/newsfirstlive-kannada/media/media_files/2025/12/05/indigo-ceo-peter-elbers-2025-12-05-18-49-19.jpg)
ಇಂಡಿಗೋ ಸಿಇಓ ಪೀಟರ್ ಎಲ್ಬರ್ಸ್
ಇಂಡಿಗೋ ಕಂಪನಿಯು ಇಂದು ಒಂದು ಸಾವಿರ ವಿಮಾನ ಸಂಚಾರ ರದ್ದುಗೊಳಿಸಿದೆ. ಇದರಿಂದಾಗಿ ಇಂಡಿಗೋ ಕಾರ್ಯಾಚರಣೆಯಲ್ಲಿ ಬಿಕ್ಕಟ್ಟು ಎದುರಾಗಿದೆ ಎಂಬುದನ್ನು ಕಂಪನಿಯ ಸಿಇಓ ಪೀಟರ್ ಎಲ್ಬರ್ಸ್ ಒಪ್ಪಿಕೊಂಡಿದ್ದಾರೆ. ಇಂಡಿಗೋಗೆ ಇವತ್ತು ಕಾರ್ಯಾಚರಣೆಯ ವಿಷಯದಲ್ಲಿ ಇದು ಕೆಟ್ಟ ದಿನ ಎಂದು ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ಡಿಸೆಂಬರ್ 5ರ ಇಂದು ಒಂದು ಸಾವಿರಕ್ಕೂ ಹೆಚ್ಚು ವಿಮಾನ ಸಂಚಾರ ರದ್ದುಗೊಳಿಸಲಾಗಿದೆ ಎಂಬುದನ್ನು ಪೀಟರ್ ಎಲ್ಬರ್ಸ್ ದೃಢಪಡಿಸಿದ್ದಾರೆ. ಶನಿವಾರವೂ(ಡಿಸೆಂಬರ್ 6, 2025 ) ಬಿಕ್ಕಟ್ಟು ಮುಂದುವರಿಯುವ ಸಾಧ್ಯತೆ ಇದೆ. ಆದರೇ, ನಾಳೆ ಸಾವಿರಕ್ಕಿಂತ ಕಡಿಮೆ ವಿಮಾನ ರದ್ದಾಗುತ್ತಾವೆ ಎಂದು ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ಇಂಡಿಗೋ ಸಾಮಾನ್ಯ ಸ್ಥಿತಿಗೆ ಮರಳಲು ದಿನದ 24 ಗಂಟೆಯೂ ಶ್ರಮಿಸುತ್ತಿದೆ. ಡಿಸೆಂಬರ್ 10 ರಿಂದ 15ರ ನಡುವೆ ವಿಮಾನ ಸಂಚಾರ ಕಾರ್ಯಾಚರಣೆಯೂ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಪೀಟರ್ ಎಲ್ಬರ್ಸ್ ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.
ವಿಮಾನ ಸಂಚಾರ ರದ್ದುನಿಂದ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ರದ್ದತಿ ಮತ್ತು ಅಡಚಣೆಗಳ ವಿಷಯದಲ್ಲಿ ಇಂದು ನಮಗೆ ಅತ್ಯಂತ ಸವಾಲಿನ ದಿನವಾಗಿದೆ" ಎಂದು ಅವರು ಹೇಳಿದರು, ಚೇತರಿಕೆ ಕ್ರಮಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗುರುವಾರವೇ ಸಿಇಓ ಪೀಟರ್ ಎಲ್ಬರ್ಸ್ ವಿಮಾನಯಾನ ಸಂಸ್ಥೆಯು ತನ್ನ ಬದ್ಧತೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡರು.
"ಕಳೆದ ಕೆಲವು ದಿನಗಳು ನಮ್ಮ ಅನೇಕ ಇಂಡಿಗೋ ಗ್ರಾಹಕರು ಮತ್ತು ಸಹೋದ್ಯೋಗಿಗಳಿಗೆ ಕಷ್ಟಕರವಾಗಿತ್ತು. ಕಳೆದ ಕೆಲವು ದಿನಗಳಲ್ಲಿ ನಾವು ಆ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕಾಗಿ ನಾವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇವೆ" ಎಂದು ಅವರು ಸಿಬ್ಬಂದಿಗೆ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/05/flight-ticket-rise-1-2025-12-05-16-45-35.jpg)
ಕಾರ್ಯಾಚರಣೆಯ ಸವಾಲುಗಳ ಸಂಯೋಜನೆಯು ಪರಿಸ್ಥಿತಿಗೆ ಕಾರಣವಾಗಿದೆ ಎಂದು ಪೀಟರ್ ಎಲ್ಬರ್ಸ್ ಹೇಳಿದ್ದಾರೆ. "ಸಣ್ಣ ತಂತ್ರಜ್ಞಾನದ ದೋಷಗಳು, ವೇಳಾಪಟ್ಟಿ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಮತ್ತು ಹೊಸದಾಗಿ ಬಿಡುಗಡೆಯಾದ FDTL ಮಾನದಂಡಗಳ ಅನುಷ್ಠಾನ ಸೇರಿದಂತೆ ಹಲವಾರು ಕಾರ್ಯಾಚರಣೆಯ ಸವಾಲುಗಳು ನಮ್ಮ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವಂತೆ ನಕಾರಾತ್ಮಕವಾಗಿ ಸಂಯೋಜಿಸಲ್ಪಟ್ಟಿದೆ" ಎಂದು ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/05/indigo-ceo-peter-elbers-1-2025-12-05-18-51-05.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us