ಜಿಎಸ್‌ಟಿ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾಯಿಸಿದ ಹುಂಡೈ ಕಂಪನಿ, 60 ಸಾವಿರದಿಂದ 2.4 ಲಕ್ಷ ರೂಪಾಯಿವರೆಗೆ ಹುಂಡೈ ಕಾರ್ ಗಳ ಬೆಲೆಯೂ ಇಳಿಕೆ

ಟಾಟಾ, ಮಹೀಂದ್ರಾ ಬಳಿಕ ಹುಂಡೈ ಕಂಪನಿಯು ತನ್ನ ಎಲ್ಲ ಪ್ರಯಾಣಿಕರ ಕಾರ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. 60 ಸಾವಿರ ರೂಪಾಯಿಯಿಂದ 2.4 ಲಕ್ಷ ರೂಪಾಯಿವರೆಗೂ ಕಾರ್ ಬೆಲೆ ಇಳಿಕೆ ಮಾಡಿದೆ. ಗ್ರಾಹಕರಿಗೆ ಭರ್ಜರಿ ಲಾಭ.

author-image
Chandramohan
hyundai cars02

ಹುಂಡೈ ಕಂಪನಿಯಿಂದ ಕಾರ್ ಬೆಲೆ ಇಳಿಕೆ

Advertisment
  • ಹುಂಡೈ ಕಂಪನಿಯಿಂದ ಕಾರ್ ಬೆಲೆ ಭರ್ಜರಿ ಇಳಿಕೆ
  • 60 ಸಾವಿರ ರೂಪಾಯಿಯಿಂದ 2.4 ಲಕ್ಷ ರೂಪಾಯಿವರೆಗೂ ಬೆಲೆ ಇಳಿಕೆ
  • ಸೆಪ್ಟೆಂಬರ್ 22 ರಿಂದ ಕಾರ್ ಬೆಲೆ ಇಳಿಕೆ ಜಾರಿ ಎಂದ ಹುಂಡೈ ಕಂಪನಿ

ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಯ ಬಳಿಕ ಹುಂಡೈ ಕಂಪನಿಯು ಕಾರ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಜಿಎಸ್‌ಟಿ ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಹುಂಡೈ ಇಂಡಿಯಾ ಕಂಪನಿಯು ಕೂಡ ಈಗ ಕ್ರಮ ಕೈಗೊಂಡಿದೆ.  ಹುಂಡೈ ಕಂಪನಿಯು  ತನ್ನ  ಎಲ್ಲ ಪ್ರಯಾಣಿಕರ ಕಾರ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಸೆಪ್ಟೆಂಬರ್ 22 ರಿಂದ ಹೊಸ ದರಗಳು ಜಾರಿಯಾಗುತ್ತಾವೆ ಎಂದು ಹುಂಡೈ ಕಂಪನಿಯು ಹೇಳಿದೆ. ದೇಶದಲ್ಲಿ ಒಳ್ಳೆಯ ಸ್ಟಾಂಡರ್ಡ್ ಮತ್ತು ಸ್ಟೇಟಸ್ ಗೆ ಹೆಸರಾದ ಕಾರ್ ಕಂಪನಿ ಅಂದರೇ, ಹುಂಡೈ ಕಂಪನಿ.  ಹುಂಡೈ ಕಂಪನಿಯ ಕಾರ್ ಹೊಂದಿದ್ದಾರೆ  ಅಂದರೇ,  ಸಮಾಜದಲ್ಲಿ   ಎತ್ತರದ ಸ್ಟೇಟಸ್ ಹೊಂದಿದ್ದಾರೆ ಎಂಬ ಮಾತಿದೆ. ಹುಂಡೈ ಕಂಪನಿಯ ಕಾರ್ ಗಳು ಒಳ್ಳೆಯ ಕ್ವಾಲಿಟಿಯನ್ನು ಹೊಂದಿವೆ. ಸೇಫ್ಟಿ, ಮೈಲೇಜ್, ಸ್ಟಾಂಡರ್ಡ್, ಸ್ಟೇಟಸ್ ಬಯಸುವ ಜನರ ಮೊದಲ ಆಯ್ಕೆಯೇ ಹುಂಡೈ ಕಂಪನಿಯ ಕಾರ್ ಗಳು. ಈಗ ಹುಂಡೈ ಕಂಪನಿಯು ಸೆಪ್ಟೆಂಬರ್ 2 ರಂದು ಜಿಎಸ್‌ಟಿ ಕೌನ್ಸಿಲ್ ತೆಗೆದುಕೊಂಡ ತೀರ್ಮಾನದಂತೆ, ಕಾರ್ ಗಳ ಮೇಲಿನ ಜಿಎಸ್‌ಟಿಯನ್ನು ಶೇ.28  ರಿಂದ ಶೇ.18 ಕ್ಕೆ ಇಳಿಸಲಾಗಿದೆ.  
ಹುಂಡೈ ಕಂಪನಿಯು 60 ಸಾವಿರ ರೂಪಾಯಿಯಿಂದ 2.4 ಲಕ್ಷ ರೂಪಾಯಿವರೆಗೂ ತನ್ನ ಕಾರ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಈ ಮೂಲಕ ಜಿಎಸ್‌ಟಿ  ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದೆ.    
ಹುಂಡೈ ಕಂಪನಿಯು ಯಾವ್ಯಾವ ಮಾಡೆಲ್ ಕಾರ್ ಗಳಿಗೆ ಎಷ್ಟೆಷ್ಟು ಬೆಲೆ ಕಡಿಮೆ ಮಾಡಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.

NIOS--73,808 ರೂ.
GRAND i10 Nios-73,808 ರೂ.

AURA-78,465 ರೂ.
EXTER-89,209 ರೂ.
i20-98,053 ರೂ.
I20 N line--1,08,116 ರೂ.


VENUE--1,23,659 ರೂ.
VENUE N LINE--1,19,390 ರೂ.
VERNA--60,640 ರೂ.
CRETA--72,145 ರೂ.
CRETA N LINE- 71,762 ರೂ.


ALCAZAR--75,376 ರೂ.
TUCSON--2,40,303 ರೂ. 

ಇನ್ನೂ ಹುಂಡೈ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಉನಸೋ ಕಿಮ್ ಪ್ರತಿಕ್ರಿಯಿಸಿದ್ದು. ನಾವು ಪ್ರಾಮಾಣಿಕವಾಗಿ ಭಾರತ ಸರ್ಕಾರದ ಪ್ರಗತಿಪರ ಹಾಗೂ ದೂರದೃಷ್ಟಿಯ ಕ್ರಮವನ್ನು ಅಭಿನಂದಿಸುತ್ತೇವೆ. ಈ ಸುಧಾರಣೆಯು ಆಟೋಮೋಟೀವ್ ಇಂಡಸ್ಟ್ರಿಗೆ ಮಾತ್ರ ಪುಷ್ಟಿ ನೀಡುವುದಲ್ಲದೇ, ಮಿಲಿಯನ್ ಗಟ್ಟಲೇ ಪ್ರಯಾಣಿಕರನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯಾಗಿದೆ. ವೈಯಕ್ತಿಕ ವಾಹನವನ್ನು ಹೆಚ್ಚು ಅಗ್ಗವಾಗಿಸಿದ್ದು, ಎಲ್ಲರಿಗೂ ಲಭ್ಯವಾಗುವ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ ಎಂದು ಉನಸೋ ಕಿಮ್ ಹೇಳಿದ್ದಾರೆ. 

hyundai cars

ಹುಂಡೈ ಕಂಪನಿಯ ವಿವಿಧ ಮಾಡೆಲ್ ಕಾರ್ ಗಳು

ಭಾರತವು ವಿಕಸಿತ ಭಾರತದ ಹಾದಿಯಲ್ಲಿ ಹೆಜ್ಜೆ ಹಾಕಿದ್ದು, ಹುಂಡೈ ಕಂಪನಿಯು ಕೂಡ ದೇಶದ ಬೆಳವಣಿಗೆಯ ಆಕಾಂಕ್ಷೆಗೆ ಬದ್ದವಾಗಿದೆ. ಇದಕ್ಕಾಗಿ ನಮ್ಮ ಕಾರ್ ಮತ್ತು ಎಸ್‌ಯುವಿ ಗಳು ಮೌಲ್ಯ , ಸಂಶೋಧನೆ ಮತ್ತು ಡ್ರೈವಿಂಗ್ ಸಂತೋಷವನ್ನು ಗ್ರಾಹಕರಿಗೆ ನೀಡುತ್ತಾವೆ ಎಂದು ಹುಂಡೈ ಕಂಪನಿಯ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಉನಸೋ ಕಿಮ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hyundai cars price reduced
Advertisment