/newsfirstlive-kannada/media/media_files/2025/08/16/operation-sindhoor-damages022-2025-08-16-14-42-19.jpg)
ಭಾರತವು ಪಾಕಿಸ್ತಾನದ ಮೇಲೆ ಅಪರೇಷನ್ ಸಿಂಧೂರ್ ನಡೆಸಿದ ಮೂರು ತಿಂಗಳ ಬಳಿಕ ಪಾಕಿಸ್ತಾನವು 13 ಮಿಲಿಟರಿ ಸಿಬ್ಬಂದಿ ಸೇರಿದಂತೆ 50 ಮಂದಿ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸಫ್ ಅಪರೇಷನ್ ಸಿಂಧೂರ್ ದಾಳಿಯ ವೇಳೆ ಸಾವನ್ನಪ್ಪಿದ್ದಾಗಿ ಖಚಿತಪಡಿಸಿದೆ. ಭಾರತವು ಪಾಕಿಸ್ತಾನದ ಬೋಲಾರಿ ಏರ್ ಬೇಸ್ ಮೇಲೆ ದಾಳಿ ನಡೆಸಿತ್ತು. ಆಗ ಉಸ್ಮಾನ್ ಯೂಸಫ್ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಈಗ ಉಸ್ಮಾನ್ ಯೂಸಫ್ ಗೆ ಮರಣೋತ್ತರವಾಗಿ ಪ್ರೆಸಿಡೆಂಟ್ ಅವಾರ್ಡ್ ನೀಡಲಾಗಿದೆ. ಪಾಕಿಸ್ತಾನದ ಅಧ್ಯಕ್ಷರ ನಿವಾಸದಲ್ಲಿ ವಾರ್ಷಿಕ ಅವಾರ್ಡ್ ನೀಡುವ ವೇಳೆಯಲ್ಲಿ ಅಪರೇಷನ್ ಸಿಂಧೂರ್ ವೇಳೆ ಉಸ್ಮಾನ್ ಯೂಸಫ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಭಾರತದ ಮಿಲಿಟರಿ ಅಪರೇಷನ್ ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಈಗ ಪಾಕಿಸ್ತಾನ ಸರ್ಕಾರವು ಅವಾರ್ಡ್ ಗಳನ್ನು ನೀಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ರಾಷ್ಟ್ರಾಧ್ಯಕ್ಷರು ಮೃತ ಯೋಧರ ಕುಟುಂಬಕ್ಕೆ ಅವಾರ್ಡ್ ಗಳನ್ನು ನೀಡಿದ್ದಾರೆ.
ಭಾರತವು ಬೋಲಾರಿ ಏರ್ ಬೇಸ್, ನೂರ್ ಖಾನ್, ಸರ್ಗೋದಾ, ಜಾಕೋಬಾಬಾದ್, ಶೋರ್ ಕೋಟ್ ಸೇರಿದಂತೆ 9 ಏರ್ ಬೇಸ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
ಭಾರತವು ಅಪರೇಷನ್ ಸಿಂಧೂರ್ ವೇಳೆ ನೂರಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿತ್ತು. ಮೇ, 7 ರಂದು ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು.
ನೂರ್ ಖಾನ್ ಏರ್ ಬೇಸ್ ಮೇಲೆ ದಾಳಿ ನಡೆಸಿದ್ದಾಗ, ಅಮೆರಿಕಾದ ಟೆಕ್ನಿಷಿಯನ್ ಕೂಡ ಗಾಯಗೊಂಡಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ