ವಿವಾಹಿತ ಮಹಿಳೆಗೆ ಅನೈತಿಕ ಸಂಬಂಧ: ಬೆಂಗಳೂರಿನಲ್ಲಿ ಲಾಡ್ಜ್ ಗೆ ಹೋದ ಮಹಿಳೆ ಅಲ್ಲೇ ಸಾವು!! ಹೇಗಾಯ್ತು?

ವಿವಾಹಿತ ಮಹಿಳೆ ಯಶೋಧ, ಅಡಿಟರ್ ವಿಶ್ವನಾಥ್ ಜೊತೆ 8 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು. ವಿಶ್ವನಾಥ್‌ಗೆ ತನ್ನ ಸ್ನೇಹಿತೆಯನ್ನು ಪರಿಚಯ ಮಾಡಿಕೊಟ್ಟಿದ್ದರು. ಆ ಸ್ನೇಹಿತೆಯ ಜೊತೆ ವಿಶ್ವನಾಥ್ ಓಯೋ ಲಾಡ್ಜ್ ಗೆ ಹೋಗಿದ್ದ. ಅಲ್ಲಿಗೆ ಹೋದ ಯಶೋಧ, ವಿಶ್ವನಾಥ್ ಜೊತೆ ಜಗಳವಾಡಿದ್ದಾರೆ. ಅಲ್ಲೇ ಯಶೋಧ ಶವ ಪತ್ತೆಯಾಗಿದೆ.

author-image
Chandramohan
illicit affair suicide

ಮೃತಪಟ್ಟ ಯಶೋಧಾ ಹಾಗೂ ಅಡಿಟರ್ ವಿಶ್ವನಾಥ್‌

Advertisment
  • ವಿವಾಹಿತ ಮಹಿಳೆಗೆ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ
  • ಬಾಯ್ ಫ್ರೆಂಡ್ ವಿಶ್ವನಾಥ್ ಇದ್ದ ಲಾಡ್ಜ್ ಗೆ ಹೋದ ಯಶೋಧ ಅಲ್ಲೇ ನಿಗೂಢ ಸಾವು
  • ಯಶೋಧ ಆತ್ಮಹತ್ಯೆ ಮಾಡಿಕೊಂಡರಾ? ಕೊಲೆಯೋ?
  • ತನಿಖೆ ನಡೆಸಿ ಸತ್ಯ ಬಯಲಿಗೆಳೆಯುವ ಹೊಣೆ ಪೊಲೀಸರ ಮ್ಯಾಲೆ


ಬೆಂಗಳೂರಲ್ಲೊಂದು ವಿಚಿತ್ರವಾದ ಸಾವು ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧದ ಭಾಂಧವ್ಯದಿಂದ ಮಹಿಳೆ ಅನುಮಾನಸ್ಪದ ಸಾವನ್ನಪ್ಪಿದ್ದಾರೆ. 38 ವರ್ಷದ ಯಶೋಧ ಎಂಬ ವಿವಾಹಿತ ಮಹಿಳೆ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.  ಅಕ್ಟೋಬರ್ 2 ರಂದು ಸಂಜೆ 7 ಗಂಟೆಗೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.  ಬೆಂಗಳೂರಿನ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿರುವ  ಓಯೋ ಚಾಂಪಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಘಟನೆ ನಡೆದಿದೆ. 
ಯಶೋಧಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಆದರೇ,  ಆಡಿಟರ್ ವಿಶ್ವನಾಥ್ ಎಂಬುವನ ಜೊತೆಗೆ 8 ವರ್ಷದಿಂದ ಅನೈತಿಕ ಸಂಬಂಧ  ಯಶೋಧ ಹೊಂದಿದ್ದರು.  ಅಡಿಟರ್  ವಿಶ್ವನಾಥ್ ಗೂ ವಿವಾಹವಾಗಿದ್ದು ಹೆಂಡತಿ ಮಕ್ಕಳಿದ್ದಾರೆ. ಯಶೋಧ ತನ್ನ ಸ್ನೇಹಿತೆಯನ್ನು ವಿಶ್ವನಾಥ್ ಗೆ ಪರಿಚಯಿಸಿದ್ದಳು. ಯಶೋಧ ಸ್ನೇಹಿತೆ ಜೊತೆಗೂ ಕದ್ದು ಮುಚ್ಚಿ ವಿಶ್ವನಾಥ್  ಚೆಲ್ಲಾಟ ಆಡುತ್ತಿದ್ದ. ಯಶೋಧ ಸ್ನೇಹಿತೆ ಜೊತೆಗೆ ಓಯೋ ಚಾಂಪಿಯನ್ ಕಂಫರ್ಟ್‌ ಗೆ ವಿಶ್ವನಾಥ್ ಹೋಗಿದ್ದ. ಈ ವಿಚಾರ ತಿಳಿದ ಯಶೋಧ ತಾನು ಕೂಡ ಅದೇ ಲಾಡ್ಜ್ ಗೆ ಹೋಗಿ ವಿಶ್ವನಾಥ್ ಹಾಗೂ ಆಕೆಯ ಸ್ನೇಹಿತೆ ಉಳಿದುಕೊಂಡಿದ್ದ ರೂಮು ಎದುರಿನ ರೂಮು ಅನ್ನೇ ಬಾಡಿಗೆ ಪಡೆದಿದ್ದಳು. ಲಾಡ್ಜ್ ನಲ್ಲಿ ಯಶೋಧ ಕೈಗೆ ಗೆಳೆಯ ಅಡಿಟರ್ ವಿಶ್ವನಾಥ್ ಸಿಕ್ಕಿಬಿದ್ದಿದ್ದಾನೆ. ವಿಶ್ವನಾಥ್ ಜೊತೆಗೆ ಯಶೋಧ ಲಾಡ್ಜ್ ನಲ್ಲಿಯೇ ಜಗಳವಾಡಿದ್ದಾಳೆ. ಬಳಿಕ ನೇಣು  ಬಿಗಿದ ಸ್ಥಿತಿಯಲ್ಲಿ ಯಶೋಧ ಮೃತದೇಹ ಪತ್ತೆಯಾಗಿದೆ.

ILLICIT RELATIONSHIP DEATH

ಲಾಡ್ಜ್ ನಲ್ಲಿ ಮೃತಪಟ್ಟ ಯಶೋಧ



ಬೆಂಗಳೂರಿನ  ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಈ ಸಾವಿನ ಬಗ್ಗೆ ಕೇಸ್ ದಾಖಲಾಗಿದೆ. ಈ ಸಾವಿನ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. 
ಬೆಂಗಳೂರಿನಲ್ಲಿ ಯುವಕನೊಂದಿಗೆ  ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಕೆಲ ತಿಂಗಳ ಹಿಂದೆ ಬಾಯ್ ಫ್ರೆಂಡ್ ಜೊತೆ ಲಾಡ್ಜ್ ಗೆ ಹೋಗಿ,  ಅಲ್ಲೇ ಬಾಯ್ ಫ್ರೆಂಡ್ ನಿಂದ ಕೊಲೆಯಾಗಿದ್ದರು.  ಈಗ ಬಾಯ್ ಫ್ರೆಂಡ್ ಇದ್ದ ಲಾಡ್ಜ್ ಗೆ ಹೋದ ಯಶೋಧ, ಅಲ್ಲೇ ಸಾವನ್ನಪ್ಪಿದ್ದಾರೆ. ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಾರಾ ಇಲ್ಲವೇ ಬೇರೆಯವರು ಯಶೋಧರನ್ನು ಹತ್ಯೆ ಮಾಡಿದ್ದಾರಾ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕಾಗಿದೆ.

BANGALORE POLICE COMMISSIONER OFFICE


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

ILLICIT RELATIONSHIP ENDED IN WOMEN DEATH
Advertisment