಂತಾದ್ರೆ, ಆಕೆಯ ತಾಯಿಯ ಹೆಸರು  ಕುಸುಮ ಸಿನ್ಹಾ ಅಂತಾ..ಇವ್ರು ರಾಷ್ಟ್ರರಾಜಧಾನಿ ನವದೆಹಲಿಯ ರೋಹಿಣಿ ಸೆಕ್ಟರ್​​ನಲ್ಲಿರೋ ಮನೆಯೊಂದರಲ್ಲಿ ವಾಸವಿದ್ದರು.ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದವರು. ಹೀಗಿದ್ದವರು, ಆಗಸ್ಟ್​ 30ನೇ ತಾರೀಖು ಯಾರ ಕರೆಯನ್ನೂ ಸ್ವೀಕರಿಸೋದಿಲ್ಲ. ಪ್ರಿಯಾ ,  ಆಕೆಯ ತಾಯಿ ಕುಸುಮ್ ಫೋನ್​ಗೆ ಸಂಬಂಧಿಕರು ಎಷ್ಟೇ ಫೋನ್​ ಮಾಡಿದ್ರೂ ಇಬ್ಬರೂ ರಿಯಾಕ್ಟ್​​ ಮಾಡೋದಿಲ್ಲ.ಹೀಗಾಗಿ, ಅನುಮಾನಗೊಂಡ  ಸಂಬಂಧಿಕರು ಮನೆಗೇ ಬರ್ತಾರೆ..ಅವ್ರು ಬರ್ತಿದ್ದಂತೆ ಒಂದು ಬಿಗ್​ ಶಾಕ್​ ಕಾದಿರುತ್ತೆ. ಮನೆ ಬಾಗಿಲು ಹಾಕಿರುತ್ತೆ..ಆ ಬಾಗಿಲಿನ ಮೇಲೆ ರಕ್ತದ ಕಲೆಗಳಿರ್ತಾವೆ . ಇದನ್ನ ನೋಡಿ ಗಾಬರಿಗೊಂಡವರು, ಡೋರ್ ಒಡೆದು ಒಳಗೆ ನುಗ್ತಾರೆ..ಹಾಗೇ ಮನೆಗೆ ನುಗ್ಗಿದವ್ರಿಗೆ ಒಳಹೋಗ್ತಿದ್ದಂತೆ ಕಂಡದ್ದು ಅಕ್ಷರಶಃ ಎದೆ ಝಲ್​ ಎನಿಸುವ ದೃಶ್ಯ..ಮನೆಯ ರೂಮ್​ನೊಳಗೆ ತಾಯಿ ಮಗಳು ಇಬ್ರೂ ರಕ್ತಸಿಕ್ತವಾಗಿ ಬಿದ್ದಿದ್ದರು..ಇಬ್ಬರ ಭೀಕರ ಹತ್ಯೆಯಾಗಿತ್ತು..
ಹೆಂಡ್ತಿ, ಅತ್ತೆ ಜೀವ ಹೋಗಿತ್ತು..ಮನೆ ಯಜಮಾನ ಇರಲಿಲ್ಲ!
ಹೌದು ಪ್ರಿಯಾ ಹಾಗೂ ಕುಸುಮ​ ಇದ್ದ ಮನೆಯಲ್ಲಿ ಇವರಿಬ್ಬರೇ ಏನೂ ಇರಲಿಲ್ಲ..ಪ್ರಿಯಾಳ ಗಂಡ ಯೋಗೇಶ್​ ಸೆಹ್ಗಲ್​ ಕೂಡ ಇದ್ದ, ದಂಪತಿಯ ಇಬ್ಬರು ಮಕ್ಕಳೂ ಕೂಡ ಇದ್ದರು..ಆದ್ರೆ, ಹೆಂಡ್ತಿ ಅತ್ತೆಯ ಜೀವ ಹೋಗಿದ್ದರೂ ಯೋಗೇಶ್​ ಸ್ಥಳದಲ್ಲಿ ಇರಲಿಲ್ಲ. ಬದಲಾಗಿ ಮಕ್ಕಳ ಜೊತೆಗೆ ಕಾಲ್ಕಿತ್ತಿದ್ದ. ಇದನ್ನ ನೋಡಿದ್ದ ಪೊಲೀಸರಿಗೆ ಒಂದಂತೂ ಕನ್ಫರ್ಮ್​ ಆಗಿತ್ತು..ಇಲ್ಲಿ ಈ ಇಬ್ಬರೂ ಹೆಂಗಸರ ಜೀವ ತೆಗೆದವ್ನು ಬೇರಾರೂ ಅಲ್ಲ. ಪ್ರಿಯಾಳ ಗಂಡ  ಯೋಗೇಶೇ ಆಗಿದ್ದ..ಇಬ್ಬರನ್ನೂ ಕೊಂದು ಮಕ್ಕಳ ಜೊತೆಗೆ ಪೇರಿ ಕಿತ್ತಿದ್ದ. .ಅಷ್ಟಕ್ಕೂ ಯೋಗೇಶ್​  ಸೆಹ್ಗಾಲ್​, ಪತ್ನಿ  ಅತ್ತೆ ಇಬ್ಬರನ್ನೂ ಕೊಲ್ಲೋದಕ್ಕೆ ಕಾರಣ ಏನ್​ ಗೊತ್ತಾ? ಒಂದು ಕ್ಷುಲ್ಲಕ ಬರ್ತ್​ಡೇ ಗಿಫ್ಟ್​
ಮಗನ ಹುಟ್ಟುಹಬ್ಬದ ಗಿಫ್ಟ್​ ವಿಚಾರವಾಗಿ ಪತಿ-ಪತ್ನಿ ಗಲಾಟೆ!
ಗಲಾಟೆ ಮಿತಿಮೀರಿ ಹೆಂಡ್ತಿ, ಅತ್ತೆಯ ಕೊಂದ ಯೋಗೇಶ್​
ಇದೇ ಆಗಸ್ಟ್ ​28ನೇ ತಾರೀಖು, ಪ್ರಿಯಾ ಹಾಗೂ ಯೋಗೇಶ್​ ತಮ್ಮ ಮನೆಯಲ್ಲಿ ಮಗನ ಬರ್ತ್​ಡೇ ಅರೇಂಜ್​ ಮಾಡಿದ್ದರು..ಆ ಹುಟ್ಟುಹಬ್ಬಕ್ಕೆ ಪ್ರಿಯಾಳ ಸಂಬಂಧಿಕರು, ಯೋಗೇಶ್​ನ ಸಂಬಂಧಿಕರೂ ಎರಡೂ ಕಡೆಯವರು ಬಂದಿದ್ದರು..ಬರ್ತ್​​ಡೇ ಏನೋ ಚೆನ್ನಾಗಾಗಿತ್ತು..ಆದ್ರೆ, ಸಂಬಂಧಿಕರೆಲ್ಲಾ ಹೋದ ಬಳಿಕ ಗಂಡ ಹೆಂಡ್ತಿ ನಡುವೆ ಮಗನಿಗೆ ಕೊಟ್ಟ ಗಿಫ್ಟ್​ ವಿಚಾರವಾಗಿ ಕಿತ್ತಾಟ  ಶುರುವಾಗಿತ್ತು..ತನ್ನ ಮಗನಿಗೆ ಪತ್ನಿ ಮನೆಯವರು ಕೊಟ್ಟ ಉಡುಗೊರೆಗಳು ಹಾಗೂ ಬರ್ತ್​ಡೇಯಯನ್ನ ಅರೇಂಜ್​ ಮಾಡಿದ್ದ ರೀತಿ ಎರಡರ ಬಗ್ಗೆಯೂ ಯೋಗೇಶ್​ಗೆ ಅಸಮಾಧಾನ ಇತ್ತು..ಇತ್ತ ಪ್ರಿಯಾಗೂ ಕೆಲವು ಗೆಸ್ಟ್​ಗಳು ಕೊಟ್ಟಿದ್ದ  ಉಡುಗೊರೆಗಳು ಇಷ್ಟವಾಗಿರಲಿಲ್ಲ..ಆ ಗಿಫ್ಟ್​​ಗಳನ್ನ ಎಕ್ಸ್​​ಚೇಂಜ್​ ಮಾಡೋದಕ್ಕೆ ಮುಂದಾಗಿದ್ದಳು..ಆದ್ರೆ, ಅದು ಯೋಗೇಶ್​ಗೆ ಇಷ್ಟವಿರಲಿಲ್ಲ..ನವಾ್​ ಉಡುಗೊರೆಗಳನ್ನ ಎಕ್ಸ್​​ಚೇಂಜ್​ ಮಾಡಿದ್ರೆ ಗೆಸ್ಟ್​ಗಳಿಗೆ ಇನ್​​ಸಲ್ಟ್​ ಮಾಡಿದ ಹಾಗಾಗುತ್ತೆ ಅಂತಾ ಯೋಗೇಶ್​ ಪತ್ನಿಗೆ ಹೇಳಿದ್ದ ..ಇನ್ನು, ಪ್ರಿಯಾ  ಸಂಬಂಧಿಕರ ಮುಂದೆಯೇ ಯೋಗೇಶ್​​ನನ್ನ ಕೆಲವು ವಿಚಾರಗಳಲ್ಲಿ ಟೀಕಿಸಿದ್ದಳು..ಇದೆಲ್ಲದರಿಂದ ಸಿಟ್ಟಿಗೆದ್ದ ಯೋಗೇಶ್​ ಪತ್ನಿಯ ಜೊತೆಗೆ ಜಗಳ ತೆಗೆದಿದ್ದ..ಆದ್ರೆ, ಆ ಜಗಳ ಆವತ್ತು ಒಂದೇ ದಿನಕ್ಕೆ ಶಾಂತವಾಗಲಿಲ್ಲ..
ಮಗಳು ಅಳಿಯನ ಜಗಳ ನೋಡಿ ಮನೆಯಲ್ಲೇ ಉಳಿದಿದ್ದ ಅತ್ತೆ!
ಶನಿವಾರ ಪ್ರಿಯಾ & ತಾಯಿಯ ಪಾಲಿಗೆ ಕರಾಳ ಶನಿವಾರ!
ಅದ್ಯಾವಾಗ ಬರ್ತ್​ಡೇ ಗಿಫ್ಟ್​ ವಿಚಾರವಾಗಿ ಪ್ರಿಯಾ ಹಾಗೂ ಯೋಗೇಶ್​ ನಡುವೆ ಶುರುವಾದ ಜಗಳ ನಿಲ್ಲಲಿಲ್ವೋ, ಪ್ರಿಯಾ ತಾಯಿ ಕುಸುಮ್​ ಇಬ್ಬರ ಜಗಳ ಸರಿಪಡಿಸೋವರೆಗೂ ಇಲ್ಲೇ ಇರೋಣ ಅಂತಾ ಡಿಸೈಡ್​ ಮಾಡಿ ಉಳ್ಕೊಂಡಿದ್ರು..ಆಗಸ್ಟ್​ 30ನೇ ತಾರೀಖು ಯೋಗೇಶ್​  ಹಾಗೂ ಪ್ರಿಯಾಗೆ ಮತ್ತೆ ಗಿಫ್ಟ್​ ವಿಚಾರವಾಗಿ ಜಗಳ ಶುರುವಾಗಿದೆ..ಇಬ್ಬರೂ ಏರುಧ್ವನಿಯಲ್ಲಿ ಕಾದಾಡಿದ್ದಾರೆ..ಈ ವೇಳೆ ಪ್ರಿಯಾಳ ತಾಯಿ ಕುಸುಮ್ ಕೂಡ ಅಳಿಯನನ್ನೇ ಬಯ್ಯೋದಕ್ಕೆ ಶುರುಮಾಡಿದ್ದಾರೆ..ಈ ಟೈಮಲ್ಲಿ ಯೋಗೇಶ್​ ಅಕ್ಷರಶಃ ರಾಕ್ಷಸನ ರೂಪ ತಾಳಿದ್ದಾನೆ..ಮನೆಯ ಡ್ರಾಯರ್​ನಲ್ಲಿದ್ದ ಎರಡು ಕತ್ತರಿಗಳಿಂದ ಮೊದಲು ತನ್ನ ಪತ್ನಿ ಪ್ರಿಯಾಗೆ ಮನಬಂದಂತೆ ಚುಚ್ಚಿದ್ದಾನೆ..ಪತ್ನಿಯ ಕುತ್ತಿಗೆ, ಎದೆ, ಹೊಟ್ಟೆ ಭಾಗಗಳಿಗೆ ಮನಬಂದಂತೆ ಇರಿದು ಆಕೆಯನ್ನ  ಕೊಂದು ಹಾಕಿದ್ದಾನೆ..ಬಳಿಕ ಮಗಳನ್ನ ಅಳಿಯನಿಂದ ಬಿಡಿಸೋದಕ್ಕೆ ಅಂತಾ ಅತ್ತೆ ಕುಸುಮ್​ಗೂ ಕತ್ತರಿಯಿಂದ ಚುಚ್ಚಿ ಚುಚ್ಚಿ ಆಕೆಯನ್ನೂ ಹತ್ಯೆ ಮಾಡಿದ್ದಾನೆ..ಪತ್ನಿ ಅತ್ತೆ ಇಬ್ಬರೂ ಜೀವಬಿಡ್ತಿದ್ದಂತೆ ಯೋಗೇಶ್​ಗೆ ಭಯ ಶುರುವಾಗಿತ್ತು..ಹೆದರಿ, ಅಲ್ಲಿಂದ ಮಕ್ಕಳ ಜೊತೆಗೆ ಹೊರಗಿನಿಂದ ಬೀಗ ಹಾಕೊಂಡು ಪರಾರಿಯಾಗಿದ್ದ..  
ಬೆಳಗ್ಗೆ ಬರ್ತೀನಿ ನೀವೆಲ್ಲಾ ಹೋಗಿ ಅಂತಾ ನಮ್ಮಮ್ಮ ಇಲ್ಲೆ ಉಳ್ಕೊಂಡಿದ್ಲು. ಬೆಳಗ್ಗೆ ನಾವು ನಮ್ಮಮ್ಮನಿಗೆ ಫೋನ್ ಮಾಡಿದ್ರೆ, ರಿಸೀವ್ ಮಾಡಿಲ್ಲ. ನಮ್ಮ ತಂಗಿಗೂ ಮಾಡಿದ್ವಿ ಅವಳು ರಿಸೀವ್ ಮಾಡಲ್ಲಿಲ್ಲ. ಎಲ್ಲರಿಗೂ ಮಾಡಿದ್ವಿ ಯಾರೂ ಫೋನ್ ರಿಸೀವ್ ಮಾಡಿಲ್ಲ. ನಮ್ಮ ಅಣ್ಣಹೋಗಿ ನೋಡ್ಕೊಂಡು ಬಾ ಅಂತ ಕಳಿಸಿದ.. ಬಂದು ನೋಡಿದ್ರೆ ಡೋರ್ ಲಾಕ್ ಆಗಿತ್ತು. ಕೆಳಗೆ ನೋಡಿದ್ರೆ ರಕ್ತದ ಕಲೆಗಳು ಇದ್ವು. ಆಗ ಏನೋ ಆಗಿದೆ ಅಂತ ನನಗೆ ಅನಿಸ್ತು. ಕೊನೆಗೆ ಬೀಗ ಒಡೆದು ಪೊಲೀಸರಿಗೆ ಕಾಲ್ ಮಾಡಿ ತಿಳಿಸಿದ್ವಿ. ಚಾಕುವಿನಿಂದ ನಮ್ಮ ತಂಗಿ ಮತ್ತು ತಾಯಿಯನ್ನ  ಕೊಂದು ಹಾಕಿದ್ದ. 
-ಮೃತ ಪ್ರಿಯಾ ಅಣ್ಣ
ಯೋಗೇಶ್​ ಹಾಗೂ ಪ್ರಿಯಾ ನಡುವೆ ದಾಂಪತ್ಯ ಕಲಹ ಅನ್ನೋದು ನಿನ್ನೆ ಮೊನ್ನೆಯದ್ದಾಗಿರಲಿಲ್ಲ..ಮದುವೆ ಶುರುವಾದಾಗಿನಿಂದಲೂ ಇಬ್ಬರ ಮಧ್ಯೆ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ನಡೀತಾನೆ ಇತ್ತು..ಹಣದ ವಿಚಾರವಾಗಿ, ಜವಾಬ್ದಾರಿಗಳ ವಿಚಾರವಾಗಿ, ಮನೆಕೆಲಸದ ವಿಚಾರವಾಗಿ ಇಬ್ಬರ ಮಧ್ಯೆ ವಿರಸ ಸಾಗುತ್ತಲೇ ಬಂದಿತ್ತು..ಪ್ರತೀ ಬಾರಿ ಜಗಳವಾದಾಗಲೂ ಪ್ರಿಯಾಳ ತಾಯಿ ಕುಸುಮ್ ಮಗಳ ಪರವೇ ನಿಲ್ಲುತ್ತಿದ್ರು..ಇದು ಕೂಡ ಯೋಗೇಶ್ ಇನ್ನಷ್ಟು ಸಿಟ್ಟಿಗೇಳುವಂತೆ ಮಾಡಿತ್ತು.. 
ನಮ್ಮ ಮಾವ, ನಮ್ಮ ತಂಗಿ ಮತ್ತು ತಾಯಿಯನ್ನ ಕೊಂದು ಹಾಕಿದ್ದಾನೆ. ಅವನ್ನ ಹಿಡೀಬೇಕು.. ಸಜೆ ಕೊಡ್ಬೇಕು..ಎರಡು ಮಕ್ಕಳನ್ನ ಕರ್ಕೊಂಡು ಹೋಗಿದ್ದಾನೆ..ಒಬ್ಬನಿಗೆ 15 ವರ್ಷ... ಇನ್ನೊಬ್ಬನಿಗೆ 16 ವರ್ಷ..ಜ್ಯುವೆಲರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ.. ಮೊದಲಿನಿಂದಲೂ ಅವನು ಕೆಟ್ಟ ವ್ಯಕ್ತಿ.. ನಾವು ಇವನನ್ನ ತುಂಬಾ ಕ್ಷಮಿಸಿದ್ದೇವೆ. ನಮ್ಮಮನೆ ಕೂಡ ಕಬಳಿಸೋಕೆ ನೋಡಿದ್ದ. ಮೂರು ತಿಂಗಳ ಹಿಂದೆ ನಮ್ಮ ತಂಗಿ ನಮ್ಮ ಮನೆಗೆ ಬಂದಿದ್ಲು. ಆಗ್ಲೂ ನಾವು ವಾಪಸ್ ಕಳಿಸಿದ್ವಿ. ಒಬ್ಬ ಹುಡುಗನ ಬರ್ತ್​ಡೇ ಇತ್ತು. ಪಾರ್ಟಿ ಎಲ್ಲಾ ಮಾಡಿದ್ದರು. ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಕೊನೆಗೆ ನಾವೆಲ್ಲ ವಾಪಸ್ ಬಂದಿದ್ವಿ. ನಮ್ಮ ಅಮ್ಮ ಇಲ್ಲೇ ಇದ್ದಳು.
--ಮೃತ ಪ್ರಿಯಾ ಅಣ್ಣ 

delhi double murder

ಸದ್ಯ ಪತ್ನಿ, ಅತ್ತೆ ಇಬ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ ಯೋಗೇಶ್​​ನನ್ನ ಪೊಲೀಸರು ಬಂಧಿಸಿದ್ದಾರೆ..ಹಿಂದಿನಿಂದಲೂ ಪತ್ನಿ ಹಾಗೂ ಆಕೆಯ ಮನೆಯವರಿಂದ ತಾನು ತುಂಬಾನೇ ನೊಂದು ಹೋಗಿದ್ದೆ ಅಂತಾ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ಕೊಲ್ಲುವ ಉದ್ದೇಶ ಇರಲಿಲ್ಲ, ಆದರೂ ಸಿಟ್ಟಲ್ಲಿ ಡಬಲ್ ಮರ್ಡರ್ ಆಗೋಯ್ತು ಎಂದಿದ್ದಾನೆ. ಏನೇ ಆಗ್ಲಿ, ಕೊಲೆ ಕೊಲೇನೇ ಅಲ್ವಾ? ಅದ್ರಲ್ಲೂ ಡಬಲ್ ಮರ್ಡರ್ ಅಂದ್ರೆ, ಯೋಗೇಶ್​ ಜೀವನ ಪೂರ್ತಿ ಜೈಲಲ್ಲೇ ಕೊಳೆಯಬೇಕಾಗುತ್ತೋ ಏನೋ. 

delhi double murder03

ಆರೋಪಿ ಯೋಗೇಶ್ ಸೆಹಗಲ್ ಮತ್ತು ಅತ್ತೆ ಕುಸುಮ ಸಿನ್ಹಾ  ಹಾಗೂ ಹೆಂಡತಿ ಪ್ರಿಯಾ ಸೆಹಗಲ್.


ತಂದೆಯ ಒಂದು ನಿಮಿಷದ ಕೋಪಕ್ಕೆ ತಾಯಿಯನ್ನು ಮಕ್ಕಳು ಕಳೆದುಕೊಂಡಿವೆ. ಜೊತೆಗೆ ತಂದೆಯೂ ಈಗ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿದ್ದಾರೆ. ಇದರಿಂದಾಗಿ ಪ್ರಿಯಾ ಸೆಹಗಲ್ ಮತ್ತು ಯೋಗೇಶ್ ಸೆಹಗಲ್ ಮಕ್ಕಳು ಮಾತ್ರ ಅಕ್ಷರಶಃ ಅನಾಥರಾಗಿವೆ. ಸಂಬಂಧಿಗಳ ಆರೈಕೆಯಲ್ಲಿ ಬೆಳೆದರೂ, ತಂದೆ, ತಾಯಿಯ ಪ್ರೀತಿ ಸಿಗಲ್ಲ. ತಾಯಿ ವಾತ್ಸಲ್ಯದಿಂದ ಮಕ್ಕಳು ವಂಚಿತರಾಗುತ್ತಾವೆ. ಬರ್ತ್ ಡೇ ಗಿಫ್ಟ್ ಏನೂ ದೊಡ್ಡ ವಿಷಯವೂ ಅಲ್ಲ. ಆ ವಿಷಯಕ್ಕಾಗಿ ಇಬ್ಬರ ಜೀವ ತೆಗೆಯುವ ಕಠೋರ ನಿರ್ಧಾರವನ್ನು ಯೋಗೇಶ್ ಸೆಹಗಲ್ ತೆಗೆದುಕೊಳ್ಳಬಾರದಿತ್ತು. ತಾನೇ ದುಡಿದು ದೊಡ್ಡ ಗಿಫ್ಟ್ ಗಳನ್ನು ಮಕ್ಕಳಿಗೆ ಕೊಡಿಸಬಹುದಿತ್ತು. ಕ್ಷುಲಕ ವಿಷಯಗಳನ್ನೇ ಗಂಭೀರವಾಗಿ ಪರಿಗಣಿಸಿ, ದುಡುಕಿದರೇ, ಎಂಥ ಅನಾಹುತ ಸಂಭವಿಸುತ್ತೆ ಅನ್ನೋದಕ್ಕೆ ದೆಹಲಿಯ ರೋಹಿಣಿ ಏರಿಯಾದ ಯೋಗೇಶ್ ಸೆಹಗಲ್ ಪ್ರಕರಣ ಒಂದು ಉದಾಹರಣೆ. ಯಾರೇ ಅಗಲಿ, ನಿಮ್ಮಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಿ. ಕೋಪದ ಕೈಗೆ ಬುದ್ದಿ ಕೊಡಬೇಡಿ. ತಾಳ್ಮೆಯಿಂದ ಯೋಚಿಸಿ. ಎಲ್ಲ ಸಮಸ್ಯೆಗೆ ಸೂಕ್ತ ಪರಿಹಾರ ಇದ್ದೇ ಇರುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  
Delhi double murder case
Advertisment