/newsfirstlive-kannada/media/media_files/2025/09/30/bangalore-roads-2025-09-30-15-16-53.jpg)
ಬೆಂಗಳೂರು ರೋಡ್‌ಗಳಲ್ಲಿ ಕಾರ್ ಕಂಜೆಷನ್ ಟ್ಯಾಕ್ಸ್ ಜಾರಿಗೆ ಪ್ಲ್ಯಾನ್!
ಕಾರ್ ಮಾಲೀಕರೇ ಎಚ್ಚರ... ಎಚ್ಚರ...! ಇನ್ಮುಂದೆ ಬೆಂಗಳೂರಲ್ಲಿ ಒಬ್ಬೊಬ್ಬರೇ ಕಾರಲ್ಲಿ ಓಡಾಡೋ ಆಗಿರಲ್ಲ.. ಅಪ್ಪಿ ತಪ್ಪಿ ಓಡಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ... ಅರೇ, ಏನಿದು ಹೊಸ ರೂಲ್ಸ್ ತಿಳ್ಕೋಬೇಕು ಅನ್ನೋ ಕುತೂಹಲ ಇದೆಯೇ. ನಿಮ್ಮ ಕುತೂಹಲವನ್ನು ನಾವು ತಣಿಸುತ್ತೇವೆ.
ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ರೂಲ್ಸ್... ಕಾರು ಮಾಲೀಕರು ನೋಡಬೇಕಾದ ಸ್ಟೋರಿ.!
ಪ್ರಯೋಗ ಸಕ್ಸಸ್ ಆದ್ರೆ ಇಡೀ ನಗರಕ್ಕೂ ರೂಲ್ಸ್ ಅನ್ವಯ.!
ಕಾರಿನಲ್ಲಿ ಒಬ್ಬೊಬ್ಬರೇ ಹೋಗ್ಬಾರದಂತೆ... ಹೋದ್ರೆ ಟ್ಯಾಕ್ಸ್ ಕಟ್ಟಬೇಕಂತೆ.!
ಒಂದ್ಕಡೆ ಕಿತ್ತೋಗಿರೋ ರಸ್ತೆ ಗುಂಡಿಗಳು. ಒತ್ತುವರಿ ಆಗಿರೋ ಪುಟ್ ಪಾತ್ ಗಳು, ಜೊತೆಗೆ ಟ್ರಾಫಿಕ್ ಸಮಸ್ಯೆ..ಈ ಎಲ್ಲಾ ವಿಚಾರಗಳಿಂದ ಬೆಂಗಳೂರಿನ ಜನ ಬೇಸತ್ತಿದ್ದಾರೆ.. ಈ ನಡುವೆ ಬೆಂಗಳೂರು ಟ್ರಾಫಿಕ್ನ ಕಂಟ್ರೋಲ್ ಮಾಡೋಕೆ ಸರ್ಕಾರದ ಮಟ್ಟದಲ್ಲಿ ಹೊಸ ಫಾರ್ಮೂಲ ಕಂಡುಕೊಳ್ಳುವ ಪ್ರಯತ್ನ ಆಗ್ತಿದೆ ಎನ್ನಲಾಗಿದೆ. ಅದುವೇ ಕಾರ್ ಕಂಜೆಶನ್ ಟ್ಯಾಕ್ಸ್.
ಹೌದು, ನಗರದಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಕಾರ್ ಗಳಿವೆ.. ಒಂದೊಂದು ಮನೆಯಲ್ಲಿ ಎರಡು, ಮೂರು ಕಾರುಗಳಿರುವ ಉದಾಹರಣೆ ಇದೆ.. ಅವರೆಲ್ಲಾ ಒಬ್ಬೊಬ್ಬರೇ ಓಡಾಡೋಕೆ ಕಾರ್ ಬಳಸ್ತಾರೆ. ಇದರಿಂದ ರಸ್ತೆಯಲ್ಲಿ ಹೆಚ್ಚು ಸ್ಪೇಸ್ ಆವರಿಸುತ್ತೆ. ಜೊತೆಗೆ ವಾಹನ ದಟ್ಟಣೆಗೂ ಕಾರಣ ಆಗ್ತಿದೆ. ಹಾಗಾಗಿ, ಒಬ್ಬೊಬ್ಬರೇ ಕಾರಿನಲ್ಲಿ ಓಡಾಡುವುದಕ್ಕೆ ಬ್ರೇಕ್ ಹಾಕಬೇಕು ಎನ್ನುವ ಚಿಂತನೆ ನಡೆಯುತ್ತಿದೆ. ಒಂದು ವೇಳೆ ಒಬ್ಬರೇ ಕಾರಿನಲ್ಲಿ ಪ್ರಯಾಣ ಮಾಡಿದ್ರೆ ಅದಕ್ಕೆ ಕಾರ್ ಕಂಜೆಶನ್ ಅಥವಾ ದಟ್ಟಣೆ ತೆರಿಗೆ ಪಾವತಿಸಬೇಕು ಎನ್ನುವ ರೂಲ್ಸ್ ಜಾರಿ ಮಾಡುವ ಲೆಕ್ಕಾಚಾರದಲ್ಲಿದೆ.
ಸದ್ಯಕ್ಕೆ ಇದನ್ನ ಔಟರ್ ರಿಂಗ್ ರೋಡ್ ನಲ್ಲಿ ಮಾತ್ರ ಇಂಪ್ಲಿಮೆಂಟ್ ಮಾಡಲು ಚಿಂತಿಸಲಾಗ್ತಿದೆ. ಒಂದು ವೇಳೆ ಅಲ್ಲಿ ಸಕ್ಸಸ್ ಆಯ್ತು ಅಂದ್ರೆ ಹಂತ ಹಂತವಾಗಿ ಬೇರೆ ಬೇರೆ ಕಡೆಯೂ ಅನ್ವಯಿಸುವ ಪ್ಲಾನ್ ಸರ್ಕಾರದ್ದು. ಆದರೆ, ಇದಕ್ಕೆ ಜನಸಾಮಾನ್ಯರ ವಿರೋಧ ವ್ಯಕ್ತವಾಗ್ತಿದೆ. ಮೊದಲು ಒಳ್ಳೆಯ ರಸ್ತೆಗಳನ್ನ ಕೊಡಲಿ, ಗುಂಡಿಗಳನ್ನ ಮುಚ್ಚಲಿ, ಬಸ್, ಮೆಟ್ರೋ ಕನೆಕ್ಟವಿಟಿ ಕೊಡಲಿ, ಆಮೇಲೆ ಇದೆಲ್ಲಾ ಮಾಡಲಿ ಅಂತಿದ್ದಾರೆ ನಗರದ ಜನ.
ಅಂದ್ಹಾಗೆ, ಕಾರ್ ಕಂಜೆಶನ್ ಟ್ಯಾಕ್ಸ್ ಫಾರ್ಮೂಲವನ್ನ ಕೆಲವು ದೇಶಗಳಲ್ಲಿ ಬಳಕೆ ಮಾಡಿರುವ ಉದಾಹರಣೆ ಇದೆ. ದೆಹಲಿ, ಮುಂಬೈನಲ್ಲಿ ಇಂಪ್ಲಿಮೆಂಟ್ ಮಾಡಿ ಫೆಲ್ಯೂರ್ ಆಗಿದ್ದು ಇದೆ. ಈಗ ಬೆಂಗಳೂರಿನಲ್ಲಿ ಇದನ್ನ ಪ್ರಯೋಗ ಮಾಡುವ ಸಿದ್ಧತೆ ಆಗ್ತಿದೆ...
ಎನಿ ವೇ, ಕಾರು ಬಿಡಿ, ಸಾರ್ವಜನಿಕ ವಾಹನ ಬಳಸಿ ಎನ್ನುವ ಸರ್ಕಾರ, ಅವಶ್ಯಕತೆ ಇರುವ ಕಡೆ ಸೂಕ್ತ ಬಸ್ ಹಾಗೂ ಮೆಟ್ರೋ ಸಂಪರ್ಕ ಕೊಡಬೇಕು.. ಉತ್ತಮ ರಸ್ತೆಗಳನ್ನ ಹಾಕಬೇಕು, ಮೆಟ್ರೋ ಕಾಮಗಾರಿ ಬೇಗ ಮುಗಿಸಬೇಕು ಅನ್ನೋದು ಸದ್ಯದ ಒತ್ತಾಯ.
ಭರತ್ ಕೃಷ್ಣಪ್ಪ
ನ್ಯೂಸ್ ಫಸ್ಟ್
ಬೆಂಗಳೂರು