ನೇಪಾಳದ ಹಿಂಸಾಚಾರದ ವೇಳೆ ಭಾರತದ ಮಹಿಳೆ ದಾರುಣ ಸಾವು, ಹೋಟೇಲ್ ನಿಂದ ಜಿಗಿದು ಮಹಿಳೆ ಸಾವು, ಪತಿಗೆ ಗಾಯ

ನೇಪಾಳದ ರಾಜಧಾನಿ ಕಠ್ಮುಂಡುವಿನಲ್ಲಿ ನಡೆದ ಹಿಂಸಾಚಾರದಲ್ಲಿ ಭಾರತದ ಮಹಿಳೆ ರಾಜೇಶ ಗೋಲಾ ಸಾವನ್ನಪ್ಪಿದ್ದಾರೆ. ಹಯಾತ್ ರೀಜೇನ್ಸಿ ಹೋಟೇಲ್‌ ಗೆ ಬೆಂಕಿ ಹಚ್ಚಲಾಗಿತ್ತು. ಹೋಟೇಲ್ ನಲ್ಲಿದ್ದ ರಾಜೇಶ ಗೋಲಾ ನಾಲ್ಕನೇ ಪ್ಲೋರ್ ನಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

author-image
Chandramohan
NEPAL INDIAN RAJESH GOLA DEATH

ರಾಜೇಶ್ ಗೋಲಾ , ಪತಿ ರಾಮವೀರ್ ಸಿಂಗ್ ಗೋಲಾ

Advertisment
  • ನೇಪಾಳ ಹಿಂಸಾಚಾರದಲ್ಲಿ ಭಾರತದ ಮಹಿಳೆ ಸಾವು
  • ಹೋಟೇಲ್ ನಿಂದ ಜಂಪ್ ಮಾಡಿ ಪ್ರಾಣ ಬಿಟ್ಟ ಮಹಿಳೆ ರಾಜೇಶ ಗೋಲಾ
  • ಹಯಾತ್ ರೀಜೇನ್ಸಿ ಹೋಟೇಲ್ ಗೆ ಬೆಂಕಿ ಹಚ್ಚಿದ್ದ ಯುವಜನತೆ
  • ನೇಪಾಳ ಹಿಂಸಾಚಾರದಲ್ಲಿ 51 ಮಂದಿ ಸಾವು, 1300 ಮಂದಿಗೆ ಗಾಯ

ನೇಪಾಳದ ಕಠ್ಮುಂಡುವಿನಲ್ಲಿರುವ ಪಶುಪತಿನಾಥ ದೇವಾಲಯಕ್ಕೆ  ಹೋಗಿದ್ದ  ಉತ್ತರ ಪ್ರದೇಶದ ಗಾಜಿಯಾಬಾದ್ ಮಹಿಳೆ ಯುವಜನತೆ ನಡೆಸಿದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಿಯಾಬಾದ್‌ನ ರಾಜೇಶ್ ಗೋಲಾ ಮತ್ತು ಪತಿ ರಾಮವೀರಾ ಸಿಂಗ್ ಗೋಲಾ ಸೆಪ್ಟೆಂಬರ್ 7 ರಂದು ನೇಪಾಳಕ್ಕೆ ಹೋಗಿದ್ದರು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ದೊಡ್ಡ ಹೋಟೇಲ್‌ ಹಯಾತ್ ರೀಜೆನ್ಸಿ ಹೋಟೇಲ್ ನಲ್ಲಿ ತಂಗಿದ್ದರು. 
ಆದರೇ, ಸೆಪ್ಟೆಂಬರ್ 9 ರಂದು ನೇಪಾಳದ ಯುವಜನತೆ ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ ಹಯಾತ್ ರೀಜೇನ್ಸಿ ಹೋಟೇಲ್‌ಗೆ ಬೆಂಕಿ ಹಚ್ಚಿದ್ದರು.  ಈ ವೇಳೆ ರಾಜೇಶ ಗೋಲಾ ಮತ್ತು ರಾಮವೀರ್ ಸಿಂಗ್ ಗೋಲಾ ಹೋಟೇಲ್ ನಿಂದ  ಹೊರ ಬಂದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದರು. ರಾಜೇಶ್ ಗೋಲಾ ಮತ್ತು ರಾಮವೀರ್ ಸಿಂಗ್ ಗೋಲಾ ಹೋಟೇಲ್‌ನ ನಾಲ್ಕನೇ ಮಹಡಿಯಲ್ಲಿದ್ದರು. ನಾಲ್ಕನೇ ಮಹಡಿಯವರೆಗೂ ಬೆಂಕಿ ವ್ಯಾಪಿಸಿತ್ತು. ಹೋಟೇಲ್ ನಲ್ಲಿದ್ದ ಎಕ್ಸಿಟ್ ರೂಟ್ ಗಳೆಲ್ಲಾ ಬ್ಲಾಕ್ ಆಗಿದ್ದವು. ಇನ್ನೂ ಹೋಟೇಲ್ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ, ಹೋಟೇಲ್ ಹೊರಗೆ ಹಾಸಿಗೆಗಳನ್ನು ಹಾಕಿ, ಹೋಟೇಲ್ ರೂಮುನ ಕಿಟಕಿಯಿಂದ ಹಾಸಿಗೆ ಮೇಲೆ ಜಂಪ್ ಮಾಡುವಂತೆ ಹೇಳಿದ್ದಾರೆ.  ಬೇರೆ ಯಾವುದೇ ದಾರಿ ಇಲ್ಲದೇ ಜೀವ ಉಳಿಸಿಕೊಳ್ಳಲು 57 ವರ್ಷದ ರಾಜೇಶ ಗೋಲಾ ಹೋಟೇಲ್ ಕಿಟಕಿಯಿಂದ ಕೆಳಗೆ ಹಾಕಿದ್ದ ಹಾಸಿಗೆ ಮೇಲೆ ನಾಲ್ಕನೇ ಮಹಡಿಯಿಂದ ಜಂಪ್  ಮಾಡಿದ್ದಾರೆ. ಇದೇ ರೀತಿ ಪತಿ ರಾಮವೀರ್ ಸಿಂಗ್ ಗೋಲಾ ಕೂಡ ಜಂಪ್ ಮಾಡಿದ್ದಾರೆ. ಆದರೇ, ದುರಾದೃಷ್ಟವಶಾತ್ ರಾಜೇಶ ಗೋಲಾ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪತಿ ರಾಮವೀರ್ ಸಿಂಗ್ ಗೋಲಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬದುಕುಳಿದಿದ್ದಾರೆ. 

NEPAL HYATT HOTEL

ನೇಪಾಳದ ಹಯಾತ್ ರೀಜೇನ್ಸಿ ಹೋಟೇಲ್ 

ಕಿಟಕಿಯಿಂದ ಜಂಪ್ ಮಾಡುವಾಗ ರಾಜೇಶ  ಗೋಲಾ ಪತಿ ರಾಮವೀರ್ ಸಿಂಗ್ ಗೋಲಾರಿಂದ ಸ್ಪಲ್ಪ ದೂರದಲ್ಲಿದ್ದರು.  ನಮ್ಮ ತಂದೆಯ ಜತೆ ಇದ್ದಿದ್ದರೇ, ತಾಯಿ ಕೂಡ ಬದುಕುಳಿಯುತ್ತಿದ್ದರು  ಎಂದು ಪುತ್ರ ವಿಶಾಲ್ ಹೇಳಿದ್ದಾರೆ.
ನೇಪಾಳದಲ್ಲಿ ಯುವಜನತೆ ನಡೆಸಿದ ಹಿಂಸಾತ್ಮಕ ಹೋರಾಟ, ಪ್ರತಿಭಟನೆಯಿಂದ ಇದುವರೆಗೂ 51 ಮಂದಿ ಸಾವನ್ನಪ್ಪಿದ್ದಾರೆ. 1,300 ಮಂದಿ ಗಾಯಗೊಂಡಿದ್ದಾರೆ. 
ಸೋಮವಾರ ಪೊಲೀಸರು ನಡೆದ ಲಾಠಿಚಾರ್ಜ್ ವೇಳೆ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ, ಯುವಜನತೆ ನೇಪಾಳದ ಪಾರ್ಲಿಮೆಂಟ್‌ಗೆ ಬೆಂಕಿ ಹಚ್ಚಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Nepal
Advertisment