/newsfirstlive-kannada/media/media_files/2025/09/16/alliance-university03-2025-09-16-12-59-45.jpg)
ಅಲೈಯನ್ಸ್ ಯೂನಿರ್ವಸಿಟಿ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಭಾಗಿ
ಭಾರತ ಟೆಕ್ನಾಲಜಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿದೆ . ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದೇವೆ ಎಂದು ಯದುವೀರ್ ಒಡೆಯರ್ ಹೇಳಿದರು.
ಆನೇಕಲ್ ಪಟ್ಟಣಕ್ಕೆ ಸಮೀಪದ ಅಲೆಯನ್ಸ್ ಯುನಿವರ್ಸಿಟಿಯಲ್ಲಿ ಆಯೋಜನೆ ಮಾಡಿದ್ದ, ಇಂಟರ್ ನ್ಯಾಷನಲ್ ಸ್ಕೂಲ್ ಲೀಡರ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು . ಗುರು ಶಿಷ್ಯ ಪರಂಪರೆ ಹಾಗೂ ಧರ್ಮಗಳ ಪರಂಪರೆಯ ದೇಶ ನಮ್ಮದಾಗಿದ್ದು ಭಾರತೀಯ ಸಂಸ್ಕೃತಿ ಇಲ್ಲಿನ ನೆಲೆಗಟ್ಟು ನಮ್ಮೆಲ್ಲರನ್ನು ಬೆಸೆದಿದೆ ಎಂದರು.
ತಂತ್ರಜ್ಞಾನ ಪರಂಪರೆ ಮತ್ತು ಶಿಕ್ಷಣ ನಾವೀನ್ಯತೆ ಅಡಿಪಾಯ ಆದರೂ ಸಹ ಅದರ ಶಾಶ್ವತ ಸ್ವರೂಪವನ್ನು ಕಲ್ಪನೆ ಸಹನಶೀಲತೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ರೂಪಿಸುತ್ತದೆ. ಭಾರತೀಯ ತತ್ವಶಾಸ್ತ್ರಗಳ ಪುನರುಜ್ಜೀವನ, ಸ್ವದೇಶಿ ಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯ ಅಗತ್ಯ ಇದೆ ಎಂದು ಹೇಳಿದರು.
ಪಾಶ್ಚಾತ್ಯ ಸಂಸ್ಕೃತಿ ನೋಡುವ ಬದಲು ಭಾರತೀಯ ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಆದಾಗ ನಮ್ಮ ದೇಶ ಸಂಸ್ಕೃತಿ ಇಲ್ಲಿನ ಪರಂಪರೆಗಳು ಹಾಗೂ ಧರ್ಮಗಳು ಉಳಿಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಇಂತಹ ಚರ್ಚೆಗಳು ಸಾಕಷ್ಟು ಉಪಯೋಗಕ್ಕೆ ಬರುತ್ತದೆ, ಉತ್ತಮ ಶಿಕ್ಷಕರು ಹಾಗೂ ಪ್ರಾಂಶುಪಾಲರು ನಮ್ಮಲ್ಲಿ ಇದ್ದಾರೆ. ಇದರ ಸದುಪಯೋಗವನ್ನು ಮಕ್ಕಳು ಕೂಡ ಪಡೆದುಕೊಳ್ಳುವಂತೆ ಆಗಬೇಕು ಎಂದರು.
ಅಲೈಯನ್ಸ್ ವಿಶ್ವವಿದ್ಯಾನಿಲಯದ ಚಾನ್ಸಲರ್ ಅಭಯ್ ಚಬ್ಬಿ ಮಾತನಾಡಿ, ಶಿಕ್ಷಣದಿಂದ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಸೇರಿ ಪ್ರತಿಯೊಂದರಲ್ಲೂ ಬದಲಾವಣೆ ತರಲು ಸಾಧ್ಯ. ಭಾರತ ಯುವ ಶಕ್ತಿಯ ಜೊತೆ ಮುಂದೆ ಸಾಗುತ್ತಿದ್ದು, ಪ್ರಪಂಚವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಭಾರತದ ಯಂಗ್ ಜನರೇಷನ್ ಜೊತೆ ಸಾಗುತ್ತಿದೆ ಎನ್ನುವುದನ್ನ ಅರಿತು ನಾವು ಇನ್ನಷ್ಟು ಗುಣಮಟ್ಟದ ಶಿಕ್ಷಣದ ಜೊತೆಗೆ ಹಳ್ಳಿಯಿಂದ ಪಟ್ಟಣದವರೆಗೂ ಮುಂದೆ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಶಾಲೆಗಳ ಪ್ರಾಂಶುಪಾಲರ ಜೊತೆ ಸಂಸದ ಹಾಗೂ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸುಮಾರು ಒಂದುವರೆ ಗಂಟೆಗಳ ಕಾಲ ಶಿಕ್ಷಕರು ಹಾಗೂ ಯುವ ಸಂಸದರ ನಡುವೆ ಚರ್ಚೆ ನಡೆಯಿತು.
/filters:format(webp)/newsfirstlive-kannada/media/media_files/2025/09/16/alliance-university02-2025-09-16-13-01-24.jpg)
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್
ಭಾರತದಲ್ಲಿ ಸಾಕಷ್ಟು ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ಇದ್ದರೂ ಸಹ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರು ಇದೇ ಕ್ಷೇತ್ರದಲ್ಲಿ ಬೆಳೆಯಲು ಅನುಕೂಲಗಳು ಇಲ್ಲದೆ ವಂಚಿತರಾಗುತ್ತಿದ್ದಾರೆ ಎಂದು ಶಿಕ್ಷಕಿಯೊಬ್ಬರು ಹೇಳಿದರು.
ಇದಕ್ಕೆ ಉತ್ತರಿಸಿದ ಯದುವೀರ್ ಒಡೆಯರ್ ಅವರು ಖೇಲೋ ಇಂಡಿಯಾ ಮೂಲಕ ಭಾರತ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರ ಜೊತೆಗೆ ಕರ್ನಾಟಕ ಸರ್ಕಾರವು ಸಹ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಬೇಕು. ಶಿಕ್ಷಣದಲ್ಲಿ ರಾಜ್ಯ ಸರ್ಕಾರ ಕೆಲವು ಬದಲಾವಣೆಗಳನ್ನು ತರುತ್ತಿದ್ದು ಇದು ಶಿಕ್ಷಣಕ್ಕೆ ಪೂರಕವಾಗಿಲ್ಲ. ಇದನ್ನು ಎಲ್ಲರೂ ಕೂಡ ಪ್ರಶ್ನೆ ಮಾಡಬೇಕು. ಕೇಂದ್ರ ಸರ್ಕಾರ ಕ್ರೀಡೆ ಸೇರಿ ಪ್ರತಿಯೊಂದು ಕ್ಷೇತ್ರಕ್ಕೂ ಉತ್ತಮ ಆದ್ಯತೆ ನೀಡುತ್ತಿದೆ.
ಆನೆ ಮಾನವ ಸಂಘರ್ಷ ತಡೆಯುತ್ತೇವೆ. ಕೊಡಗು ಹಾಗೂ ಕನಕಪುರ ಸೇರಿದಂತೆ ಆನೇಕಲ್ ಭಾಗದಲ್ಲಿ ಆನೆ ಮಾನವರ ಸಂಘರ್ಷ ಪದೇಪದೇ ನಡೆಯುತ್ತಿದೆ. ಬೆಂಗಳೂರ ಗ್ರಾಮಾಂತರ ಸಂಸದರು ಹಾಗೂ ನಾವು ಸೇರಿ ಇದಕ್ಕೆ ಕೇಂದ್ರದಲ್ಲಿ ಚರ್ಚೆ ಮಾಡಿದ್ದು ರೈಲ್ವೆ ಭಾರಿ ಸುರಕ್ಷತೆಗೆ ಆದ್ಯತೆ ನೀಡಲು ಮನವಿ ಮಾಡಿದ್ದೇವೆ.
ಶೂನ್ಯ ಬಡ್ಡಿ ದರದಲ್ಲಿ ಸಾಲಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಕೊಡಗು, ಸಕಲೇಶಪುರ, ದಕ್ಷಿಣ ಕನ್ನಡ ಭಾಗದಲ್ಲಿ ಪೆಪ್ಪರ್ ಅನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಇದಕ್ಕೆ ರೈತರಿಗೆ ಸಹಾಯ ಆಗಬೇಕು ಎನ್ನುವ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಂಡಿದ್ದೇವೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಲ್ಲಿ ಬೇರೆ ಬೇರೆ ಪಕ್ಷಗಳು ಇದ್ದಾಗ ಸಂಘರ್ಷ ಸಾಮಾನ್ಯ. ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಂಘರ್ಷ ಹಾಗೂ ವಿರೋಧಗಳು ವ್ಯಕ್ತ ಆಗುವುದು ಸಾಮಾನ್ಯ. ಆದರೆ ನಾವು ಜನರ ಪರವಾದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ರಾಜ್ಯದ ಜೊತೆಯೂ ಕೈಜೋಡಿಸಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ.
ಭಾನು ಮುಷ್ತಾಕ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದ್ದರು. 2023 ವೇದಿಕೆಯೊಂದರಲ್ಲಿ ನೀಡಿರುವ ಹೇಳಿಕೆ ಖಂಡನಿಯ . ಅದು ಮತ್ತೆ ಮೈಸೂರಿನಲ್ಲಿ ಮರುಕಳಿಸಬಾರದು, ಈ ನಿಟ್ಟಿನಲ್ಲಿ ಈಗಾಗಲೇ ನಾನು ಮಾತನಾಡಿದ್ದು ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us