ಚೀನಾ ಮೀರಿಸಿದ ಭಾರತದ ಜಿಡಿಪಿ ಬೆಳವಣಿಗೆ ದರ, ಮೊದಲ ತ್ರೈಮಾಸಿಕದಲ್ಲಿ ದಾಖಲೆ ಬೆಳವಣಿಗೆ

ಭಾರತದ ಜಿಡಿಪಿಯು 2025-26ರ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ದರ ದಾಖಲಿಸಿದೆ. ನೆರೆಯ ಚೀನಾದ ಜಿಡಿಪಿಯ ಬೆಳವಣಿಗೆಯ ದರವನ್ನು ಮೀರಿಸಿದೆ. ಜೊತೆಗೆ ಆರ್‌ಬಿಐ ಹೇಳಿದ್ದಕ್ಕಿಂತ ಹೆಚ್ಚಿನ ಬೆಳವಣಿಗೆ ದರ ದಾಖಲಿಸಿರುವುದು ವಿಶೇಷ.

author-image
Chandramohan
india gdp growth rate

ಮೊದಲ ತ್ರೈಮಾಸಿಕದಲ್ಲಿ ಉತ್ತಮ ಜಿಡಿಪಿ ಬೆಳವಣಿಗೆ

Advertisment
  • ಮೊದಲ ತ್ರೈಮಾಸಿಕದಲ್ಲಿ ಶೇ.7.8 ರಷ್ಟು ಜಿಡಿಪಿ ಬೆಳವಣಿಗೆ ದರ ದಾಖಲು
  • ಮೊದಲ ತ್ರೈಮಾಸಿಕದಲ್ಲಿ ಚೀನಾ ಹಿಂದಿಕ್ಕಿದ ಭಾರತ!
  • ಆರ್‌ಬಿಐ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಜಿಡಿಪಿ ದರ ಬೆಳವಣಿಗೆ

ಭಾರತ ಹಾಗೂ ಅಮೆರಿಕಾದ ಮಧ್ಯೆ ಈಗ ತೆರಿಗೆ ಸಮರ ನಡೆಯುತ್ತಿದೆ.  ಬೇರೆ ಬೇರೆ ಆರ್ಥಿಕ ಬಿಕ್ಕಟ್ಟು, ಸಂಕಷ್ಟಗಳ ಮಧ್ಯೆ ಭಾರತೀಯ ಆರ್ಥಿಕತೆಯೂ ಉತ್ತಮ ಸಾಧನೆ ಮಾಡಿದೆ. 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8 ರಷ್ಟು ಬೆಳವಣಿಗೆ ಸಾಧಿಸಿದೆ. 2025ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ಸಾಧಿಸಿರುವುದು ಉತ್ತಮ ಸಾಧನೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಜಿಡಿಪಿ ದಾಖಲಿಸಿದೆ. 
2024ರ ಮೊದಲ ತ್ರೈಮಾಸಿಕದಲ್ಲಿ ಭಾರತದ  ಜಿಡಿಪಿ ಶೇ.6.5 ರಷ್ಟು ಬೆಳವಣಿಗೆ ದಾಖಲಿಸಿತ್ತು. ಈಗ 2025-26ರ ಮೊದಲ ತ್ರೈಮಾಸಿಕದಲ್ಲಿ ಕಳೆದ 5 ತ್ರೈಮಾಸಿಕದಲ್ಲೇ ಅತಿ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. 
ಇನ್ನೂ 2024ರ ಜನವರಿ -ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ.8.4 ರಷ್ಟು ಬೆಳವಣಿಗೆ ದಾಖಲಿಸಿದ್ದೇ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಿನ ಜಿಡಿಪಿ ಬೆಳವಣಿಗೆ.
ಇನ್ನೂ ಈ ವರ್ಷದ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಚೀನಾ ಆರ್ಥಿಕತೆಯು ಶೇ.5.2 ರಷ್ಟು ಬೆಳವಣಿಗೆ ದಾಖಲಿಸಿದೆ. ಹೀಗಾಗಿ ಚೀನಾಗೆ ಹೋಲಿಸಿದರೇ, ಭಾರತದ ಆರ್ಥಿಕತೆಯು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ.




ಭಾರತದ ಈ ಜಿಡಿಪಿಯ ಬೆಳವಣಿಗೆಗೆ ಭಾರತದ ಕೃಷಿ ಮತ್ತು ಸೇವಾ ವಲಯದ ಬೆಳವಣಿಗೆಯೇ ಮುಖ್ಯ ಕಾರಣ. ಸೇವಾ ವಲಯವು ಶೇ.9.3 ರಷ್ಟು ಬೆಳವಣಿಗೆ ದಾಖಲಿಸಿದ್ದರೇ, ಕೃಷಿ ವಲಯ ಶೇ.3.7 ರಷ್ಟು ಬೆಳವಣಿಗೆ ದಾಖಲಿಸಿದೆ. 
ಇನ್ನೂ ಈ ತಿಂಗಳ ಆರಂಭದಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ.6.5 ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಊಹಿಸಿತ್ತು. ಆರ್‌ಬಿಐ ಊಹೆಯನ್ನು ಮೀರಿ ಜಿಡಿಪಿ ಬೆಳವಣಿಗೆ ಸಾಧಿಸಿರುವುದು ವಿಶೇಷ. 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.6.7 ಹಾಗೂ 3ನೇ ತ್ರೈಮಾಸಿಕದಲ್ಲಿ ಶೇ.6.6 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.6.3 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಆರ್‌ಬಿಐ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

GDP GROWTH RATE
Advertisment