Advertisment

"ನಾನು ನಿನಗಾಗಿ ನನ್ನ ಪತ್ನಿ ಕೊಂದೆ" : ಲವ್ವರ್‌ಗೆ ಮಹೇಂದ್ರ ರೆಡ್ಡಿ ಕಳಿಸಿದ ಮೇಸೇಜ್‌

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಡೆರ್ಮಾಟಾಲಜಿಸ್ಟ್ ವೈದ್ಯೆ , ಪತ್ನಿ ಕೃತಿಕಾ ರೆಡ್ಡಿ ಹತ್ಯೆಯ ಬಳಿಕ ಮಹೇಂದ್ರ ರೆಡ್ಡಿ ತನ್ನ ಲವ್ವರ್‌ಗೆ ಮೇಸೇಜ್‌ ಕಳಿಸಿದ್ದಾನೆ. ಈತನ ಮೊಬೈಲ್ ನಂಬರ್ ಅನ್ನೇ ಲವ್ವರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಪೋನ್ ಪೇ ಆಪ್ಲಿಕೇಶನ್ ಮೂಲಕ ಮೇಸೇಜ್‌ ಮಾಡಿರುವುದು ಬೆಳಕಿಗೆ ಬಂದಿದೆ.

author-image
Chandramohan
Kruthika case

ಪತ್ನಿಯ ಹತ್ಯೆ ಬಳಿಕ ಲವ್ವರ್‌ಗೆ ಮಹೇಂದ್ರ ರೆಡ್ಡಿ ಮೇಸೇಜ್‌!

Advertisment
  • ಪತ್ನಿಯ ಹತ್ಯೆ ಬಳಿಕ ಲವ್ವರ್‌ಗೆ ಮಹೇಂದ್ರ ರೆಡ್ಡಿ ಮೇಸೇಜ್‌!
  • ಪೋನ್ ಪೇ ಆ್ಯಪ್ ನಲ್ಲಿ ಮೇಸೇಜ್ ಮಾಡಿರೋದು ಬೆಳಕಿಗೆ
  • ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದರಿಂದ ಪೋನ್ ಪೇ ಬಳಸಿ ಮೇಸೇಜ್‌
  • "ನಿನಗಾಗಿ ನಾನು ನನ್ನ ಪತ್ನಿ ಕೊಂದೆ" ಎಂದು ಮೇಸೇಜ್ ಮಾಡಿದ್ದ ಮಹೇಂದ್ರ ರೆಡ್ಡಿ

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಡೆರ್ಮಾಟಾಲಜಿಸ್ಟ್ ಡಾ.ಕೃತಿಕಾ ರೆಡ್ಡಿ ಹತ್ಯೆಗೈದ ಸರ್ಜನ್‌ ಡಾ.ಮಹೇಂದ್ರ ರೆಡ್ಡಿಯ ಮೊಬೈಲ್ ಪೋನ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದ ಬಳಿಕ ತನ್ನ ಲವ್ವರ್ ಗೆ ಮಹೇಂದ್ರ ರೆಡ್ಡಿ , ಪೋನ್ ಪೇನಲ್ಲಿ ಮೇಸೇಜ್ ಮಾಡಿದ್ದು ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಮುಂಬೈನಲ್ಲಿದ್ದ ತನ್ನ ಲವ್ವರ್‌ಗೆ ನಾನು ನಿನಗಾಗಿ ನನ್ನ ಪತ್ನಿಯನ್ನು ಕೊಂದಿದ್ದೇನೆ(  I Killed my wife for you)  ಎಂದು ಮೇಸೇಜ್ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 
 ಮಹೇಂದ್ರ ರೆಡ್ಡಿ ಓರ್ವ ಮಹಿಳೆಯ  ಜೊತೆ ರಿಲೇಷನ್ ಷಿಪ್ ನಲ್ಲಿ ಇದ್ದಿದ್ದು ಬೆಳಕಿಗೆ ಬಂದಿದೆ.  ಆಕೆಗೆ ಮೊದಲು ಮೊಬೈಲ್ ನಲ್ಲಿ ಮೇಸೇಜ್ ಮಾಡಿದ್ದಾನೆ. ಆದರೇ, ಆಕೆ ಈತನ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಆಗ ಮಹೇಂದ್ರ ರೆಡ್ಡಿ ಡಿಜಿಟಲ್ ಪೇಮೇಂಟ್ ಆಪ್ಲಿಕೇಶನ್ , ಪೋನ್ ಪೇ ಮೂಲಕ ಮೇಸೇಜ್ ಮಾಡಿದ್ದು ಬೆಳಕಿಗೆ ಬಂದಿದೆ.  
ಮಹೇಂದ್ರ ರೆಡ್ಡಿಯ ಪೋನ್ ಅನ್ನು ಪೋರೆನ್ಸಿಕ್ ವಿಶ್ಲೇಷಣೆ ನಡೆಸಿದಾಗ, ಪೋನ್ ಪೇ ಮೂಲಕ ತನ್ನ ಲವ್ವರ್ ಗೆ ಮೇಸೇಜ್ ಕಳಿಸಿರುವುದು ಬೆಳಕಿಗೆ ಬಂದಿದೆ. 
ಮಹೇಂದ್ರ ರೆಡ್ಡಿಯ ಲವ್ವರ್ ನನ್ನು ಕೂಡ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿ. ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೇ, ಮಹೇಂದ್ರ ರೆಡ್ಡಿ ಲವ್ವರ್ ಗುರುತು ಅನ್ನು ಬಹಿರಂಗಪಡಿಸಿಲ್ಲ. 

Advertisment

kruthika reddy



ತನ್ನ ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದ 6 ತಿಂಗಳ ಬಳಿಕ ಮಹೇಂದ್ರ ರೆಡ್ಡಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.  ಏಪ್ರಿಲ್ 21 ರಂದೇ ಮಹೇಂದ್ರ ರೆಡ್ಡಿಯು ತನ್ನ ಪತ್ನಿ ಕೃತಿಕಾ ರೆಡ್ಡಿಯನ್ನು ಹತ್ಯೆಗೈದಿದ್ದ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dr Kruthika M Reddy
Advertisment
Advertisment
Advertisment